Site icon Vistara News

Paris Olympics: ಒಂದೇ ವಾರಕ್ಕೆ ಬಣ್ಣ ಕಳೆದುಕೊಂಡ ​ಒಲಿಂಪಿಕ್ಸ್​ ಪದಕ!

Paris Olympics: "Like It Went To War": Olympic Skateboarder Questions Quality Of His Medal

ಪ್ಯಾರಿಸ್‌: ಈ ಬಾರಿಯ ಪ್ಯಾರಿಸ್​ ಒಲಿಂಪಿಕ್ಸ್​ ಹಲವು ವಿವಾದಗಳಿಂದ ಸುದ್ದಿಯಾಗಿತ್ತು. ಇದೀಗ ವಿಜೇತರಿಗೆ ನೀಡಲಾದ ಪದಕಗಳ ಗುಣಮಟ್ಟ ಅತ್ಯಂತ ಕಳಪೆ ಮಟ್ಟದ್ದಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಅಮೆರಿಕದ ಸ್ಕೇಟ್‌ಬೋರ್ಡರ್‌ ನೈಜಾ ಹ್ಯೂಸ್ಟನ್‌(Nyjah Huston) ತಮ್ಮ ಕಂಚಿನ ಪದಕ ಕೆಲವೇ ದಿನಗಳಲ್ಲಿ ಮಾಸಿ ಹೋಗಿದೆ ಎಂದು ಆರೋಪಿಸಿದ್ದಾರೆ.

“ಕಂಚಿನ ಪದಕದ ಬಣ್ಣ ಈಗಾಗಲೇ ಮಾಸಿ ಹೋಹಿದೆ. ಪದಕದ ಮೇಲ್ಪದರ ಕಿತ್ತು ಬರಲಾರಂಭಿಸಿದೆ. ಇದು ನಾವು, ನೀವು ನಿರೀಕ್ಷಿಸಿದಷ್ಟು ಉತ್ತಮ ಗುಣಮಟ್ಟವನ್ನು ಹೊಂದಿಲ್ಲ. ಹಿಂದೆಂದು ಕೂಡ ಈ ರೀತಿಯ ಒಲಿಂಪಿಕ್‌ ಪದಕಗಳು ಕಂಡಿಲ್ಲ. ಇದು ಅತ್ಯಂತ ಕಳಪೆ ಗುಣಮಟ್ಟವನ್ನು ಹೊಂದಿದೆ. ಇದನ್ನು ಜೋಪಾನವಾಗಿ ಇಡುವುದು ಹೇಗೆ ಎಂದು ತಿಳಿಯುತ್ತಿಲ್ಲ” ಎಂದು ನೈಜಾ ಹ್ಯೂಸ್ಟನ್‌ ವಿಡಿಯೊ ಮೂಲಕ ಹೇಳಿದ್ದಾರೆ.

ಪದಕದ ಜತೆ ಕಬ್ಬಿಣ ವಿಶ್ರಣ

ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ವಿಜೇತರಾದ ಕ್ರಿಡಾಳುಗಳಿಗೆ ನೀಡಲಾದ ಪದಕಗಳಲ್ಲಿ ಚಿನ್ನ, ಬೆಳ್ಳಿ ಮತ್ತು ಕಂಚು ಮಾತ್ರವಲ್ಲದೆ ಈ ಬಾರಿ ಕಬ್ಬಿಣವೂ ಸೇರಿತ್ತು. ಪ್ಯಾರಿಸ್ ನಗರದ ಪ್ರಸಿದ್ಧ ಐಫೆಲ್ ಟವರ್​ನ ಕಬ್ಬಿಣದ ತುಂಡುಗಳನ್ನು ಈ ಬಾರಿ ಕ್ರಾಂತಿಕಾರಿಯಾಗಿ ಪದಕದೊಂದಿಗೆ ವಿನ್ಯಾಸಗೊಳಿಸಲಾಗಿತ್ತು. ಐಫೆಲ್ ಟವರ್ ನವೀಕರಣ ಕೆಲಸದ ವೇಳೆ ಕತ್ತರಿಸಲ್ಪಟ್ಟ ಕಬ್ಬಿಣದ ತುಂಡುಗಳನ್ನು ಸಂಗ್ರಹಿಸಿಡಲಾಗಿತ್ತು ಇದನ್ನು ಒಲಿಂಪಿಕ್ಸ್ ಪದಕಗಳಲ್ಲಿ ಬಳಸಲಾಗಿತ್ತು. ಪ್ರತಿ ಪದಕವೂ 18 ಗ್ರಾಂ ಭಾರದ ಕಬ್ಬಿಣದ ತುಂಡನ್ನು ಒಳಗೊಂಡಿತ್ತು. ಇದೇ ಕಬ್ಬಿಣ ವಿಶ್ರಿತ ಮಾಡಿದ ಕಾರಣದಿಂದಲೂ ಪದಕದ ಗುಣಮಟ್ಟ ಕಳೆದುಕೊಂಡಿರುವ ಸಾಧ್ಯತೆ ಇದೆ. ಕೆಲವರು ಈ ಬಾರಿಯ ಚಿನ್ನದ ಪದಕದಲ್ಲಿ ಕೇವಲ ಶೇ.1ರಷ್ಟು ಮಾತ್ರ ಚಿನ್ನ ಇದೆ ಎಂದು ದೂರಿದ್ದಾರೆ.

ಒಲಿಂಪಿಕ್ಸ್​ಗೆ ಇಂದು ತೆರೆ


ಪ್ಯಾರಿಸ್​ನಲ್ಲಿ ನಡೆದ 33ನೇ ಆವೃತ್ತಿಯ ಬೇಸಗೆ ಒಲಿಂಪಿಕ್ಸ್​ಗೆ ಇಂದು(ಭಾನುವಾರ) ಅಧಿಕೃತವಾಗಿ ತೆರೆ ಬೀಳಲಿದೆ. ಕಳೆದ 17 ದಿನಗಳಿಂದ ನಡೆದ ಒಲಿಂಪಿಕ್ಸ್‌ ಕ್ರೀಡಾಕೂಟದ ಸಮಾರೋಪ ಸಮಾರಂಭ ಪ್ಯಾರಿಸ್‌ನ ಹೃದಯ ಭಾಗವಾದ “ಸ್ಟೇಡ್‌ ಡೆ ಫ್ರಾನ್ಸ್‌ ಸ್ಟೇಡಿಯಂ’ನಲ್ಲಿ ನಡೆಯಲಿದೆ. ಭಾರತೀಯ ಕಾಲಮಾನದಂತೆ ರಾತ್ರಿ 12.30ಕ್ಕೆ ಈ ಕಾರ್ಯಕ್ರಮ ಆರಂಭವಾಗಲಿದೆ. ಹಾಕಿ ಆಟಗಾರ ಪಿ.ಆರ್ ಶ್ರೀಜೇಶ್(PR Sreejesh)​ ಮತ್ತು ಅವಳಿ ಕಂಚಿನ ಪದಕ ವಿಜೇತೆ ಶೂಟರ್​ ಮನು ಭಾಕರ್​(Manu Bhaker) ಭಾರದ ಧ್ವಜಧಾರಿಗಳಾಗಿ( India’s Co-Flag Bearer) ಪಥಸಂಚಲನದಲ್ಲಿ ಸಾಗಲಿದ್ದಾರೆ. 

ಇದನ್ನೂ ಓದಿ Paris Olympics: “ಇಂಡಿಯಾ ಹೌಸ್‌”ನಲ್ಲಿ ನೀರಜ್​ ಚೋಪ್ರಾ ಸೇರಿ ಪದಕ ವಿಜೇತರನ್ನು ಗೌರವಿಸಿದ ನೀತಾ ಅಂಬಾನಿ

ಸಮಾರೋಪ ಸಮಾರಂಭದಲ್ಲಿ ಅಮೆರಿಕದ ಖ್ಯಾತ ನಟ ಹಾಗೂ ನಿರ್ಮಾಪಕ ಟಾಮ್‌ ಕ್ರುಯಿಸ್‌ ಇದರಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಮುಂದಿನ ಒಲಿಂಪಿಕ್ಸ್‌ ಕ್ರೀಡಾಕೂಟ ಅಮೆರಿಕದ ಲಾಸ್‌ ಏಂಜಲೀಸ್‌ನಲ್ಲಿ ನಡೆಯುವುದರಿಂದ ಹಾಲಿವುಡ್‌ ತಂಡವೊಂದು ಪಾಲ್ಗೊಳ್ಳುವುದಾಗಿ ವರದಿಯಾಗಿದೆ. ಫ್ರೆಂಚ್‌ ಮತ್ತು ಅಮೆರಿಕನ್‌ ಕಲಾವಿದರು ಜಂಟಿಯಾಗಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಮುಂದಿನ ಒಲಿಂಪಿಕ್‌ ಆತಿಥ್ಯ ವಹಿಸಿದ ದೇಶಕ್ಕೆ ಒಲಿಂಪಿಕ್​​ ಧ್ವಜವನ್ನು ಹಸ್ತಾಂತರಿಸುವ ಪ್ರಕ್ರಿಯೆ ನಡೆಯಲಿದೆ. ಈ ಸಂದರ್ಭದಲ್ಲಿ ಪ್ಯಾರಿಸ್‌ ಹಾಗೂ ಲಾಸ್‌ ಏಂಜಲೀಸ್‌ ನಗರಗಳ ಮೇಯರ್‌ಗಳು ಉಪಸ್ಥಿತರಿರುತ್ತಾರೆ. ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿಯ ಅಧ್ಯಕ್ಷ ಥಾಮಸ್‌ ಬಾಶ್‌ ಅವರು ಪ್ಯಾರಿಸ್‌ ಒಲಿಂಪಿಕ್ಸ್‌ ಮುಕ್ತಾಯವನ್ನು ಘೋಷಿಸಲಿದ್ದಾರೆ.

Exit mobile version