ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ(Paris Olympics) ನಾಳೆಯಿಂದ(ಆಗಸ್ಟ್ 1) ಅಥ್ಲೆಟಿಕ್ಸ್(Paris Olympics athletics) ಸ್ಪರ್ಧೆಗಳು ಆರಂಭಗೊಳ್ಳಲಿದೆ. ಪದಕ ಸ್ಪರ್ಧೆಯೂ ಒಳಗೊಂಡಿದೆ. ಈ ಬಾರಿ ಪ್ಯಾರಿಸ್ಗೆ ಕಳುಹಿಸಿದ 117 ಕ್ರೀಡಾಪಟುಗಳ ಪಟ್ಟಿಯಲ್ಲಿ ಅಥ್ಲೆಟಿಕ್ಸ್ ದೊಡ್ಡ ತಂಡವಾಗಿದೆ. ಒಟ್ಟು 29 ಸ್ಪರ್ಧಿಗಳು ಭಾರತವನ್ನು ಈ ವಿಭಾಗದಿಂದ ಪ್ರತಿನಿಧಿಸಲಿದ್ದಾರೆ. ಇವರಿಂದ ಹಲವು ಪದಕವನ್ನು ಕೂಡ ನಿರೀಕ್ಷೆ ಮಾಡಲಾಗಿದೆ. 18 ಪುರುಷರು ಹಾಗೂ 11 ಮಹಿಳೆಯರು ಸೇರಿದ್ದಾರೆ. ಭಾರತ ನಾಳೆ ನಡೆಯುವ ಯಾವೆಲ್ಲ ಸ್ಪರ್ಧೆಯಲ್ಲಿ ಕಣಕ್ಕಿಳಿಯಲಿದೆ ಎನ್ನುವ ಮಾಹಿತಿ ಇಂತಿದೆ.
ಭಾರತ ನಾಳೆ ಒಟ್ಟು 6 ಸ್ಪರ್ಧೆಗಳಲ್ಲಿ ಸ್ಪಧಿಸಲಿದ್ದು ಈ ಪೈಕಿ ಅಥ್ಲೆಟಿಕ್ಸ್ನಲ್ಲಿ ಪದಕಕ್ಕೆ ಹೋರಾಟ ನಡೆಸಲಿದೆ. ಮೂರು ಪುರುಷರು ಮತ್ತು ಏಕೈಕ ಮಹಿಳಾ ಓಟಗಾರ್ತಿ ಸೇರಿದ್ದಾರೆ. ಒಟ್ಟಾರೆ ನಾಲ್ಕು ಐತಿಹಾಸಿಕ ಪದಕ ನಿರೀಕ್ಷೆ ಮಾಡಲಾಗಿದೆ.
ವೇಳಾಪಟ್ಟಿ
ಅಥ್ಲೆಟಿಕ್ಸ್
ಪುರುಷರ 20 ಕಿಮೀ ಓಟದ ನಡಿಗೆ, ಫೈನಲ್
ಅಕ್ಷದೀಪ್ ಸಿಂಗ್, ವಿಕಾಶ್ ಸಿಂಗ್ ,ಪರಮ್ಜೀತ್ ಸಿಂಗ್ ಬಿಷ್ತ್ (ಆರಂಭ; ಬೆಳಗ್ಗೆ 11 ಗಂಟೆ)
ಮಹಿಳೆಯರ 20 ಕಿಮೀ ಓಟದ ನಡಿಗೆ, ಫೈನಲ್
ಪ್ರಿಯಾಂಕಾ ಗೋಸ್ವಾಮಿ (ಆರಂಭ: ಮಧ್ಯಾಹ್ನ 12:50)
ಆರ್ಚರಿ
ಪುರುಷರ ವೈಯಕ್ತಿಕ, 1/32 ಎಲಿಮಿನೇಷನ್ ಸುತ್ತು
ಪ್ರವೀಣ್ ರಮೇಶ್ ಜಾಧವ್ vs ಕೆಎಒ ವೆಂಚಾವ್(ಚೀನಾ). (ಆರಂಭ: ಮಧ್ಯಾಹ್ನ 2:31)
ಸೈಲಿಂಗ್ (ಹಾಯಿದೋಣಿ)
ಪುರುಷರ ಡಿಂಗಿ, ರೇಸ್ 1
ವಿಷ್ಣು ಸರವಣನ್ (ಆರಂಭ: ಮಧ್ಯಾಹ್ನ 3:45)
ಮಹಿಳೆಯರ ಡಿಂಗಿ, ರೇಸ್ 1
ನೇತ್ರಾ ಕುಮನನ್
ಇದನ್ನೂ ಓದಿ Paris Olympics Archery: ಪ್ರೀ-ಕ್ವಾರ್ಟರ್ ಫೈನಲ್ಗೇರಿದ ದೀಪಿಕಾ ಕುಮಾರಿ
ಗಾಲ್ಫ್
ಪುರುಷರ ವೈಯಕ್ತಿಕ ಸ್ಟ್ರೋಕ್ ಗೇಮ್, ಸುತ್ತು 1
ಶುಭಂಕರ್ ಶರ್ಮಾ, ಗಗನ್ಜೀತ್ ಭುಲ್ಲರ್. (ಆರಂಭ: ಮಧ್ಯಾಹ್ನ 12:30)
ಹಾಕಿ
ಪುರುಷರ, ಗುಂಪು ಬಿ.
ಭಾರತ vs ಬೆಲ್ಜಿಯಂ (ಆರಂಭ: ಮಧ್ಯಾಹ್ನ, 1:30)
ಶೂಟಿಂಗ್
ಮಹಿಳೆಯರು 50 ಮೀ ರೈಫಲ್ 3 ತ್ರೀ ಪೊಸಿಶನ್ ಅರ್ಹತಾ ಸುತ್ತು
ಅಂಜುಮ್ ಮೌದ್ಗಿಲ್, ಸಿಫ್ಟ್ ಕೌರ್ ಸಮ್ರಾ (ಆರಂಭ: ಮಧ್ಯಾಹ್ನ, 3:30)
ಬುಧವಾರ ಭಾರತಕ್ಕೆ ಉತ್ತಮ ಫಲಿತಾಂಶ
ಬುಧವಾರ ನಡೆದ ಹಲವು ಸ್ಪರ್ಧೆಗಳಲ್ಲಿ ಭಾರತೀಯ ಕ್ರೀಡಾಪಟುಗಳು ಗೆಲುವು ಸಾಧಿಸಿ ಫೈನಲ್, ಕ್ವಾರ್ಟರ್ ಫೈನಲ್, ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸುವ ಮೂಲಕ ಉತ್ತಮ ಫಲಿತಾಂಶ ದಾಖಲಿಸಿದ್ದಾರೆ. ನಾಳೆಯೂ ಕೂಡ ಉತ್ತಮ ಫಲಿತಾಂಶ ಬರಲಿ ಎನ್ನುವುದು ಭಾರತೀಯ ಕ್ರೀಡಾಭಿಮಾನಿಗಳ ಹಾರೈಕೆ.