Site icon Vistara News

Pat Cummins: ಭಾರತ ವಿರುದ್ಧದ ಏಕದಿನ ಸರಣಿಯಿಂದ ಹೊರಬಿದ್ದ ಪ್ಯಾಟ್​ ಕಮಿನ್ಸ್

Australia captain Pat Cummins

ಸಿಡ್ನಿ: ಭಾರತ ವಿರುದ್ಧದ ಮೂರು ಪಂದ್ಯಗಳಳ ಏಕದಿನ ಸರಣಿಯಿಂದ ಆಸ್ಟ್ರೇಲಿಯಾ(Australia tour of India) ತಂಡದ ನಾಯಕ ಮತ್ತು ಪ್ರಧಾನ ವೇಗಿ ಪ್ಯಾಟ್​ ಕಮಿನ್ಸ್(Pat Cummins)​ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ. ಮೊಣಕೈ ಗಾಯಕ್ಕೆ(wrist injury) ತುತ್ತಾದ ಕಾರಣ ಅವರು ಈ ಸರಣಿಯಿಂದ ಹೊರಬಿದ್ದಿದ್ದಾರೆ ಎನ್ನಲಾಗಿದೆ. ಭಾರತ ಮತ್ತು ಆಸೀಸ್​ ನಡುವಣ ಏಕದಿನ ಸರಣಿ ಸೆಪ್ಟಂಬರ್​ 22ಕ್ಕೆ ಆರಂಭಗೊಳ್ಳಲಿದೆ. ಇದಾದ ಬಳಿಕ 5 ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಆದರೆ ಟಿ20 ಸರಣಿ ಏಕದಿನ ವಿಶ್ವಕಪ್(ICC World Cup)​ ಮುಗಿದ ಬಳಿಕ ನವೆಂಬರ್​ 26ಕ್ಕೆ ನಡೆಯಲಿದೆ.

ಇಂಗ್ಲೆಂಡ್​ ವಿರುದ್ಧದ ಆ್ಯಶಸ್​ ಟೆಸ್ಟ್​ ಸರಣಿಯ ವೇಳೆ ಕಮಿನ್ಸ್​ ಮೊಣಗಂಟಿನ ಮೂಳೆನೋವಿನ ಸಮಸ್ಯೆ ಕಂಡುಬಂದಿತ್ತು. ಆದರೂ ಅವರು ಕೈಗೆ ನೋವು ನಿವಾರಕ ಪ್ಲಾಸರ್​ ಧರಿಸಿ ಸರಣಿ ಆಡಿದ್ದರು. ಇದೀಗ ವರದಿಯಾದ ಪ್ರಕಾರ ಅವರ ಮೊಣಗಂಟಿನ ಮೂಳೆ ಮುರಿತಗೊಂಡಿದೆ ಎಂದು ತಿಳಿದು ಬಂದಿದೆ. ಇದೇ ಕಾರಣದಿಂದ ಅವರು ಭಾರತ ವಿರುದ್ಧದ ಏಕದಿನ ಸರಣಿಯಿಂದ ಹೊರಬಿದ್ದಿದ್ದಾರೆ ಎನ್ನಲಾಗಿದೆ.

ಕ್ರಿಕೆಟ್‌ ಆಸ್ಟ್ರೇಲಿಯಾ ಮುಂದಿನ ತಿಂಗಳು ದಕ್ಷಿಣ ಆಫ್ರಿಕಾ ಮತ್ತು ಭಾರತ ನಡುವಿನ ಏಕದಿನ ಸರಣಿಗೆ ತಂಡವನ್ನು ಪ್ರಕಟಿಸುವ ಸಾಧ್ಯತೆ ಇದೆ. ಈ ಎರಡೂ ಸರಣಿಗೂ ಕಮಿನ್ಸ್​ ಅಲಭ್ಯರಾಗಲಿದ್ದು, ಕಮಿನ್ಸ್‌ ಅನುಪಸ್ಥಿತಿಯಲ್ಲಿ ಮಿಚೆಲ್‌ ಮಾರ್ಷ್‌ ಆಸೀಸ್​ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ವರದಿಯಾಗಿದೆ.

‘ಸಿಡ್ನಿ ಮಾರ್ನಿಂಗ್‌ ಹೆರಾಲ್ಡ್‌’ ವರದಿಯ ಕಮಿನ್ಸ್​ಗೆ ಮೂಳೆ ಮುರಿತ ಆಗಿಲ್ಲ, ನೋವು ಮಾತ್ರ ಕಾಣಿಸಿಕೊಂಡಿದೆ. ಮಹತ್ವದ ಏಕದಿನ ಟೂರ್ನಿಯೂ ಇರುವದರಿಂದ ಯಾವುದೇ ಅಪಾಯ ಎದುರಾಗಬಾರದು ಎಂದು ಕಮಿನ್ಸ್​ಗೆ ಭಾರತ ಮತ್ತು ದಕ್ಷಿಣ ಆಫ್ರಿಕಾ ಸರಣಿಯಿಂದ ವಿಶ್ರಾಂತಿ ನೀಡಲು ಆಸೀಸ್​ ಕ್ರಿಕೆಟ್​ ಮಂಡಳಿ ನಿರ್ಧರಿಸಿದೆ ಎಂದು ತಿಳಿಸಿದೆ.

ಇದನ್ನೂ ಓದಿ INDvsAUS : ಪ್ಯಾಟ್​ ಕಮಿನ್ಸ್​ ತಾಯಿ ನಿಧನ, ಕಪ್ಪು ಪಟ್ಟಿ ಧರಿಸಿ ಕ್ರೀಡಾಂಗಣಕ್ಕೆ ಇಳಿದ ಆಸ್ಟ್ರೇಲಿಯಾ ತಂಡ

ಅಕ್ಟೋಬರ್​ 8 ರಂದು ಆಸ್ಟ್ರೇಲಿಯಾ ಮತ್ತು ಭಾರತ ವಿಶ್ವಕಪ್​ನ ಮೊದಲ ಪಂದ್ಯ ಆಡಲಿದೆ. ಈ ಪಂದ್ಯ ಚೆನ್ನೈಯಲ್ಲಿ ನಡೆಯಲಿದೆ. ಈಗಾಗಲೇ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಆಸ್ಟ್ರೇಲಿಯಾ ಏಕದಿನ ವಿಶ್ವಕಪ್​ನಲ್ಲಿಯೂ ಉತ್ತಮ ಪ್ರದರ್ಶನ ತೋರುವ ಯೋಜನೆಯಲ್ಲಿದೆ.

Exit mobile version