ಪ್ಯಾರಿಸ್: ಒಲಿಂಪಿಕ್ಸ್ ನಡೆಯುತ್ತಿರುವ ಪ್ಯಾರಿಸ್‌ನಲ್ಲಿ(Paris Olympics) ವಿಪರೀತ ತಾಪಮಾನ(paris temperature) ಏರಿಕೆಯಾಗಿದ್ದು ಕ್ರೀಡಾಪಟುಗಳು ಭಾರೀ ಸಮಸ್ಯೆ ಎದುರಿಸುತ್ತಿದ್ದಾರೆ. ಭಾರತೀಯ ಕ್ರೀಡಾ ಪಟುಗಳಿಗಾಗಿ ಕ್ರೀಡಾ ಸಚಿವಾಲಯ 40 ಎಸಿ ಯಂತ್ರಗಳನ್ನು ಪೂರೈಸಿದೆ. ತಂಪಾದ ಎಸಿಯ ಗಾಳಿ ಪಡೆಯುತ್ತಿರುವ ಫೋಟೊವನ್ನು ಭಾರತೀಯ ಅಥ್ಲೀಟ್ಗಳು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಕೇಂದ್ರ ಕ್ರೀಡಾ ಸಚಿವಾಲಯಕ್ಕೆ ಧನ್ಯವಾದ ತಿಳಿಸಿದ್ದಾರೆ.
ಭಾರತೀಯ ಒಲಿಂಪಿಕ್ ಸಮಿತಿ ಹಾಗೂ ಫ್ರೆಂಚ್ ರಾಯಭಾರ ಕಚೇರಿಯೊಂದಿಗಿನ ಚರ್ಚೆಯ ನಂತರ ಕ್ರೀಡಾ ಗ್ರಾಮಕ್ಕೆ ಸಚಿವಾಲಯವು ಈ ಹವಾನಿಯಂತ್ರಿತ ಸಾಧನವನ್ನು ರವಾನಿಸಿದೆ. ‘ಪ್ಯಾರಿಸ್‌ನಲ್ಲಿ ತಾಪಮಾನ ಸಹಿಸುವುದು ಕ್ರೀಡಾಪಟುಗಳಿಗೆ ಕಷ್ಟಸಾಧ್ಯವಾಗಿದೆ. ಒಲಿಂಪಿಕ್ಸ್ ನಡೆಯುತ್ತಿರುವ ಪ್ರದೇಶಗಳಲ್ಲಿ ತಾಪಮಾನ ಹೆಚ್ಚಾಗಿದೆ’ ಎಂದು ಸಚಿವಾಲಯವು ಹೇಳಿದೆ.
ಒಲಿಂಪಿಕ್ಸ್ ಆರಂಭಕ್ಕೂ ಮೊದಲೇ ಬಹಳಷ್ಟು ದೇಶದ ಕ್ರೀಡಾಪಟುಗಳು ಪ್ಯಾರಿಸ್ ತಾಪಮಾನದ ಕುರಿತು ಆತಂಕ ವ್ಯಕ್ತಪಡಿಸಿದ್ದರು. ಆದರೆ ಇಂಗಾಲದ ಪ್ರಮಾಣ ಕಡಿಮೆ ಮಾಡುವ ಉದ್ದೇಶದಿಂದ ಹವಾನಿಯಂತ್ರಿತ ಸಾಧವನ್ನು ತ್ಯಜಿಸಲಾಗಿದೆ ಎಂಬ ಮಾತುಗಳು ಆಯೋಜಕರಿಂದ ಕೇಳಿಬಂದಿದ್ದವು. ಸದ್ಯ ಭಾರತ ಒಲಿಂಪಿಕ್ಸ್ನಲ್ಲಿ 3 ಕಂಚಿನ ಪದಕ ಗೆದ್ದಿದೆ. ಮನು ಭಾಕರ್ ಅವರು 25 ಮೀ. ಪಿಸ್ತೂಲ್ ಶೂಟಿಂಗ್ ಫೈನಲ್ ಪಂದ್ಯದಲ್ಲಿ ನಾಲ್ಕನೇ ಸ್ಥಾನ ಪಡೆಯುವ ಮೂಲಕ ಪದಕ ವಂಚಿತರಾದರು. ಒಂದೊಮ್ಮೆ ಗೆಲುವು ಸಾಧಿಸುತ್ತಿದ್ದರೆ ಭಾರತದ ಪದಕ ಸಂಖ್ಯೆ ನಾಲ್ಕಕ್ಕೇರುತ್ತಿತ್ತು.
ಇದನ್ನೂ ಓದಿ Paris Olympics Archery: ಕ್ವಾರ್ಟರ್ ಫೈನಲ್ಗೆ ಲಗ್ಗೆಯಿಟ್ಟ ದೀಪಿಕಾ; ಭಜನ್ ಕೌರ್ಗೆ ಸೋಲು
ಫೈನಲ್ ಹಂತದ ಮೊದಲ ಸುತ್ತಿನಲ್ಲಿ 6 ಅಂಕ ಗಳಿಸಿ 4ನೇ ಸ್ಥಾನಿಯಾದ ಭಾಕರ್ ಆ ಬಳಿಕದ ಸುತ್ತಿನಲ್ಲಿ ಪ್ರಗತಿ ಸಾಧಿಸಿ 2ನೇ ಸ್ಥಾನದೊಂದಿಗೆ ಈ ಸುತ್ತು ಮುಗಿಸಿದರು. 2ನೇ ಸುತ್ತಿನಲ್ಲಿ ಒಮ್ಮೆ 6ನೇ ಸ್ಥಾನಕ್ಕೆ ಕುಸಿದರೂ ಕೂಡ ತಕ್ಷಣ ಎಚ್ಚೆತ್ತುಕೊಂಡು ಮತ್ತೆ ಯಶಸ್ಸು ಸಾಧಿಸಿದರು. ಆದರೆ ಅಂತಿಮ ಹಂತದಲ್ಲಿ 28 ಅಂಕ ಪಡೆದು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟರು. ಕೊರಿಯಾದ ಯಾಂಗ್ ಜಿನ್ ಚಿನ್ನದ ಪದಕ ಗೆದ್ದರು. ಆತಿಥೇಯ ದೇಶದ ಕ್ಯಾಮಿಲ್ಲೆ ಬೆಳ್ಳಿ, ಹಂಗೇರಿಯ ಕಂಚು ಗೆದ್ದರು.
ಪದಕ ನಿರೀಕ್ಷೆಯಲ್ಲಿ ದೀಪಿಕಾ ಕುಮಾರಿ
ದೀಪಿಕಾ ಕುಮಾರಿ(Deepika Kumari) ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್(Paris Olympics)ನಲ್ಲಿ ಪದಕ ಗೆಲ್ಲುವ ಇರಾದೆಯಲ್ಲಿದ್ದಾರೆ. ಮಹಿಳಾ ಸಿಂಗಲ್ಸ್ ಆರ್ಚರಿಯಲ್ಲಿ(Paris Olympics Archery) ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಈ ಮೂಲಕ ಒಲಿಂಪಿಕ್ಸ್ನಲ್ಲಿ 2ನೇ ಬಾರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದರು. ಕ್ವಾರ್ಟರ್ ಫೈನಲ್ ಪಂದ್ಯ ಇಂದೇ ನಡೆಯಲಿದ್ದು ದಕ್ಷಿಣ ಕೊರಿಯಾದ ನಾಮ್ ಸು-ಹ್ಯೆನ್ ವಿರುದ್ಧ ಸೆಣಸಾಡಲಿದ್ದಾರೆ.
ಇಂದು(ಶನಿವಾರ) ನಡೆದ ಅತ್ಯಂತ ರೋಚಕ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜರ್ಮನಿಯ 13 ಶ್ರೇಯಾಂಕದ ಮೈಕಲ್ ಕ್ರೋಪೆನ್ ವಿರುದ್ಧ 6-4 ಅಂತರದಿಂದ ಗೆದ್ದು ಬೀಗಿದರು. ಆದರೆ, ಇದೇ ವಿಭಾಗದ ಮತ್ತೊಂದು ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 18 ವರ್ಷದ ಭಜನ್ ಕೌರ್(Bhajan Kaur) ಇಂಡೋನೇಷ್ಯಾದ ಡಯಾನಂದ ಚೋರುನಿಸಾ ವಿರುದ್ಧ 5-6 ಕೂದಲೆಳೆ ಅಂತರದಲ್ಲಿ ಸೋಲು ಕಂಡರು.