Site icon Vistara News

Paris Olympics: ನೇರಳೆ ಟ್ರ್ಯಾಕ್​ನಲ್ಲಿ ಕಮಾಲ್​ ಮಾಡಲು ಸಜ್ಜಾದ ಅಥ್ಲೀಟ್​ಗಳು

Paris Olympics: The Purple Track at the 2024 Summer Olympic Games Has a Secret Ingredient

ಪ್ಯಾರಿಸ್​: ಒಲಿಂಪಿಕ್ಸ್​ ಕ್ರೀಡಾಕೂಟದಲ್ಲಿ ಅತ್ಯಂತ ಖ್ಯಾತಿ ಗಳಿಸಿರುವ(Paris Olympics) ಅಥ್ಲೆಟಿಕ್ಸ್​ ಸ್ಪರ್ಧೆಗಳು(paris olympic athletics) ಇಂದಿನಿಂದ ಆರಂಭಗೊಳ್ಳಲಿದೆ. ಉಳಿದೆಲ್ಲ ಸ್ಪರ್ಧೆಗಳಿಗಿಂತ ಅಥ್ಲೆಟಿಕ್ಸ್​ನಲ್ಲಿ ಗರಿಷ್ಠ 48 ಪದಕ ಸ್ಪರ್ಧೆ ನಡೆಯಲಿದೆ. ಈ ಪೈಕಿ ತಲಾ 23 ಪುರುಷರ ಮತ್ತು ಮಹಿಳಾ ಸ್ಪರ್ಧೆಯಾಗಿದೆ. 2 ಮಿಶ್ರ ವಿಭಾಗದ ಸ್ಪರ್ಧೆಯಾಗಿದೆ. ಈ ಬಾರಿ ಸಂಪ್ರದಾಯಿಕ ಇಟ್ಟಿಗೆ-ಕೆಂಪು ಬಣ್ಣದ ಟ್ರ್ಯಾಕ್‌ ಬದಲಾಗಿ ವಿನೂತ ಶೈಲಿಯ ನೇರಳೆ ಬಣ್ಣದ(purple track) ಸಿಂಥೆಟಿಕ್‌ ಟ್ರ್ಯಾಕ್​ನಲ್ಲಿ ಅಥ್ಲೀಟ್​ಗಳು ಕಣಕ್ಕಿಳಿಯಲಿದ್ದಾರೆ.

ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಲ್ಯಾವೆಂಡರ್​ ಬಣ್ಣದ ಟ್ರ್ಯಾಕ್​ನಲ್ಲಿ(purple track) ಸ್ಪರ್ಧಿಸಲಿದ್ದಾರೆ. ಭಾರತದ ಜಾವೆಲಿನ್​ ಥ್ರೋ ತಾರೆ ನೀರಜ್​ ಚೋಪ್ರಾ ಅವರ ಎಸೆತದ ಶೈಲಿಗೂ ಈ ಟ್ರ್ಯಾಕ್​ ನೆರವಾಗಲಿದೆ ಎಂದು ಹೇಳಲಾಗಿದೆ. ಜತೆಗೆ ಈ ಟ್ರ್ಯಾಕ್​ನಲ್ಲಿ ಹಲವು ದಾಖಲೆಗಳು ನಿರ್ಮಾಣಗೊಳ್ಳಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ನೇರಳ ಬಣ್ಣ ಬಳಕೆಗೆ ಕಾರಣವೇನು?

ಪ್ಯಾರಿಸ್​ ಒಲಿಂಪಿಕ್ಸ್​ನ ಅಥ್ಲೆಟಿಕ್ಸ್​ ಟ್ರ್ಯಾಕ್​ಗೆ ನೇರಳೆ ಬಣ್ಣ ಬಳಸಲು ಕೂಡ ಒಂದು ಪ್ರಮುಖ ಕಾರಣವಿದೆ. ಅದೇನೆಂದರೆ, ಈ ಸಲದ ಒಲಿಂಪಿಕ್ಸ್​ ಗೇಮ್ಸ್​ ನೀಲಿ, ಹಸಿರು ಮತ್ತು ನೇರಳ ಬಣ್ಣದ ಥೀಮ್​ ಒಳಗೊಂಡಿದೆ. ಕ್ರೀಡಾಕೂಟದ ಎಲ್ಲ ತಾಣಗಳಲ್ಲಿ ಇದೇ ಬಣ್ಣಗಳು ಎದ್ದು ಕಾಣಲಿವೆ. ಇದೇ ನಿಟ್ಟಿನಲ್ಲಿ ಅಥ್ಲೆಟಿಕ್ಸ್​ ಟ್ರ್ಯಾಕ್​ಗೂ ದೃಶ್ಯ ಆಕರ್ಷಣೆಯ ನೇರಳ ಬಣ್ಣವನ್ನು ನೀಡಲಾಗಿದೆ. ಜತೆಗೆ ಮನೋವೈಜ್ಞಾನಿಕ ಕಾರಣವೂ ಇದೆ. ನೇರಳೆ ಬಣ್ಣವನ್ನು ಧೈರ್ಯಶಾಲಿ, ಶಕ್ತಿಯುತ ಮತ್ತು ಸೃಜನಾತ್ಮಕತೆಯ ಪ್ರತಿಕ ಎನ್ನಲಾಗಿದೆ.

ಇದನ್ನೂ ಓದಿ Paris Olympics Boxing: ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ ಬಾಕ್ಸರ್‌ ನಿಶಾಂತ್‌ ದೇವ್‌; ಟಿಟಿಯಲ್ಲಿ ಶ್ರೀಜಾ ಅಕುಲಾ ಪರಾಭವ

​1976ರಿಂದಲೂ ಇಟಲಿಯ ಮೊಂಡೊ ಸಂಸ್ಥೆಯು ಒಲಿಂಪಿಕ್ಸ್‌ಗೆ ಟ್ರ್ಯಾಕ್‌ ಅಳವಡಿಕೆ ಕಾರ್ಯ ಮಾಡುತ್ತಿದ್ದು, ನೇರಳೆ ಬಣ್ಣದ ಟ್ರ್ಯಾಕ್‌ ಅನ್ನು ಆಧುನಿಕ ತಂತ್ರಜ್ಞಾನ ಬಳಸಿ ತಯಾರಿಸಿದೆ. ಈ ಟ್ರ್ಯಾಕ್​ನಲ್ಲಿ ವಿಶ್ವ ಹಾಗೂ ಒಲಿಂಪಿಕ್ಸ್‌ ದಾಖಲೆಗಳು ನಿರ್ಮಾಣಗೊಳ್ಳಲಿವೆ ಎಂದು ಮೊಂಡೊ ಸಂಸ್ಥೆ ವಿಶ್ವಾಸ ವ್ಯಕ್ತಪಡಿಸಿದೆ.

2016ರಲ್ಲಿ ನೀಲಿ ಟ್ರ್ಯಾಕ್​ ಬಳಕೆ


ಸಾಮಾನ್ಯವಾಗಿ ಒಲಿಂಪಿಕ್ಸ್​ ಅಥ್ಲೆಟಿಕ್ಸ್​ ಸ್ಪರ್ಧೆಗಳು ಹೆಚ್ಚಾಗಿ ಇಟ್ಟಿಗೆ ಬಣ್ಣದ ಟ್ರ್ಯಾಕ್​ನಲ್ಲಿ ನಡೆಯುತ್ತಿತ್ತು. ಆದರೆ, ಇಂಥದ್ದೇ ರ್ನಿದಿಷ್ಟ ಬಣ್ಣದ ಟ್ರ್ಯಾಕ್​ನಲ್ಲಿ ಅಥ್ಲೆಟಿಕ್ಸ್​ ಸ್ಪರ್ಧೆ ನಡೆಸಬೇಕೆಂಬ ನಿಯಮವಿಲ್ಲ. 2016ರ ರಿಯೋ ಒಲಿಂಪಿಕ್ಸ್​ ವೇಳೆ ಮೊದಲ ಬಾರಿಗೆ ಇಟ್ಟಿಗೆ ಬಣ್ಣದ ಸಿಂಥೆಟಿಕ್​ ಟ್ರ್ಯಾಕ್​ ಬದಲು ನೀಲಿ ಟ್ರ್ಯಾಕ್​ ಮೇಲೆ ಅಥ್ಲೆಟಿಕ್ಸ್​ ಸ್ಪರ್ಧೆ ನಡೆದಿತ್ತು. ಈ ಬಾರಿ ನೇರಳೆ ಬಣ್ಣದ ಟ್ರ್ಯಾಕ್​ನಲ್ಲಿ ಅಥ್ಲೆಟಿಕ್ಸ್​ ಸ್ಪರ್ಧೆ ನಡೆಯಲಿದೆ. ಈ ವಿನೂತನ ತಂತ್ರಜ್ಞಾನದ ಹೊಸ ಟ್ರ್ಯಾಕ್​ಗಳು ಅಥ್ಲೀಟ್​ಗಳಿಗೆ ಅತ್ಯಂತ ವೇಗವಾಗಿ ಓಡಲು ನೆರವಾಗಲಿದೆ ಎಂದು ಮೊಂಡೋ ಕಂಪನಿ ತಿಳಿಸಿದೆ. ನೇರಳೆ ಬಣ್ಣದ ಅಥ್ಲೆಟಿಕ್ಸ್​ ಟ್ರ್ಯಾಕ್​ನಲ್ಲಿ ಲೇನ್​ಗಳ ಸಂಖ್ಯೆಯನ್ನು 8ರಿಂದ 9ಕ್ಕೆ ಏರಿಸಲಾಗಿದೆ. ಕ್ರೀಡಾಂಗಣದಲ್ಲಿ ಒಟ್ಟಾರೆ 17,000 ಚದರ ಮೀಟರ್​ ವಿಸ್ತೀರ್ಣದಲ್ಲಿ ಈ ನೇರಳೆ ಬಣ್ಣ ವ್ಯಾಪಿಸಿದೆ.

ಈ ಬಾರಿ ಪ್ಯಾರಿಸ್​ಗೆ ಕಳುಹಿಸಿದ 117 ಕ್ರೀಡಾಪಟುಗಳ ಪಟ್ಟಿಯಲ್ಲಿ ಅಥ್ಲೆಟಿಕ್ಸ್​ ದೊಡ್ಡ ತಂಡವಾಗಿದೆ. ಒಟ್ಟು 29 ಸ್ಪರ್ಧಿಗಳು ಭಾರತವನ್ನು ಈ ವಿಭಾಗದಿಂದ ಪ್ರತಿನಿಧಿಸಲಿದ್ದಾರೆ. ಇವರಿಂದ ಹಲವು ಪದಕಗಳನ್ನು ಕೂಡ ಈ ಬಾರಿ ನಿರೀಕ್ಷೆ ಮಾಡಲಾಗಿದೆ. 18 ಪುರುಷರು ಹಾಗೂ 11 ಮಹಿಳೆಯರು ಸೇರಿದ್ದಾರೆ. ಇಂದು ನಡೆಯುವ ಪುರುಷರ ಮತ್ತು ಮಹಿಳೆಯರ 20 ಕಿಮೀ ಓಟದ ನಡಿಗೆ ಸ್ಪರ್ಧೆಯಲ್ಲಿ ಐತಿಹಾಸಿಕ ಪದಕವೊಂದನ್ನು ನಿರೀಕ್ಷೆ ಮಾಡಲಾಗಿದೆ. ಅಕ್ಷದೀಪ್ ಸಿಂಗ್, ವಿಕಾಶ್ ಸಿಂಗ್ ,ಪರಮ್ಜೀತ್ ಸಿಂಗ್ ಬಿಷ್ತ್ ಪುರುಷರ ವಿಭಾಗದಲ್ಲಿ ಕಣಕ್ಕಿಳಿದರೆ, ಮಹಿಳಾ ವಿಭಾಗದಲ್ಲಿ ಏಕೈಕ ಓಟಗಾರ್ತಿ ಪ್ರಿಯಾಂಕಾ ಗೋಸ್ವಾಮಿ(priyanka goswami) ಸ್ಪರ್ಧಿಸಲಿದ್ದಾರೆ.

Exit mobile version