Site icon Vistara News

Football Stadium: ಉದ್ಘಾಟನೆಗೊಂಡ ಆರೇ ತಿಂಗಳಿಗೆ ಕುಸಿದ ಫುಟ್​ಬಾಲ್ ಸ್ಟೇಡಿಯಂ

Meghalaya football stadium collapses

ಶಿಲ್ಲಾಂಗ್​: ಈಶಾನ್ಯ ರಾಜ್ಯ ಮೇಘಾಲಯದಲ್ಲಿ (Meghalaya) ಮಳೆ ಪ್ರಕೋಪಕ್ಕೆ 6 ತಿಂಗಳುಗಳ ಹಿಂದಷ್ಟೇ ಉದ್ಘಾಟನೆಗೊಂಡಿದ್ದ ಫುಟ್​ಬಾಲ್ ​ಸ್ಟೇಡಿಯಂ(Football Stadium)ನ ಒಂದು ಭಾಗ ಕುಸಿದು ಬಿದ್ದಿದೆ. ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ.

ಕಳೆದ ವರ್ಷ ಡಿಸೆಂಬರ್​ನಲ್ಲಿ ಪಿಎ ಸಂಗ್ಮಾ ಫುಟ್​ಬಾಲ್ ಸ್ಟೇಡಿಯಂ(P A Sangma Football Stadium) ಲೋಕಾರ್ಪಣೆಯಾಗಿತ್ತು. ಇದನ್ನು ಮುಖ್ಯಮಂತ್ರಿ ಕೊನ್ರಾಡ್ ಕೆ ಸಂಗ್ಮಾ(Chief Minister Conrad K Sangma) ಉದ್ಘಾಟಿಸಿದ್ದರು. 127 ಕೋಟಿ ರೂ ಖರ್ಚು ಮಾಡಿ ನಿರ್ಮಿಸಿದ್ದ ಈ ಸ್ಟೇಡಿಯಂನ ಒಂದು ಭಾಗ ಇದೀಗ ಕುಸಿದು ಬಿದ್ದಿದೆ. ಮಳೆಯಿಂದಾಗಿ ಈ ಅನಾಹುತ ಸಂಭವಿಸಿರುವುದಾಗಿ ಇಲ್ಲಿನ ಕ್ರೀಡಾ ಸಚಿವಾಲಯ ಮಾಹಿತಿ ನೀಡಿದೆ. ಜತೆಗೆ ತಡೆಗೋಡೆಯ ಗುಣಮಟ್ಟದ ಬಗ್ಗೆ ಸೂಕ್ತ ತನಿಖೆಯನ್ನು ಮಾಡಲಾಗುವುದು ಎಂದು ಡೆಪ್ಯೂಟಿ ಕಮಿಷನರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಒಂದೊಮ್ಮೆ ಪಂದ್ಯ ನಡೆಯುತ್ತಿದ್ದ ವೇಳೆ ಈ ಘಟನೆ ಸಂಭಿಸಿದ್ದರೆ ಅಪಾರ ಸಂಖ್ಯೆಯ ಸಾವು ನೋವುಗಳು ಕಂಡು ಬರುತ್ತಿತ್ತು. ಸದ್ಯ ಇಲ್ಲಿ ಯಾವುದೇ ಟೂರ್ನಿ ನಡೆಯದೇ ಇದ್ದುದರಿಂದ ಯಾವುದೇ ದುರ್ಘಟನೆ ಸಂಭವಿಸಿಲ್ಲ. ಮೇಲ್ನೋಟಕ್ಕೆ ಈ ತಡೆ ಗೋಡೆಯ ಟೆಂಡರ್​ನಲ್ಲಿ ಭಾರಿ ಪ್ರಮಾಣದ ಭ್ರಷ್ಟಾಚಾರ ಕಂಡು ಬಂದಿದೆ. ಇಲ್ಲವಾದಲ್ಲಿ ನಿರ್ಮಾಣವಾದ 6 ತಿಂಗಳಲ್ಲಿ ಈ ಗೋಡೆ ಕುಸಿದು ಬೀಳುತ್ತಿರಲಿಲ್ಲ. ಸತ್ಯಾಂಶ ತನಿಖೆ ಬಳಿಕವೇ ಹೊರ ಬರಬೇಕಿದೆ.

ಇದನ್ನೂ ಓದಿ Football: ಇಂಟರ್‌ ಕಾಂಟಿನೆಂಟಲ್‌ ಕಪ್​ ವಿಜೇತ ಭಾರತ ತಂಡಕ್ಕೆ 1 ಕೋಟಿ ರೂ. ಬಹುಮಾನ ಘೋಷಿಸಿದ ಒಡಿಶಾ ಸರ್ಕಾರ

ವಿಧಾನಸಭೆ ಕಟ್ಟಡದ ಭಾಗವೂ ಕುಸಿದಿತ್ತು

ಕಳೆದ ವರ್ಷ ಮೇ ತಿಂಗಳಲ್ಲಿ ನಿರ್ಮಾಣ ಹಂತದಲ್ಲಿರುವ ಮೇಘಾಲಯ ವಿಧಾನಸಭೆ ಕಟ್ಟಡದ ಒಂದು ಭಾಗವೂ ಕುಸಿದು ಬಿದ್ದು ಭಾರಿ ಸುದ್ದಿಯಾಗಿತ್ತು. ಸುಮಾರು 177.7 ಕೋಟಿ ರೂ. ವೆಚ್ಚದ ಕಟ್ಟಡದ 70 ಟನ್ ತೂಕದ ಗುಮ್ಮಟ ನೆಲಕ್ಕೆ ಉರುಳಿತ್ತು. ಇದು ಇಲ್ಲಿನ ವಿಧಾನಸಭೆ ಚುನಾವಣೆಗೂ ಮುನ್ನ ರಾಜಕೀಯ ಕೋಲಾಹಲಕ್ಕೂ ಕಾರಣವಾಗಿತ್ತು. ಆಗಲೂ ಕೂಡ ಬ್ರಷ್ಟಾಚಾರದ ಆರೋಪ ಕೇಳಿಬಂದಿತ್ತು.

Exit mobile version