Site icon Vistara News

Paris Olympics: ಪರಂಪರೆಗಳ ದೇಶ ಪ್ಯಾರಿಸ್​ನಲ್ಲಿ ನಾಳೆಯಿಂದ ಪ್ರಜ್ವಲಿಸಲಿದೆ ಒಲಿಂಪಿಕ್ಸ್ ಜ್ಯೋತಿ

Paris Olympics

Paris Olympics: Opening ceremony to not take place in stadium but in river

ಪ್ಯಾರಿಸ್​: ಕ್ರೀಡಾಪ್ರೇಮಿಗಳ ಮಹಾಪರ್ವ ಒಲಿಂಪಿಕ್ಸ್​ನಲ್ಲಿ(Paris Olympics) ಕೆಲವು ಸ್ಪರ್ಧೆಗಳು ಈಗಾಗಲೇ ಆರಂಭಗೊಂಡಿದ್ದರೂ ಕೂಡ ಟೂರ್ನಿಯ ಅದ್ಧೂರಿ ಉದ್ಘಾಟನ ಸಮಾರಂಭ ನಾಳೆ(ಶುಕ್ರವಾರ) ಫ್ರಾನ್ಸ್​ನ ಮಹಾನದಿ ಸೀನ್ ಮೇಲೆ ನಡೆಯಲಿದೆ. ಒಲಿಂಪಿಕ್ಸ್​ ಗೇಮ್ಸ್‌ಗಾಗಿಯೇ ಇಲ್ಲಿನ ಸೀನ್‌ ನದಿಯನ್ನು ಸಾರ್ವಜನಿಕ ನಿಧಿಯಿಂದ ಭಾರೀ ಪ್ರಮಾಣದಲ್ಲಿ ಹೂಡಿಕೆ ಮಾಡಿ ಈ ನದಿಯನ್ನು ಸ್ನಾನಮಾಡಲು ಯೋಗ್ಯವೆನಿಸುವ ರೀತಿಯಲ್ಲಿ ಸ್ವಚ್ಛ ಮಾಡಲಾಗಿದೆ. ಭಾರತದ ಧ್ವಜಧಾರಿಯಾಗಿ ಅವಳಿ ಒಲಿಂಪಿಕ್ಸ್​ ಪದಕ ವಿಜೇತೆ ಪಿ.ವಿ ಸಿಂಧು ಟೇಬಲ್ ಟೆನಿಸ್ ಪಟು ಶರತ್ ಕಮಾಲ್ ಜತೆ ಭಾರತದ ಧ್ವಜ ಹಿಡಿದು ಪಥಸಂಚಲನದಲ್ಲಿ ಸಾಗಲಿದ್ದಾರೆ.

ಬೋಟ್‌ಗಳಲ್ಲೇ ಪರೇಡ್‌


ಪ್ಯಾರಿಸ್‌ ಆತಿಥ್ಯದಲ್ಲಿ ನಡೆಯಲಿರುವ 3ನೇ ಒಲಿಂಪಿಕ್ಸ್‌ ಕೀಡಾಕೂಟ ಇದಾಗಿದೆ. ಮೊದಲ ಒಲಿಂಪಿಕ್ಸ್‌ ನಡೆದದ್ದು 1900ರಲ್ಲಿ. ಇದಾದ ಬಳಿಕ 1924ರಲ್ಲಿ ಆತಿಥ್ಯ ವಹಿಸಿತ್ತು. ಇದೀಗ ಬರೋಬ್ಬರಿ 100 ವರ್ಷಗಳ ಬಳಿಕ ಇಲ್ಲಿ ಪ್ಯಾರಿಸ್​ನಲ್ಲಿ ಒಲಿಂಪಿಕ್ಸ್​ ನಡೆಯುತ್ತಿದೆ. ಈ ಬಾರಿಯ ಒಲಿಂಪಿಕ್ಸ್​ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ಒಲಿಂಪಿಕ್ಸ್​ ಇತಿಹಾಸದಲ್ಲೇ ವಿಶೇಷ ಮಹತ್ವ ಪಡೆದಿದೆ. ಇದೇ ಮೊದಲ ಬಾರಿಗೆ ಕ್ರೀಡಾಂಗಣದ ಹೊರಗಡೆ ನಡೆಯುವ ಉದ್ಘಾಟನಾ ಸಮಾರಂಭ ಇದಾಗಿದೆ. 10,500ಕ್ಕೂ ಹೆಚ್ಚು ಅಥ್ಲೀಟ್‌ಗಳು ಪ್ಯಾರಿಸ್‌ನಿಂದ ಸುಮಾರು 6 ಕಿಲೋಮೀಟರ್‌ ವರೆಗೆ ಬೋಟ್‌ಗಳಲ್ಲೇ ಪರೇಡ್‌ ನಡೆಸಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ಪದಕದ ಜತೆ ಕಬ್ಬಿಣ ವಿಶ್ರಣ

ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ವಿಜೇತರಾಗುವ ಕ್ರಿಡಾಳುಗಳಿಗೆ ನೀಡಲಾಗುವ ಪದಕಗಳಲ್ಲಿ ಚಿನ್ನ, ಬೆಳ್ಳಿ ಮತ್ತು ಕಂಚು ಮಾತ್ರವಲ್ಲದೆ ಈ ಬಾರಿ ಕಬ್ಬಿಣವೂ ಇರಲಿದೆ. ಪ್ಯಾರಿಸ್ ನಗರದ ಪ್ರಸಿದ್ಧ ಐಫೆಲ್ ಟವರ್​ನ ಕಬ್ಬಿಣದ ತುಂಡುಗಳನ್ನು ಈ ಬಾರಿ ಕ್ರಾಂತಿಕಾರಿಯಾಗಿ ಪದಕದೊಂದಿಗೆ ವಿನ್ಯಾಸಗೊಳಿಸಲಾಗಿದೆ. ಐಫೆಲ್ ಟವರ್ ನವೀಕರಣ ಕೆಲಸದ ವೇಳೆ ಕತ್ತರಿಸಲ್ಪಟ್ಟ ಕಬ್ಬಿಣದ ತುಂಡುಗಳನ್ನು ಸಂಗ್ರಹಿಸಿಡಲಾಗಿತ್ತು ಮತ್ತು ಅವುಗಳನ್ನು ಈಗ ಒಲಿಂಪಿಕ್ಸ್ ಪದಕಗಳಲ್ಲಿ ಬಳಸಲಾಗುತ್ತಿದೆ. ಪ್ರತಿ ಪದಕವೂ 18 ಗ್ರಾಂ ಭಾರದ ಕಬ್ಬಿಣದ ತುಂಡನ್ನು ಒಳಗೊಂಡಿರಲಿದೆ.

ಇದನ್ನೂ ಓದಿ Paris Olympics: ಕೊಕೊ ಗಾಫ್ ಅಮೆರಿಕದ ಧ್ವಜಧಾರಿ; ಈ ಗೌರವ ಪಡೆದ ಅತಿ ಕಿರಿಯ ಕ್ರೀಡಾಪಟು

ಮತ್ತೆ ಕಾಣಿಸಿಕೊಂಡ ಕೋವಿಡ್​ ಆತಂಕ


ಇಡೀ ಜಗತ್ತನ್ನೇ ತಲ್ಲಣಗೊಳಿಸಿದ್ದ ಕೋವಿಡ್ ವೈರಸ್​ನಿಂದಾಗಿ ಕಳೆದ ಬಾರಿಯ ಟೋಕಿಯೊ ಒಲಿಂಪಿಕ್ಸ್​ ಒಂದು ವರ್ಷ ತಡವಾಗಿ ಆರಂಭಗೊಂಡಿತ್ತು.​ ಇದೀಗ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿಯೂ ಈ ವೈರಸ್​ ಕಾಣಿಸಿಕೊಂಡಿದೆ. ಆಸ್ಟ್ರೇಲಿಯಾ ಮಹಿಳೆಯರ ವಾಟರ್‌ ಪೋಲೊ ತಂಡದ ಐವರಿಗೆ ಕೋವಿಡ್‌ -19 ಇರುವುದು ಪತ್ತೆಯಾಗಿದೆ.

ನೇರಳೆ ಬಣ್ಣದ ಟ್ರ್ಯಾಕ್

ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಸಂಪ್ರದಾಯಿಕ ಇಟ್ಟಿಗೆ-ಕೆಂಪು ಬಣ್ಣದ ಟ್ರ್ಯಾಕ್‌ ಬದಲಾಗಿ ನೇರಳೆ ಬಣ್ಣದ ಸಿಂಥೆಟಿಕ್‌ ಟ್ರ್ಯಾಕ್‌ ಬಳಕೆಯಾಗಲಿದೆ. ಅಥ್ಲೀಟ್​ಗಳು ಲ್ಯಾವೆಂಡರ್​ ಬಣ್ಣದ ಟ್ರ್ಯಾಕ್​ನಲ್ಲಿ(purple track) ಮೊದಲ ಬಾರಿಗೆ ಓಡಲಿದ್ದಾರೆ. ಭಾರತದ ಜಾವೆಲಿನ್​ ಥ್ರೋ ತಾರೆ ನೀರಜ್​ ಚೋಪ್ರಾ ಅವರ ಎಸೆತದ ಶೈಲಿಗೂ ಈ ಟ್ರ್ಯಾಕ್​ ನೆರವಾಗಲಿದೆ ಎಂದು ಹೇಳಲಾಗಿದೆ. 1976ರಿಂದಲೂ ಇಟಲಿಯ ಮೊಂಡೊ ಸಂಸ್ಥೆಯು ಒಲಿಂಪಿಕ್ಸ್‌ಗೆ ಟ್ರ್ಯಾಕ್‌ ಅಳವಡಿಕೆ ಕಾರ್ಯ ಮಾಡುತ್ತಿದ್ದು, ನೇರಳೆ ಬಣ್ಣದ ಟ್ರ್ಯಾಕ್‌ ಅನ್ನು ಆಧುನಿಕ ತಂತ್ರಜ್ಞಾನ ಬಳಸಿ ತಯಾರಿಸಿದೆ. ಈ ಟ್ರ್ಯಾಕ್​ನಲ್ಲಿ ವಿಶ್ವ ಹಾಗೂ ಒಲಿಂಪಿಕ್ಸ್‌ ದಾಖಲೆಗಳು ನಿರ್ಮಾಣಗೊಳ್ಳಲಿವೆ ಎಂದು ಮೊಂಡೊ ಸಂಸ್ಥೆ ವಿಶ್ವಾಸ ವ್ಯಕ್ತಪಡಿಸಿದೆ.

Exit mobile version