ಪ್ಯಾರಿಸ್: ಶುಕ್ರವಾರವಷ್ಟೇ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಫುಲ್ ಜೋಶ್ನಲ್ಲಿರುವ ಭಾರತ(Hockey India) ಪುರುಷರ ಹಾಕಿ ತಂಡ ಇಂದು ನಡೆಯುವ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ(Paris Olympics) ಗ್ರೇಟ್ ಬ್ರಿಟನ್(hockey india vs great britain) ವಿರುದ್ಧ ಆಡಲಿದೆ. ಈ ಪಂದ್ಯವನ್ನು ಕೂಡ ಗೆದ್ದು ಸೆಮಿಫೈನಲ್ ಪ್ರವೇಶಿಸುವುದು ಹರ್ಮನ್‌ಪ್ರೀತ್ ಸಿಂಗ್ ಪಡೆಯ ಯೋಜನೆಯಾಗಿದೆ.
ಸ್ಯಾರಸ್ಯವೆಂದರೆ ಕಳೆದ ಟೋಕಿಯೊ ಒಲಿಂಪಿಕ್ಸ್ ಕ್ವಾರ್ಟರ್ ಫೈನಲ್ನಲ್ಲೂ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯವನ್ನು ಭಾರತ 3-1 ಗೋಲ್ಗಳ ಅಂತರದಿಂದ ಗೆದ್ದು ಸೆಮಿಪೈನಲ್ ಪ್ರವೇಶಿಸಿತ್ತು. ಈ ಬಾರಿಯೂ ಇದೇ ರೀತಿಯ ಫಲಿತಾಂಶ ಮರುಕಳಿಸಿ ಭಾರತ ಸೆಮಿ ಟಿಕೆಟ್ ಪಡೆಯಲಿ ಎನ್ನುವುದು ಭಾರತೀಯರ ಹಾರೈಕೆ.
ಭಾರತದ ಪ್ರದರ್ಶನ ನೋಡುವಾಗ ಈ ಬಾರಿಯೂ ಪದಕವೊಂದನ್ನು ಗೆಲ್ಲುವುದು ಖಚಿತ ಎನ್ನಬಹುದು. ಕೊನೆಯ ಒಲಿಂಪಿಕ್ಸ್ ಆಡುತ್ತಿರುವ ಗೋಲ್ ಕೀಪರ್ ಪಿ.ಆರ್ ಶ್ರೀಜೇಶ್ ಅವರಂತು ತಮ್ಮ ಎಲ್ಲ ಸಾಮರ್ಥ್ಯವನ್ನು ಪ್ರದರ್ಶಿಸುವ ಮೂಲಕ ತಡೆಗೋಡೆಯಂತೆ ನಿಂತು ಗೋಲ್ಗಳನ್ನು ತಡೆದು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಅದರಲ್ಲೂ 52 ವರ್ಷಗಳ ನಂತರ ಆಸ್ಟ್ರೇಲಿಯಾವನ್ನು ಮಣಿಸಿದ್ದು ಭಾರತಕ್ಕೆ ಹೆಚ್ಚಿನ ಆತ್ಮವಿಶ್ವಾಸ ನೀಡಿದೆ. ಹರ್ಮನ್‌ಪ್ರೀತ್ ಸಿಕ್ಕ ಪೆನಾಲ್ಟಿ ಅವಕಾಶವನ್ನು ಸರಿಯಾಗಿ ಸದುಪಯೋಗಪಡಿಸಿಕೊಂಡರೆ ಉತ್ತಮ. ರಕ್ಷಣಾ ವಿಭಾಗದಲ್ಲಿ ಅಮಿತ್ ರೋಹಿದಾಸ್ ಮತ್ತು ಜರ್ಮನ್‌ಪ್ರೀತ್ ಉತ್ತಮ ಫಾರ್ಮ್ನಲ್ಲಿದ್ದಾರೆ.
ಪಂದ್ಯ ಸಮಯ: ಭಾರತ-ಗ್ರೇಟ್ ಬ್ರಿಟನ್ ಮಧ್ಯಾಹ್ನ 1.30
ಇಂದಿನ ಪ್ರಮುಖ ಪಂದ್ಯಗಳು
ಟೋಕಿಯೊ ಕಂಚಿನ ಪದಕ ವಿಜೇತೆ ಲವ್ಲಿನಾ ಬೊರ್ಗೊಹೈನ್ ಭಾರತದ ನಾಲ್ಕನೇ ಪದಕವನ್ನು ಗಳಿಸಲು ಆಗಸ್ಟ್ 4ರಂದು ಕ್ವಾರ್ಟರ್ ಫೈನಲ್ನಲ್ಲಿ ಚೀನಾದ ಲಿ ಕಿಯಾನ್ ಅವರನ್ನು ಎದುರಿಸಲಿದ್ದಾರೆ. ಲಕ್ಷ್ಯ ಸೇನ್ ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ನಲ್ಲಿ ಸೆಮಿಫೈನಲ್ ನಲ್ಲಿ ವಿಕ್ಟರ್ ಅಕ್ಸೆಲ್ಸೆನ್ ಅವರನ್ನು ಎದುರಿಸುವ ಮೂಲಕ ಪದಕ ಗಳಿಸುವ ಗುರಿ ಹೊಂದಿದ್ದಾರೆ ಭಾರತದ ಯಾವುದೇ ಪುರುಷ ಶಟ್ಲರ್ ಇದುವರೆಗೆ ಫೈನಲ್ ತಲುಪಿಲ್ಲ ಎಂಬುದು ಇಲ್ಲಿ ಗಮನಾರ್ಹ.
ಶೂಟಿಂಗ್ನಲ್ಲಿ ವಿಜಯ್ವೀರ್ ಸಿಧು ಮತ್ತು ಅನೀಶ್ ಭನ್ವಾಲಾ ಅರ್ಹತಾ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಅವರು ಪುರುಷರ 25 ಮೀಟರ್ ರ್ಯಾಪಿಡ್ ಫೈರ್ ಪಿಸ್ತೂಲ್ಗೆ ಅರ್ಹತೆ ಪಡೆಯಲು ಪ್ರಯತ್ನಿಸುತ್ತಾರೆ. ಮಹೇಶ್ವರಿ ಚೌಹಾಣ್ ಮತ್ತು ರೈಜಾ ಧಿಲ್ಲಾನ್ ಮಹಿಳಾ ಸ್ಕೀಟ್ ಅರ್ಹತಾ 2 ನೇ ದಿನಕ್ಕೆ ಮರಳಲಿದ್ದಾರೆ. ಅಥ್ಲೆಟಿಕ್ಸ್ನಲ್ಲಿ ಪಾರುಲ್ ಚೌಧರಿ ಮಹಿಳೆಯರ 3,000 ಮೀಟರ್ ಸ್ಟೀಪಲ್ಚೇಸ್ ರೌಂಡ್ 1 ರಲ್ಲಿ ಭಾಗವಹಿಸಿದರೆ, ಜೆಸ್ವಿನ್ ಆಲ್ಡ್ರಿನ್ ಪುರುಷರ ಲಾಂಗ್ ಜಂಪ್ ಅರ್ಹತೆಯಲ್ಲಿ ಸ್ಪರ್ಧಿಸಲಿದ್ದಾರೆ. ವಿಷ್ಣು ಸರವಣನ್ ಮತ್ತು ನೇತ್ರಾ ಕುಮನನ್ ತಮ್ಮ ತಮ್ಮ ಸೇಯ್ಲಿಂಗ್ ಸ್ಪರ್ಧೆಗಳಲ್ಲಿ ಇನ್ನೂ ಎರಡು ರೇಸ್ ಗಳಿಗೆ ಮರಳಲಿದ್ದಾರೆ.
ಇದನ್ನೂ ಓದಿ Paris Olympics 2024 : ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಇಂದು ಭಾರತದ ಅಥ್ಲೀಟ್ಗಳ ಸ್ಪರ್ಧೆಗಳ ವಿವರ ಇಲ್ಲಿದೆ
ಭಾರತದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ
ಶೂಟಿಂಗ್: 25 ಮೀಟರ್ ರ್ಯಾಪಿಡ್ ಫೈರ್ ಪಿಸ್ತೂಲ್ ಪುರುಷರ ಅರ್ಹತಾ ಹಂತ 1: ವಿಜಯ್ವೀರ್ ಸಿಧು ಮತ್ತು ಅನೀಶ್ ಭನ್ವಾಲಾ – ಮಧ್ಯಾಹ್ನ 12.30ಕ್ಕೆ
25 ಮೀಟರ್ ರ್ಯಾಪಿಡ್ ಫೈರ್ ಪಿಸ್ತೂಲ್ ಪುರುಷರ ಅರ್ಹತಾ ಹಂತ 2: ವಿಜಯ್ವೀರ್ ಸಿಧು ಮತ್ತು ಅನೀಶ್ ಭನ್ವಾಲಾ – ಸಂಜೆ 4.30ಕ್ಕೆ
ಮಹಿಳಾ ಸ್ಕೀಟ್ ಅರ್ಹತಾ (ದಿನ 2): ಮಹೇಶ್ವರಿ ಚೌಹಾಣ್ ಮತ್ತು ರೈಜಾ ಧಿಲ್ಲಾನ್ – ಮಧ್ಯಾಹ್ನ 1 ಗಂಟೆಗೆ
ಮಹಿಳಾ ಸ್ಕೀಟ್ ಫೈನಲ್ (ಅರ್ಹತೆ ಪಡೆದರೆ): ಮಹೇಶ್ವರಿ ಚೌಹಾಣ್ ಮತ್ತು ರೈಜಾ ಧಿಲ್ಲಾನ್ – ಸಂಜೆ 7 ಗಂಟೆಗೆ
ಗಾಲ್ಫ್: ಪುರುಷರ ವೈಯಕ್ತಿಕ ಸ್ಟ್ರೋಕ್ ಪ್ಲೇ (ರೌಂಡ್ 4): ಶುಭಂಕರ್ ಶರ್ಮಾ ಮತ್ತು ಗಗನ್ಜೀತ್ ಭುಲ್ಲರ್ – ಮಧ್ಯಾಹ್ನ 12.30ಕ್ಕೆ
ಹಾಕಿ: ಪುರುಷರ ಕ್ವಾರ್ಟರ್ ಫೈನಲ್: ಭಾರತ ವಿರುದ್ಧ ಗ್ರೇಟ್ ಬ್ರಿಟನ್ – ಮಧ್ಯಾಹ್ನ 1:30ಕ್ಕೆ
ಅಥ್ಲೆಟಿಕ್ಸ್
ಮಹಿಳೆಯರ 3000 ಮೀಟರ್ ಸ್ಟೀಪಲ್ ಚೇಸ್ ರೌಂಡ್ 1: ಪಾರುಲ್ ಚೌಧರಿ – ಮಧ್ಯಾಹ್ನ 1:35ಕ್ಕೆ
ಪುರುಷರ ಲಾಂಗ್ ಜಂಪ್ ಅರ್ಹತೆ: ಜೆಸ್ವಿನ್ ಆಲ್ಡ್ರಿನ್ – ಮಧ್ಯಾಹ್ನ 2:30ಕ್ಕೆ
ಬಾಕ್ಸಿಂಗ್: ಮಹಿಳೆಯರ 75 ಕೆಜಿ ವಿಭಾಗದ ಕ್ವಾರ್ಟರ್ ಫೈನಲ್: ಚೀನಾ ಸ್ಪರ್ಧಿ ವಿರುದ್ಧ ಲೊವ್ಲಿನಾ ಬೊರ್ಗೊಹೈನ್ 3:02ಕ್ಕೆ
ಬ್ಯಾಡ್ಮಿಂಟನ್: ಪುರುಷರ ಸಿಂಗಲ್ಸ್ ಸೆಮಿಫೈನಲ್: ಲಕ್ಷ್ಯ ಸೇನ್ ವಿರುದ್ಧ ವಿಕ್ಟರ್ ಅಕ್ಸೆಲ್ಸನ್ (ಡೆನ್ಮಾರ್ಕ್) – ಮಧ್ಯಾಹ್ನ 3:30ಕ್ಕೆ
ಸೇಯ್ಲಿಂಗ್: ಪುರುಷರ ಡಿಂಗಿ ರೇಸ್ 7 ಮತ್ತು 8: ವಿಷ್ಣು ಸರವಣನ್ – ಮಧ್ಯಾಹ್ನ 3:35ಕ್ಕೆ
ಮಹಿಳಾ ಡಿಂಗಿ ರೇಸ್ 7 ಮತ್ತು 8: ನೇತ್ರಾ ಕುಮನನ್ – ಸಂಜೆ 6:05.ಕ್ಕೆ