Site icon Vistara News

Paris Olympics: ಶರತ್ ಕಮಲ್​ಗೆ ಮೊದಲ ಪಂದ್ಯದಲ್ಲಿ ಸ್ಲೊವೆನಿಯಾದ ಡೆನಿ ಕೊಜುಲ್ ಎದುರಾಳಿ

PARIS OLYMPICS

PARIS OLYMPICS: Manika Batra vs Anna, Sharath Kamal faces Kozul in singles

ಪ್ಯಾರಿಸ್​: ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ 7 ಚಿನ್ನದ ಪದಕಗಳನ್ನು ಗೆದ್ದಿರುವ ಶರತ್‌ ಕಮಲ್‌ ನಾಯಕತ್ವದ ಟೇಬಲ್ ಟೆನಿಸ್ ತಂಡವು ಶನಿವಾರ ತನ್ನ ಒಲಿಂಪಿಕ್ಸ್​(Paris Olympics) ಅಭಿಯಾನ ಆರಂಭಿಸಲಿದೆ. ನಿನ್ನೆ(ಶುಕ್ರವಾರ) ನಡೆದಿದ್ದ ಒಲಿಂಪಿಕ್ಸ್​(Paris 2024 Olympics) ಉದ್ಘಾಟನ ಸಮಾರಂಭದಲ್ಲಿ ಶರತ್​ ಕಮಲ್‌(Sharath Kamal) ಭಾರತದ ಧ್ವಜಧಾರಿಯಾಗಿ ಕಾಣಿಸಿಕೊಂಡಿದ್ದರು. ಮರು ದಿನವೇ ಸ್ಪರ್ಧೆಗೆ ಇಳಿಯಲಿದ್ದಾರೆ.

ಪುರುಷರ ಸಿಂಗಲ್ಸ್‌ನಲ್ಲಿ ಅನುಭವಿ ಆಟಗಾರ, 41 ವರ್ಷದ ಶರತ್ ಕಮಲ್ ಅವರು ತಮ್ಮ ಮೊದಲ ಪಂದ್ಯದಲ್ಲಿ ಸ್ಲೊವೆನಿಯಾದ ಡೆನಿ ಕೊಜುಲ್ ವಿರುದ್ಧ ಆಡಲಿದ್ದಾರೆ. ಮತ್ತೋರ್ವ ಭಾರತೀಯ ಆಟಗಾರ, ಗುಜರಾತ್‌ನ 31 ವರ್ಷದ ಹರ್ಮಿತ್ ದೇಸಾಯಿ ಜೋರ್ಡಾನ್‌ನ ಝೈದ್ ಅಬೊ ಯಮನ್ ವಿರುದ್ಧ ಸೆಣಸಲಿದ್ದಾರೆ.

ಮಹಿಳೆಯರ ಸಿಂಗಲ್ಸ್‌ನಲ್ಲಿ ಕಾಮನ್‌ವೆಲ್ತ್‌ ಗೇಮ್ಸ್‌ ಚಿನ್ನದ ಪದಕ ವಿಜೇತೆ, ಈ ಬಾರಿಯ ಪದಕ ಭರಸೆಯ ಆಟಗಾರ್ತಿಯಾಗಿ ಗುರುತಿಸಿಕೊಂಡಿರುವ ಮಣಿಕಾ ಬಾತ್ರಾ ಅವರು ಗ್ರೇಟ್‌ ಬ್ರಿಟನ್‌ನ ಅನಾ ಹರ್ಸೆ ವಿರುದ್ಧ ಸೆಣಸಾಟ ನಡೆಸಲಿದ್ದಾರೆ. ಪಂದ್ಯಾವಳಿ ಆರಂಭಕ್ಕೂ ಮುನ್ನವೇ ಬಾತ್ರ ಕಳೆದ ಬಾರಿಯ ಟೋಕಿಯೊ ಒಲಿಂಪಿಕ್ಸ್​ ತಪ್ಪನ್ನು ಇಲ್ಲಿ ಮರುಕಳಿಸಲ್ಲ ಎಂದು ಹೇಳುವ ಮೂಲಕ ಪದಕ ಗೆಲ್ಲುವು ವಿಶ್ವಾಸ ವ್ಯಕ್ತಪಡಿಸಿದ್ದರು. ಟೋಕಿಯೊ ಒಲಿಂಪಿಕ್ಸ್‌ನಲ್ಲಿ 32ರ ಘಟ್ಟದದ ಪಂದ್ಯದಲ್ಲಿ ಸೋಲು ಕಂಡಿದ್ದರು.

ಇದನ್ನೂ ಓದಿ Paris Olympics: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಮೊದಲ ಡೋಪಿಂಗ್‌ ಪ್ರಕರಣ ಪತ್ತೆ; ಜೂಡೊಪಟು ತಾತ್ಕಾಲಿಕ ಅಮಾನತು

ಟೇಬಲ್ ಟೆನಿಸ್​


ಪುರುಷರ ಸಿಂಗಲ್ಸ್: ಶರತ್ ಕಮಲ್, ಹರ್ಮೀತ್ ದೇಸಾಯಿ

ಮಹಿಳೆಯರ ಸಿಂಗಲ್ಸ್: ಮಾಣಿಕಾ ಬಾತ್ರಾ, ಶ್ರೀಜಾ ಅಕುಲಾ. (ಸಂಜೆ 6:30 ರಿಂದ)

ಪುರುಷರ ತಂಡ ವಿಭಾಗದಲ್ಲಿ ಶರತ್ ಕಮಲ್, ದೇಸಾಯಿ ಮತ್ತು ಮಾನವ್ ಠಕ್ಕರ್ ಕಣಕ್ಕಿಳಿದರೆ, ಮಹಿಳೆಯರ ತಂಡದಲ್ಲಿ ಮಣಿಕಾ, ಶ್ರೀಜಾ ಅಕುಲಾ ಹಾಗೂ ಕರ್ನಾಟಕದ ಅರ್ಚನಾ ಕಾಮತ್ ಸ್ಪರ್ಧಿಸಲಿದ್ದಾರೆ. ಜಿ. ಸತ್ಯನ್, ಐಹಿಕಾ ಮುಖರ್ಜಿ ಮೀಸಲು ಆಟಗಾರರಾಗಿದ್ದಾರೆ. ಶರತ್ ಕಮಲ್ ಅವರಿಗೆ ಇದು ಬಹುತೇಕ ಕೊನಯ ಒಲಿಂಪಿಕ್ಸ್​ ಟೂರ್ನಿಯಾಗಿದೆ. ಹೀಗಾಗಿ ಅವರು ಐತಿಹಾಸಿಕ ಪದಕ ಗೆದ್ದು ತಮ್ಮ ಕ್ರೀಡಾ ವೃತ್ತಿ ಜೀವನನ್ನು ಸ್ಮರಣೀಯಗೊಳಿಸಲಿ ಎನ್ನುವುದು ಭಾರತೀಯರ ಹಾರೈಕೆ.

ಶೂಟಿಂಗ್​ನಲ್ಲಿ ಭಾರತ ಇಂದು ಒಂದು ಪದಕ್ಕೆ ಸ್ಪರ್ಧಿಸಲಿದ್ದು, ಪದಕ ಗೆಲ್ಲುವ ನಿರೀಕ್ಷೆಯೊಂದನ್ನು ಇಡಲಾಗಿದೆ. 10 ಮೀ. ಏರ್​ ರೈಫಲ್​ ಮಿಶ್ರ ತಂಡ ವಿಭಾಗದಲ್ಲಿ ಸಂದೀಪ್​ ಸಿಂಗ್​-ಇಲವೆನಿಲ್​ ವಲರಿವನ್​ ಮತ್ತು ಅರ್ಜುನ್​ ಬಬುಟ-ರಮಿತಾ ಜಿಂದಾಲ್ ಕಣಕ್ಕಿಳಿಯಲಿದ್ದಾರೆ. ಗೆದ್ದರೆ, ಶೂಟಿಂಗ್​ ವಿಭಾಗದಲ್ಲಿ 12 ವರ್ಷಗಳ ಪದಕ ಬರ ನೀಗಲಿದೆ. ಶೂಟಿಂಗ್​ ಸ್ಪರ್ಧೆ ಪ್ಯಾರಿಸ್​ನಿಂದ 272 ಕಿಲೋಮೀಟರ್​ ದೂರದಲ್ಲಿರುವ ಚಟೌರೊಕ್ಸ್​ನಲ್ಲಿ ನಡೆಯಲಿದೆ.

ಶೂಟಿಂಗ್

10 ಮೀ ಏರ್ ರೈಫಲ್ ಮಿಶ್ರ ತಂಡ ಅರ್ಹತೆ: ಸಂದೀಪ್ ಸಿಂಗ್, ಅರ್ಜುನ್ ಬಾಬುತಾ, ಎಲವೆನಿಲ್ ವಲರಿವನ್, ರಮಿತಾ ಜಿಂದಾಲ್. ಮಧ್ಯಾಹ್ನ 12:30

10ಮೀ ಏರ್ ಪಿಸ್ತೂಲ್ ಪುರುಷರ ಅರ್ಹತೆ: ಸರಬ್ಜೋತ್ ಸಿಂಗ್, ಅರ್ಜುನ್ ಚೀಮಾ. (ಮಧ್ಯಾಹ್ನ 2 ಗಂಟೆ)

10ಮೀ ಏರ್ ರೈಫಲ್ ಮಿಶ್ರ ತಂಡ ಪದಕ ಸುತ್ತುಗಳು: (ಅರ್ಹತೆ ಪಡೆದರೆ) ಮಧ್ಯಾಹ್ನ 2 ಗಂಟೆ

10 ಮೀ ಏರ್ ಪಿಸ್ತೂಲ್ ಮಹಿಳೆಯರ ಅರ್ಹತೆ ಸುತ್ತು: ರಿದಮ್ ಸಾಂಗ್ವಾನ್, ಮನು ಭಾಕರ್. (ಸಂಜೆ 4 ಗಂಟೆಯಿಂದ)

Exit mobile version