ಚೆನ್ನೈ: ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್(PBKS vs CSK) ತಂಡದ ವಿರುದ್ಧ ಗೆಲುವು ಸಾಧಿಸುವ ಮೂಲಕ ಪಂಜಾಬ್ ಕಿಂಗ್ಸ್ ದಾಖಲೆಯೊಂದನ್ನು ನಿರ್ಮಿಸಿದೆ. ಚೆನ್ನೈಗೆ ತವರಿನಲ್ಲಿಯೇ ಅತ್ಯಧಿಕ ಸೋಲುಣಿಸಿದ 2ನೇ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೇ ವೇಳೆ ಕೆಕೆಆರ್(3 ಬಾರಿ) ತಂಡದ ದಾಖಲೆಯನ್ನು ಹಿಂದಿಕ್ಕಿದೆ.
ಚೆನ್ನೈಗೆ ತವರಿನಲ್ಲೇ ಅತ್ಯಧಿಕ ಸೋಲುಣಿಸಿದ ದಾಖಲೆ ಮುಂಬೈ ಇಂಡಿಯನ್ಸ್ ತಂಡದ ಪರವಾಗಿದೆ. ಚಿದಂಬರಂ ಸ್ಟೇಡಿಯಂನಲ್ಲಿ ಚೆನ್ನೈ ವಿರುದ್ಧ ಮುಂಬೈ ಇದುವರೆಗೆ 5 ಪಂದ್ಯಗಳನ್ನು ಜಯಿಸಿದೆ. ಪಂಜಾಬ್ 4 ಬಾರಿ ಸೋಲುಣಿಸಿದೆ. ಇಲ್ಲಿನ ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ(IPL 2024) 49 ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಪಂಜಾಬ್ ಇದಕ್ಕೆ ತಕ್ಕ ಪ್ರದರ್ಶನ ನೀಡುವು ಮೂಲಕ ಚೆನ್ನೈ ತಂಡವನ್ನು 162 ರನ್ಗೆ ಕಟ್ಟಿಹಾಕಿತು. ಸಾಧಾರಣ ಮೊತ್ತದ ಗುರಿಯನ್ನು ಅಷ್ಟೇ ಸೊಗಸಾಗಿ ಬೆನ್ನಟ್ಟಿದ ಪಂಜಾಬ್ ಬ್ಯಾಟರ್ಗಳು 17.5 ಓವರ್ಗಳಲ್ಲಿ ಕೇವಲ 3 ವಿಕೆಟ್ಗೆ 163 ರನ್ ಬಾರಿಸಿ ಗೆಲುವಿನ ಪತಾಕೆ ಹಾರಿಸಿದರು. ಇದು ಈ ಆವೃತ್ತಿಯಲ್ಲಿ ಚೆನ್ನೈಗೆ ತವರಿನಲ್ಲಿ ಎದುರಾದ 2ನೇ ಸೋಲಾಗಿದೆ. ಇದಕ್ಕೂ ಮುನ್ನ ಲಕ್ನೋ ವಿರುದ್ಧ ಸೋಲು ಕಂಡಿತ್ತು.
#PunjabKings complete their 5th consecutive win over #CSK👏 #CSKvPBKS #TATAIPL #IPLonJioCinema pic.twitter.com/L59dRxPdtT
— JioCinema (@JioCinema) May 1, 2024
ಚೇಸಿಂಗ್ ವೇಳೆ ಕಳೆದ ಪಂದ್ಯದ ಶತಕ ವೀರ ಜಾನಿ ಬೇರ್ಸ್ಟೋ 46 ರನ್ ಬಾರಿಸಿ ಈ ಪಂದ್ಯದಲ್ಲಿಯೂ ತಮ್ಮ ಬ್ಯಾಟಿಂಗ್ ಪ್ರತಾಪ ತೋರಿದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ಗೆ ಒತ್ತು ಕೊಟ್ಟ ಅವರು ಪ್ರತಿ ಓವರ್ನಲ್ಲಿಯೂ ಕನಿಷ್ಠ ಒಂದು ಬೌಂಡರಿ ಅಥವಾ ಸಿಕ್ಸರ್ ಬಾರಿಸುತ್ತಲೇ ಮುನ್ನುಗಿದರು. ಇವರಿಗೆ 2ನೇ ಕ್ರಮಾಂಕದಲ್ಲಿ ಆಡಲಿಳಿದ ದಕ್ಷಿಣ ಆಫ್ರಿಕಾದ ಹಾರ್ಡ್ ಹಿಟ್ಟರ್ ರೀಲಿ ರೂಸೊ ಉತ್ತಮ ಸಾಥ್ ನೀಡಿದರು. ಬೇರ್ಸ್ಟೋ ವಿಕೆಟ್ ಪತನದ ಬಳಿಕ ಇವರು ತಂಡವನ್ನು ಆಧರಿಸಿದರು. 23 ಎಸೆತ ಎದುರಿಸಿ 43(5 ಬೌಂಡರಿ, 2 ಸಿಕ್ಸರ್) ರನ್ ಬಾರಿಸಿದರು. ಅಂತಿಮವಾಗಿ ಶಶಾಂಕ್ ಸಿಂಗ್(25) ಮತ್ತು ಹಂಗಾಮಿ ನಾಯಕ ಸ್ಯಾಮ್ ಕರನ್(26) ಅಜೇಯರಾಗಿ ಉಳಿದು ತಂಡವನ್ನು ಗೆಲುವಿನ ದಡ ಸೇರಿಸಿದರು. ಇದೇ ವೇಳೆ ಶಶಾಂಕ್ ಟಿ20 ಕ್ರಿಕೆಟ್ನಲ್ಲಿ 2 ಸಾವಿರ ರನ್ಗಳ ಗಡಿ ದಾಡಿದರು.
ಇದನ್ನೂ ಓದಿ IPL 2024 Points Table: ಚೆನ್ನೈ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ ಪ್ರಗತಿ ಸಾಧಿಸಿದ ಪಂಜಾಬ್
ಮೊದಲು ಬ್ಯಾಟಿಂಗ್ ನಡೆಸಿದ ಚೆನ್ನೈ ತಂಡ ಉತ್ತಮ ಆರಂಭವೇನೊ ಪಡೆಯಿತು. ನಾಯಕ ಋತುರಾಜ್ ಗಾಯಕ್ವಾಡ್ ಮತ್ತು ಅನುಭವಿ ಹಾಗೂ ಹಿರಿಯ ಆಟಗಾರ ಅಜಿಂಕ್ಯ ರಹಾನೆ ಸೇರಿಕೊಂಡು ಮೊದಲ ವಿಕೆಟ್ಗೆ 64 ರನ್ ಒಟ್ಟುಗೂಡಿಸಿದರು. ರಹಾನೆ 29 ರನ್ ಗಳಿಸಿ ವಿಕೆಟ್ ಕಳೆದುಕೊಂಡರು. ಉತ್ತಮ ಸ್ಥಿತಿಯಲ್ಲಿದ್ದ ಚೆನ್ನೈ ರಹಾನೆ ವಿಕೆಟ್ ಪತನದ ಬಳಿಕ ದಿಢೀರ್ ಕುಸಿತ ಕಂಡಿತು. ಸತತವಾಗಿ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
Resilient @PunjabKingsIPL emerged victorious in the battle of the kings with a 7-wicket win in Chennai ❤️
— IndianPremierLeague (@IPL) May 2, 2024
Here's a round-up of the #CSKvPBKS clash 📽️#TATAIPL pic.twitter.com/2wtpGgjgRS
ಒಂದೆಡೆ ಸಹ ಆಟಗಾರರ ವಿಕೆಟ್ ಬೀಳುತ್ತಿದ್ದರೂ ಕೂಡ ಮತ್ತೊಂದು ತುದಿಯಲ್ಲಿ ಕ್ರೀಸ್ ಕಚ್ಚಿ ನಿಂತ ಗಾಯಕ್ವಾಡ್ ತಮ್ಮ ಶಕ್ತಿ ಮೀರಿದ ಬ್ಯಾಟಿಂಗ್ ಪ್ರದರ್ಶನದ ಮೂಲಕ ತಂಡದ ಮೊತ್ತವನ್ನು ಹಿಗ್ಗಿಸುವ ಪ್ರಯತ್ನ ಮುಂದುವರಿಸಿದರು. ಒಂದು ಹಂತದಲ್ಲಿ ಸಮೀರ್ ರಿಜ್ವಿ ಅವರಿಂದ ಸಣ್ಣ ಮಟ್ಟದ ಜತೆಯಾಟದ ಬೆಂಬಲ ಸಿಕ್ಕರೂ ಕೂಡ ಇದು ಹೆಚ್ಚು ಹೊತ್ತು ಸಾಗಲಿಲ್ಲ. 21 ರನ್ ಗಳಿಸಿದ್ದ ವೇಳೆ ರಿಜ್ವಿ ಕೂಡ ಔಟಾದರು. ಗಾಯಕ್ವಾಡ್ 48 ಎಸೆತಗಳಿಂದ 5 ಬೌಂಡರಿ ಮತ್ತು 2 ಸಿಕ್ಸರ್ ಬಾರಿಸಿ 62 ರನ್ ಗಳಿಸಿದರು.