Site icon Vistara News

Paris Olympics: ಆರ್ಚರಿ ಪ್ರೀ ಕ್ವಾರ್ಟರ್‌ನಲ್ಲಿ ನಾಳೆ ಭಾರತದ ದೀಪಿಕಾ ಕುಮಾರಿ-ಭಜನ್ ಕೌರ್ ಕಣಕ್ಕೆ

Paris Olympics

Paris Olympics: India's Deepika Kumari-Bhajan Kaur to compete in Acherry pre-quarters tomorrow

ಬೆಂಗಳೂರು: ಈ ಬಾರಿಯ ಒಲಿಂಪಿಕ್ಸ್​ನಲ್ಲಿ(Paris Olympics) ಪದಕ ಗೆಲ್ಲುವ ಭರವಸೆ ಮೂಡಿಸಿರುವ ಭಾರತದ ಸ್ಟಾರ್‌ ಬಿಲ್ಗಾರ್ತಿಯರಾದ ದೀಪಿಕಾ ಕುಮಾರಿ(Deepika Kumari) ಮತ್ತು 18 ವರ್ಷದ ಭಜನ್ ಕೌರ್(bhajan kaur) ನಾಳೆ ನಡೆಯುವ ಮಹಿಳಾ ಸಿಂಗಲ್ಸ್​ ಪ್ರೀ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಪದಕದ ಆಸೆ ಜೀವಂತವಿರಿಸುವ ಇರಾದೆಯೊಂದಿಗೆ ಕಣಕ್ಕಿಳಿಯಲಿದ್ದಾರೆ. ದೀಪಿಕಾ ಕುಮಾರಿ ಜರ್ಮನಿಯ 13 ಶ್ರೇಯಾಂಕದ ಮೈಕಲ್‌ ಕ್ರೋಪೆನ್‌ ಸವಾಲು ಎದುರಿಸಿದರೆ,  ಭಜನ್ ಕೌರ್ ಇಂಡೋನೇಷ್ಯಾದ ಡಯಾನಂದ ಚೋರುನಿಸಾ ವಿರುದ್ಧ ಸೆಣಸಾಡಲಿದ್ದಾರೆ.

ಬುಧವಾರ ನಡೆದಿದ್ದ ಎಲಿಮಿನೇಷನ್‌ ಸುತ್ತಿನ ಮೊದಲ ಪಂದ್ಯದಲ್ಲಿ ದೀಪಿಕಾ ಅವರು ಎಸ್ಟೋನಿಯಾದ ರೀನಾ ಪರ್ನಾಟ್‌ ವಿರುದ್ಧ 6-5(29-28, 26-27, 27-27, 24-27, 30-27) ಅಂತರದಿಂದ ಗೆಲುವು ಸಾಧಿಸಿ ದ್ವಿತೀಯ ಸುತ್ತಿಗೆ ಪ್ರವೇಶ ಪಡೆದಿದ್ದರು. ಈ ಸುತ್ತಿನಲ್ಲಿ ನೆದರ್ಲ್ಯಾಂಡ್ಸ್​ನ ಕ್ವಿಂಟಿ ರೋಫೆನ್ ಅವರನ್ನು 6-2 ಅಂತರದಿಂದ ಹಿಮ್ಮೆಟ್ಟಿಸಿ ಪ್ರೀ ಕ್ವಾರ್ಟರ್​ಗೆ ಪ್ರವೇಶ ಪಡೆದಿದ್ದರು.

ಇದನ್ನೂ ಓದಿ Paris Olympics: ಆರ್ಚರಿ ಮಿಶ್ರ ತಂಡ ಸ್ಪರ್ಧೆಯಲ್ಲಿ ಕ್ವಾರ್ಟರ್​ ಫೈನಲ್​ ತಲುಪಿದ ಧೀರಜ್‌- ಅಂಕಿತಾ ಜೋಡಿ

ಕಳೆದ ಟೋಕಿಯೊ ಒಲಿಂಪಿಕ್ಸ್​ನಲ್ಲಿ ದೀಪಿಕಾ ಕುಮಾರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕೊರಿಯಾದ ಆಟಗಾರ್ತಿಯ ವಿರುದ್ಧ ದೀಪಿಕಾ ಸೋಲನುಭವಿಸಿ ನಿರಾಸೆ ಎದುರಿಸಿದ್ದರು. 2012ರ ಲಂಡನ್ ಒಲಿಂಪಿಕ್ಸ್ ನಲ್ಲಿ ಮೊದಲ ಸುತ್ತಿನಲ್ಲಿ, ರಿಯೋ ಒಲಿಂಪಿಕ್ಸ್​ನಲ್ಲಿ ಪ್ರಿ ಕ್ವಾರ್ಟರ್ ಫೈನಲ್​ನಲ್ಲಿ ಮುಗ್ಗರಿಸಿದ್ದರು. ಆದರೆ, ಈ ಬಾರಿ ಪದಕ ಗೆಲ್ಲುವ ಆತ್ಮವಿಶ್ವಾಸದಲ್ಲಿದ್ದಾರೆ.

ಭಜನ್ ಕೌರ್ ಅವರು ಮಂಗಳವಾರ ನಡೆದಿದ್ದ ರೀಕರ್ವ್ ವೈಯಕ್ತಿಕ ವಿಭಾಗದದಲ್ಲಿ 18 ವರ್ಷದ ಭಜನ್ ಕೌರ್ ಮೊದಲ ಸುತ್ತಿನಲ್ಲಿ ಇಂಡೋನೇಷ್ಯಾದ ಕಮಲ್ ಸೈಫಾ ವಿರುದ್ದ 7-3 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿ, ಆ ಬಳಿಕ ನಡೆದ 2ನೇ ಸುತ್ತಿನಲ್ಲಿ ಪೋಲೆಂಡ್‌ನ ಮೈಜೊರ್ ರನ್ನು 6-0ರಲ್ಲಿ ಮಣಿಸಿ ಪ್ರಿ ಕ್ವಾರ್ಟರ್‌ಗೆ ಲಗ್ಗೆಯಿಟ್ಟಿದ್ದರು.

ಕ್ವಾರ್ಟರ್​ ಫೈನಲ್​ ತಲುಪಿದ ಧೀರಜ್‌- ಅಂಕಿತಾ ಜೋಡಿ


ಉತ್ತಮ ಫಾರ್ಮ್ ನಲ್ಲಿರುವ ಧೀರಜ್‌ ಬೊಮ್ಮದೇವರ(Dhiraj Bommadevara) ಮತ್ತು ಅಂಕಿತಾ ಭಕತ್‌(Ankita Bhakat) ಅವರು ಪ್ಯಾರಿಸ್‌ ಒಲಿಂಪಿಕ್ಸ್‌ನ(Paris Olympics) ಆರ್ಚರಿ ಕ್ರೀಡೆಯ ಮಿಶ್ರ ತಂಡದ 16ನೇ ಸುತ್ತಿನ ಪಂದ್ಯದಲ್ಲಿ ಇಂಡೋನೇಷ್ಯಾವನ್ನು 5-1 (37-36, 38-38, 38-37) ಅಂತದಿಂದ ಮಣಿಸಿ ಕ್ವಾರ್ಟರ್​​ ಫೈನಲ್ ಪ್ರವೇಶಿಸಿದೆ. ಈ ಮೂಲಕ ಆರ್ಚರಿಯಲ್ಲಿ ಒಲಿಂಪಿಕ್‌ ಪದಕ ಗೆಲ್ಲುವ ವಿಶ್ವಾಸ ಮೂಡಿಸಿದೆ.

ಚೊಚ್ಚಲ ಒಲಿಂಪಿಕ್ಸ್‌ನಲ್ಲಿ ಭಾಗವಹಿ ಸುತ್ತಿರುವ ಧೀರಜ್‌ ಮತ್ತು ಅಂಕಿತಾ ಅವರ ಅಮೋಘ ನಿರ್ವಹಣೆಯಿಂದ ಭಾರತ ಕ್ವಾರ್ಟರ್‌ಫೈನಲಿಗೆ ಪ್ರವೇಶಿಸಿದೆ. 26ರ ಹರೆಯದ ಅಂಕಿತಾ ಅಮೋಘ ಪ್ರದಶನ ತೋರುವ ಮೂಲಕ ಹಲವು ಬಾರಿ 10 ಅಂಕ್ಕೆ ಗುರಿ ಇರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಕ್ವಾರ್ಟರ್‌ ಫೈನಲ್‌ ಪಂದ್ಯ ಇಂದು ಸಂಜೆ 5.40ಕ್ಕೆ ನಡೆಯಲಿದೆ.

Exit mobile version