Site icon Vistara News

Paris Olympics: ನಾಳೆ ಒಲಿಂಪಿಕ್ಸ್​ನಲ್ಲಿ ಭಾರತದ ಸ್ಪರ್ಧೆಗಳ ವಿವರ ಹೀಗಿದೆ

Paris Olympics

Paris Olympics: The details of India's competitions in the Olympics tomorrow are as follows

ಪ್ಯಾರಿಸ್​: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ(Paris Olympics) ಮೂರು ಪದಕ ಗೆದ್ದಿರುವ ಭಾರತ ಮಂಗಳವಾರ ನಡೆದ ಹಲವು ಸ್ಪರ್ಧೆಗಳಲ್ಲಿ ಶ್ರೇಷ್ಠ ಪ್ರದರ್ಶನ ತೋರುವ ಮೂಲಕ ಪದಕ ಭರವಸೆಯನ್ನು ಮೂಡಿಸಿದೆ. ಇದೀಗ ಬುಧವಾರ ನಡೆಯುವ ಕ್ರೀಡಾ ಸ್ಪರ್ಧೆಗಳಲ್ಲಿಯೂ ಪದಕದ ನಿರೀಕ್ಷೆಯೊಂದಿಗೆ ಭಾರತದ ಕ್ರೀಡಾಪಟುಗಳು ಕಣಕ್ಕಿಳಿಯಲಿದ್ದಾರೆ. ಸ್ಪರ್ಧೆಗಳ ವಿವರ ಹೀಗಿದೆ.

ಅಥ್ಲೆಟಿಕ್ಸ್​( ಪದಕ ಸ್ಪರ್ಧೆ)

ಮ್ಯಾರಥಾನ್ ರೇಸ್ ವಾಕ್ ರಿಲೇ ಮಿಶ್ರ ತಂಡ: ಪನ್ವರ್ ಸೂರಜ್ / ಪ್ರಿಯಾಂಕಾ. (ಆರಂಭ: ಬೆಳಗ್ಗೆ 11 ಗಂಟೆ)

ಗಾಲ್ಫ್​


ಮಹಿಳೆಯರ ವೈಯಕ್ತಿಕ ಸ್ಟ್ರೋಕ್ ಪ್ಲೇ ರೌಂಡ್ 1

ಅದಿತಿ ಅಶೋಕ್

ದಿಶಾ ದಾಗರ್ (ಆರಂಭ: ಮಧ್ಯಾಹ್ನ 12.30)

ಟೇಬಲ್​ ಟೆನಿಸ್​


ಮಹಿಳಾ ತಂಡ ಕ್ವಾರ್ಟರ್‌ಫೈನಲ್: ಭಾರತ-ಜರ್ಮನಿ. (ಆರಂಭ: ಮಧ್ಯಾಹ್ನ 1.30)

ಅಥ್ಲೆಟಿಕ್ಸ್


ಪುರುಷರ ಹೈ ಜಂಪ್ ಅರ್ಹತಾ ಸುತ್ತು: ಸರ್ವೇಶ್ ಅನಿಲ್ ಕುಶಾರೆ. (ಆರಂಭ: ಮಧ್ಯಾಹ್ನ 1.35)

ಅಥ್ಲೆಟಿಕ್ಸ್

ಮಹಿಳೆಯರ 100 ಮೀ ಹರ್ಡಲ್ಸ್ ಸುತ್ತು 1: ಜ್ಯೋತಿ ಯರಾಜಿ. (ಆರಂಭ: ಮಧ್ಯಾಹ್ನ 1.45)

ಕುಸ್ತಿ

ಮಹಿಳೆಯರ ಫ್ರೀಸ್ಟೈಲ್ 53kg (ಆರಂಭ: ಮಧ್ಯಾಹ್ನ 2.30)

ಅಥ್ಲೆಟಿಕ್ಸ್


ಪುರುಷರ ಟ್ರಿಪಲ್ ಜಂಪ್ ಅರ್ಹತೆ
: ಅಬ್ದುಲ್ಲ ನರಂಗೋಳಿಂತೇವಿ, ಪ್ರವೀಣ್ ಚಿತ್ರವೇಲ್ (ಆರಂಭ: ರಾತ್ರಿ 10.45)

ವೇಟ್‌ ಲಿಫ್ಟಿಂಗ್‌:

ಮಹಿಳೆಯರ 49 ಕೆಜಿ ವಿಭಾಗ: ಮೀರಾಬಾಯಿ ಚಾನು (ಆರಂಭ: ರಾತ್ರಿ 11)

ಇದನ್ನೂ ಓದಿ Paris Olympics: ಸೆಮಿ ಫೈನಲ್​ ಪ್ರವೇಶಿಸಿದ ವಿನೇಶ್ ಫೋಗಟ್

ಇಂದು ಮಹಿಳಾ ಕುಸ್ತಿ ಸೆಮಿಫೈನಲ್​

ಕುಸ್ತಿಪಟು ವಿನೇಶ್ ಫೋಗಟ್(Vinesh Phogat), ಪ್ಯಾರಿಸ್​ ಒಲಿಂಪಿಕ್ಸ್(Paris Olympics)​ 50 ಕೆಜಿ ಮಹಿಳಾ ಸಿಂಗಲ್ಸ್​ ವಿಭಾಗದಲ್ಲಿ ಸೆಮಿಫೈನಲ್​ ಪ್ರವೇಶಿಸಿಸಿದ್ದಾರೆ. ಈ ಮೂಲಕ ಪದಕ ಭರವಸೆಯೊಂದನ್ನು ಮೂಡಿಸಿದ್ದಾರೆ. ಇಂದು ರಾತ್ರಿ 10.15ಕ್ಕೆ ನಡೆಯುವ ಸೆಮಿಫೈನಲ್ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ.

ಮಂಗಳವಾರ ನಡೆದ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಮೂರು ಬಾರಿಯ ಕಾಮನ್​ವೆಲ್ತ್​ ಚಿನ್ನದ ಪದಕ ವಿಜೇತೆ ಉಕ್ರೇನ್​ನ ಒಕ್ಸಾನಾ ಲಿವಾಚ್ ವಿರುದ್ಧ 7-5 ಅಂತರದ ರೋಚಕ ಗೆಲುವು ಸಾಧಿಸಿ ಸೆಮಿ ಫೈನಲ್​ ಪ್ರವೇಶಿಸಿದರು. ಇದಕ್ಕೂ ಮುನ್ನ ನಡೆದಿದ್ದ ಪ್ರೀ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ವಿನೇಶ್ ಟೋಕಿಯೊ ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತ ಜಪಾನ್‌ನ ಯುಯಿ ಸುಸಾಕಿ ಅವರನ್ನು 3-2 ಅಂತರದಿಂದ ಮಣಿಸಿ ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ್ದರು. ಈ ಗೆಲುವು ಕಂಡಾಗಲೇ ವಿನೇಶ್​ ಈ ಬಾರಿ ಪದಕ ಗೆಲ್ಲುವುದು ಖಚಿತ ಎಂದು ನಿರ್ಧರಿಸಲಾಗಿತ್ತು. ಇದೀಗ ಸೆಮಿ ಹಂತಕ್ಕೇರಿರುವ ಅವರು ಪದಕವೊಂದನ್ನು ಖಾತ್ರಿ ಪಡಿಸಿದ್ದಾರೆ. ಸುಸಾಕಿ ಅವರ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಕಂಡ ಮೊದಲ ಸೋಲು ಇದಾಗಿದೆ. 82 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದ ಸುಸಾಕಿ ಎಲ್ಲ ಪಂದ್ಯವನ್ನು ಗೆದ್ದು ಬೀಗಿದ್ದರು. ಇದೀಗ ಇವರ ಗೆಲುವಿನ ನಾಗಾಲೋಟಕ್ಕೆ ಭಾರತೀಯ ಕುಸ್ತಿಪಟು ಬ್ರೇಕ್​ ಹಾಕುವಲ್ಲಿ ಯಶಸ್ಸು ಕಂಡಿದ್ದಾರೆ.


Exit mobile version