ನವದೆಹಲಿ: ಪ್ಯಾರಿಸ್ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್(Paris Olympics) ಶೂಟಿಂಗ್‌ನಲ್ಲಿ ಅವಳಿ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿರುವ ಭಾರತದ ತಾರಾ ಶೂಟರ್ ಮನು ಭಾಕರ್(Manu Bhaker) ಅವರ ಸಾಧನೆಯ ಹಸಿವು ಇನ್ನೂ ತಣಿದಿಲ್ಲ. ಇಂದು ನಡೆಯುವ ಮಹಿಳೆಯರ 25 ಮೀಟರ್ ಪಿಸ್ತೂಲ್ ಶೂಟಿಂಗ್ ಸ್ಪರ್ಧೆಯಲ್ಲಿ ಕಣಕ್ಕಿಳಿಯಲಿದ್ದಾರೆ. ಈ ಮೂಲಕ ಹ್ಯಾಟ್ರಿಕ್ ಪದಕದ ನಿರೀಕ್ಷೆಯಲ್ಲಿದ್ದಾರೆ.
25 ಮೀಟರ್ ಪಿಸ್ತೂಲ್ ಶೂಟಿಂಗ್, ಮನು ಭಾಕರ್ ಅವರ ನೆಚ್ಚಿನ ಸ್ಪರ್ಧೆಯಾಗಿದೆ. ಈ ವಿಭಾಗದಲ್ಲಿ ಈಗಾಗಲೇ ಅವರು ವಿಶ್ವ ಚಾಂಪಿಯನ್ಶಿಪ್ ಕೂಟದಲ್ಲಿ 1 ಚಿನ್ನ ಮತ್ತು ಬೆಳ್ಳಿ ಗೆದ್ದಿದ್ದಾರೆ. ಶಿಸ್ತುಬದ್ಧವಾಗಿ ಸಾಮರ್ಥ್ಯ ಪ್ರದರ್ಶಿಸುವ ಅವರು ಪದಕ ಗೆಲ್ಲುವ ನಿರೀಕ್ಷೆ ಮಾಡಲಾಗಿದೆ. ಗೆದ್ದರೆ ಭಾರತದ ಪರ ಐತಿಹಾಸಿಕ ಸಾಧನೆ ಮಾಡಲಿದ್ದಾರೆ.
ಬ್ಯಾಡ್ಮಿಂಡನ್ ಸ್ಪರ್ಧೆಯಲ್ಲಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿರುವ ಲಕ್ಷ್ಯ ಸೇನ್ ಇಂದು ಕಣಕ್ಕಿಳಿಯಲಿದ್ದಾರೆ. ಗೆದ್ದರೆ ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಳ್ಳುವ ಮೂಲಕ ಪದಕ ಸುತ್ತಿಗೇರಲಿದ್ದಾರೆ. ಏತನ್ಮಧ್ಯೆ, ಭಾರತದ ಹಾಕಿ ತಂಡ ಕೂಡ ಅಂತಿಮ ಲೀಗ್ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ನಿನ್ನೆ(ಗುರುವಾರ) ನಡೆದಿದ್ದ ಪಂದ್ಯದಲ್ಲಿ ಬೆಲ್ಜಿಯಂ ವಿರುದ್ಧ 2-1 ಅಂತರದ ಸೋಲು ಕಂಡಿತ್ತು.
ಇಂದಿನ ಸ್ಪರ್ಧೆಗಳ ವಿವರ
ಆರ್ಚರಿ
ಆರ್ಚರಿ ಮಿಶ್ರ ತಂಡ ಆರ್ 16 : ಭಾರತ ವಿರುದ್ಧ ಇಂಡೋನೇಷ್ಯಾ – ಮಧ್ಯಾಹ್ನ 1:19ಕ್ಕೆ
ಮಿಶ್ರ ತಂಡ ಕ್ವಾರ್ಟರ್ ಫೈನಲ್ : ಸಂಜೆ 5:45ಕ್ಕೆ
ಮಿಶ್ರ ತಂಡ ಸೆಮಿಫೈನಲ್ – ಸಂಜೆ 7:00ಕ್ಕೆ
ಮಿಶ್ರ ತಂಡ ಪದಕ ಪಂದ್ಯಗಳು – 7:54ಕ್ಕೆ
ಅಥ್ಲೆಟಿಕ್ಸ್
ಮಹಿಳೆಯರ 5000 ಓಟ: ಮೀಟರ್ ರೌಂಡ್ -1 – ಪಾರುಲ್ ಚೌಧರಿ, ಅಂಕಿತಾ ಧ್ಯಾನಿ – ರಾತ್ರಿ 9:40
ಪುರುಷರ ಶಾಟ್ ಪುಟ್ ಅರ್ಹತಾ ಸುತ್ತು: ತಜಿಂದರ್ ಪಾಲ್ ಸಿಂಗ್ ತೂರ್ – 11:40 PM
ಬ್ಯಾಡ್ಮಿಂಟನ್
ಪುರುಷರ ಸಿಂಗಲ್ಸ್ : ಲಕ್ಷ್ಯ ಸೇನ್, 11 :40ಕ್ಕೆ
ಗಾಲ್ಫ್
ಗಾಲ್ಫ್ ಪುರುಷರ ವೈಯಕ್ತಿಕ ಸುತ್ತು 2 : ಮಧ್ಯಾಹ್ನ 12:30
ಹಾಕಿ
ಭಾರತೀಯ ಪುರುಷರ ತಂಡದ ವಿರುದ್ಧ ಆಸ್ಟ್ರೇಲಿಯಾ. ಸಂಜೆ 4:45
ಜೂಡೋ
ಮಹಿಳೆಯರ 78+ ಕೆ.ಜಿ ವಿಭಾಗದ 32ನೇ ಸುತ್ತು; ತುಲಿಕಾ ಮಾನ್ ವಿರುದ್ಧ ಇಡಾಲಿಸ್ ಒರ್ಟಿಜ್
ರೋಯಿಂಗ್
ಪುರುಷರ ಸಿಂಗಲ್ಸ್ ಸ್ಕಲ್ಸ್ ಫೈನಲ್ – ಮಧ್ಯಾಹ್ನ 1:48
ಸೇಲಿಂಗ್ ಮಹಿಳಾ ಡಿಂಗಿ ರೇಸ್ (3,4) – ಮಧ್ಯಾಹ್ನ 3:45ಕ್ಕೆ
ಮಧ್ಯಾಹ್ನ ಪುರುಷರ ಡಿಂಗಿ ರೇಸ್ (3,4) – 7:05 ಸಂಜೆ ಕ್ಕೆ
ಶೂಟಿಂಗ್
ಮಹಿಳೆಯರ 25 ಮೀಟರ್ ಪಿಸ್ತೂಲ್ ಮಹಿಳಾ ಅರ್ಹತಾ ಸುತ್ತು : ಮಧ್ಯಾಹ್ನ 12:30
ಪುರುಷರ ಸ್ಕೀಟ್ ಅರ್ಹತಾ ದಿನ 1 – ಮಧ್ಯಾಹ್ನ 1:00 ಗಂಟೆಗೆ
ಮಹಿಳೆಯರ 25 ಮೀಟರ್ ಪಿಸ್ತೂಲ್, ಅರ್ಹತಾ; ಮಧ್ಯಾಹ್ನ 3:30ಕ್ಕೆ