ಪ್ಯಾರಿಸ್: ಭಾನುವಾರ ನಡೆದಿದ್ದ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸಿಂಗಲ್ಸ್ ವಿಭಾಗದಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಪದಕ ಖಾತೆ ತೆರೆದಿದ್ದ ಶೂಟರ್ ಮನು ಭಾಕರ್, ಇನ್ನೊಂದು ಕಂಚಿನ ಪದಕ ಗೆಲ್ಲುವ ನಿರೀಕ್ಷೆ ಮೂಡಿಸಿದ್ದಾರೆ. ಇಂದು ನಡೆಯುವ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ(Paris Olympics) ಸರಬ್ಜೊತ್ ಸಿಂಗ್ ಜತೆ ಕಂಚಿನ ಪದಕದ ಪ್ಲೇ ಆಫ್ ಸುತ್ತಿನಲ್ಲಿ ಕಣಕ್ಕಿಳಿಯಲಿದ್ದಾರೆ. ಭಾರತ ಇಂದು ಸ್ಪರ್ಧಿಸುವ ಪಂದ್ಯಗಳ ವಿವರ ಇಂತಿದೆ.
ಸೋಮವಾರ ನಡೆದಿದ್ದ ಮಿಶ್ರ ತಂಡ ಸ್ಪರ್ಧೆಯಲ್ಲಿ ಮನು ಭಾಕರ್ ಮತ್ತು ಸರಬ್ಜೊತ್ ಸಿಂಗ್ ಜೋಡಿ ಒಟ್ಟು 580 ಅಂಕ ಸಂಪಾದಿಸಿ ಕಂಚಿನ ಸ್ಪರ್ಧೆಗೆ ಅರ್ಹತೆ ಪಡೆದರು. ಇಂದು ನಡೆಯುವ ಪಂದ್ಯದಲ್ಲಿ ಭಾರತದ ಜೋಡಿ ಕೊರಿಯಾದ ಒಹ್ ಯೆ ಜಿನ್-ಲೀ ವೊನ್ಹೊ ವಿರುದ್ಧ ಸ್ಪರ್ಧೆಗೆ ಇಳಿಯಲಿದ್ದಾರೆ.
ಬ್ಯಾಡ್ಮಿಂಟನ್
ಪುರುಷರ ಸಿಂಗಲ್ಸ್: ಎಚ್.ಎಸ್. ಪ್ರಣಯ್, ಲಕ್ಷ್ಯ ಸೇನ್.
ಮಹಿಳಾ ಸಿಂಗಲ್ಸ್: ಪಿ.ವಿ. ಸಿಂಧು.
ಪುರುಷರ ಡಬಲ್ಸ್: ಚಿರಾಗ್ ಶೆಟ್ಟಿ-ಸಾತ್ವಿಕ್ ಸಾಯಿರಾಜ್.
ಮಹಿಳಾ ಡಬಲ್ಸ್: ತನಿಷಾ ಕ್ರಾಸ್ಟೊ-ಅಶ್ವಿನಿ ಪೊನ್ನಪ್ಪ. (ಮಧ್ಯಾಹ್ನ 12.00)
ಶೂಟಿಂಗ್
ಪುರುಷರ ಟ್ರ್ಯಾಪ್ ಅರ್ಹತಾ ಸುತ್ತು: ಪೃಥ್ವಿರಾಜ್ ತೊಂಡೈಮಾನ್.
ಮಹಿಳಾ ಟ್ರ್ಯಾಪ್ ಅರ್ಹತಾ ಸುತ್ತು: ರಾಜೇಶ್ವರಿ ಕುಮಾರಿ, ಶ್ರೇಯಸಿ ಸಿಂಗ್. (ಮಧ್ಯಾಹ್ನ 12.30)
10 ಮೀ. ಏರ್ ಪಿಸ್ತೂಲ್ ಮಿಶ್ರ ತಂಡ, ಪದಕ ಸುತ್ತು: ಮನು ಭಾಕರ್-ಸರಬ್ಜೋತ್ ಸಿಂಗ್. (ಮಧ್ಯಾಹ್ನ 1.00)
ಪುರುಷರ ಟ್ರ್ಯಾಪ್ ಫೈನಲ್ ( ರಾತ್ರಿ 7.00)
ಟೇಬಲ್ ಟೆನಿಸ್
ಪುರುಷರ ಸಿಂಗಲ್ಸ್: ಹರ್ಮೀತ್ ದೇಸಾಯಿ.
ಮಹಿಳಾ ಸಿಂಗಲ್ಸ್: ಮಣಿಕಾ ಬಾತ್ರಾ, ಶ್ರೀಜಾ ಅಕುಲಾ. (ಮಧ್ಯಾಹ್ನ 1.30)
ರೋಯಿಂಗ್
ಪುರುಷರ ಸಿಂಗಲ್ ಸ್ಕಲ್ ಕ್ವಾರ್ಟರ್ ಫೈನಲ್: ಬಲ್ರಾಜ್ ಪನ್ವರ್. (ಮಧ್ಯಾಹ್ನ 1.40)
ಬಾಕ್ಸಿಂಗ್
ಪುರುಷರ 51 ಕೆಜಿ, 16ರ ಸುತ್ತು: (ಮಧ್ಯಾಹ್ನ 2.30)
ಮಹಿಳೆಯರ 57 ಕೆಜಿ ವಿಭಾಗ, 32ರ ಸುತ್ತು: ಜಾಸ್ಮಿನ್ ಲಾಂಬೋರಿಯ. (ಸಂಜೆ 4.38)
ಈಕ್ವೇಸ್ಟ್ರಿಯನ್
ಡ್ರೆಸ್ಸೇಜ್ ವೈಯಕ್ತಿಕ ಸ್ಪರ್ಧೆ: ಅನುಶ್ ಅಗರ್ವಾಲ್.(ಮಧ್ಯಾಹ್ನ 2.30)
ಇದನ್ನೂ ಓದಿ Paris Olympics 2024 : ಒಲಿಂಪಿಕ್ಸ್ನಲ್ಲಿ ಇಂದು ಭಾರತದ ಅಥ್ಲೀಟ್ಗಳ ಸ್ಪರ್ಧೆಗಳ ವಿವರ ಇಲ್ಲಿದೆ
ಆರ್ಚರಿ
ಪುರುಷರ ಹಾಗೂ ಮಹಿಳೆಯರ ವೈಯಕ್ತಿಕ 64ರ ಸುತ್ತು: ಬಿ. ಧೀರಜ್, ತರುಣ್‌ದೀಪ್ ರಾಯ್, ಪ್ರವೀಣ್ ಜಾಧವ್.
ದೀಪಿಕಾ ಕುಮಾರಿ, ಅಂಕಿತಾ ಭಕತ್, ಭಜನ್ ಕೌರ್.(ಮಧ್ಯಾಹ್ನ 3.30)
ಪುರುಷರ ಹಾಗೂ ಮಹಿಳೆಯರ ವೈಯಕ್ತಿಕ 32ರ ಸುತ್ತು:(ಸಂಜೆ 4.15)
ಹಾಕಿ: ಭಾರತ-ಐರ್ಲೆಂಡ್(ಸಂಜೆ 4.45)