Site icon Vistara News

Border Gavaskar Trophy : ಸ್ಪಿನ್​ಗೆ ಮಾತ್ರವಲ್ಲ, ರಿವರ್ಸ್​ ಸ್ವಿಂಗ್​ ಬಗ್ಗೆಯೂ ಗಮನ ಕೊಡಿ ಎಂದ ಅಲೆಕ್ಸ್​ ಕ್ಯೇರಿ

alex cary

#image_title

ಬೆಂಗಳೂರು: ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಬಾರ್ಡರ್​- ಗವಾಸ್ಕರ್​ ಟ್ರೋಫಿ (Border Gavaskar Trophy) ಟೆಸ್ಟ್​ ಸರಣಿ ಬಗ್ಗೆ ಜೋರು ಚರ್ಚೆ ನಡೆಯುತ್ತಿದೆ. ಪ್ರಮುಖವಾಗಿ ಬಿಸಿಸಿಐ, ಸ್ಪಿನ್​ ಪಿಚ್​ಗಳನ್ನು ತಯಾರಿಸುವ ಮೂಲಕ ಪ್ರವಾಸಿ ತಂಡವನ್ನು ಹಿನ್ನಡೆ ಉಂಟು ಮಾಡುವ ಯೋಜನೆ ರೂಪಿಸಿಕೊಂಡಿದೆ ಎಂದು ಎದುರಾಳಿ ತಂಡದ ಆಟಗಾರರು ಹೇಳುತ್ತಿದ್ದಾರೆ. ಹೀಗಾಗಿ ಎಲ್ಲಿ ನೋಡಿದರೂ ಸ್ಪಿನ್ ಪಿಚ್​ನದ್ದೇ ಮಾತು. ಆದರೆ, ಆಸ್ಟ್ರೇಲಿಯಾ ತಂಡದ ವಿಕೆಟ್​ಕೀಪರ್​ ಬ್ಯಾಟರ್​ ಅಲೆಕ್ಸ್​ ಕ್ಯೇರಿಗೆ ಬೇರೆಯದ್ದೇ ಚಿಂತೆ. ನಾವೆಲ್ಲರೂ ಸ್ಪಿನ್​ ಬಗ್ಗೆ ಚರ್ಚೆ ನಡೆಸುತ್ತಿರುವ ವೇಳೆ ಭಾರತ ತಂಡ ರಿವರ್ಸ್ ಸ್ವಿಂಗ್​ ದಾಳಿ ನಡೆಸಲು ಸಜ್ಜಾಗಿದೆ ಎಂದು ಅವರು ಎಚ್ಚರಿಕೆ ಕೊಟ್ಟಿದ್ದಾರೆ.

ಪಾಕಿಸ್ತಾನಕ್ಕೆ ಪ್ರವಾಸ ಮಾಡುವ ವೇಳೆಯೂ ಇದೇ ರೀತಿ ಸ್ಪಿನ್​ ಬೌಲಿಂಗ್​ ದಾಳಿಯ ಕುರಿತು ಚರ್ಚೆ ನಡೆಸಿದ್ದೆವು. ಆದರೆ ಅಲ್ಲಿಗೆ ಹೋದ ಬಳಿಕ ನಾವು ರಿವರ್ಸ್​ ಸ್ವಿಂಗ್​ ಎಸೆತಗಳಿಗೆ ಬ್ಯಾಟ್​ ಮಾಡುವುದಕ್ಕೆ ಸಮಸ್ಯೆ ಎದುರಿಸಿದೆವು ಎಂದು ಕ್ಯೇರಿ ಹೇಳಿದ್ದಾರೆ.

ಇದನ್ನೂ ಓದಿ : Team India | ಮಾಜಿ ಕೋಚ್ ರವಿ ಶಾಸ್ತ್ರಿಗೆ ಪ್ರತ್ಯುತ್ತರ ಕೊಟ್ಟ ಸ್ಪಿನ್ನರ್‌ ಆರ್ ಅಶ್ವಿನ್‌

2018ರಲ್ಲಿ ಭಾರತ ಎ ತಂಡದ ವಿರುದ್ಧ ನಾನು ಆಡಿದ್ದೆ. ಈ ವೇಳೆಯೂ ಸ್ಪಿನ್​ ಬೌಲಿಂಗ್​ ಕುರಿತು ಹೆಚ್ಚು ಚರ್ಚೆಗಳ ನಡೆದಿದ್ದವು. ಆದರೆ, ವಾಸ್ತವದಲ್ಲಿ ಭಾರತದ ವೇಗದ ಬೌಲರ್​ಗಳು ರಿವರ್ಸ್​ ಸ್ವಿಂಗ್​ ಬೌಲಿಂಗ್​ ಮೂಲಕ ಹೆಚ್ಚು ಹಾನಿ ಉಂಟು ಮಾಡುತ್ತಿದ್ದರು ಎಂಬುದಾಗಿ ಕ್ಯೇರಿ ಹೇಳಿದ್ದಾರೆ.

Exit mobile version