Site icon Vistara News

PBKS vs MI: ಸೋತವರ ಮಧ್ಯೆ ಗೆಲುವಿಗಾಗಿ ಹೋರಾಟ; ನಾಳೆ ಮುಂಬೈ-ಪಂಜಾಬ್​ ಸೆಣಸಾಟ

PBKS vs MI

ಚಂಡೀಗಢ: ಗುರುವಾರ ನಡೆಯುವ ಐಪಿಎಲ್(IPL 2024)​ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​(Mumbai Indians) ಮತ್ತು ಪಂಜಾಬ್​ ಕಿಂಗ್ಸ್(Punjab Kings)​ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯ ಇಲ್ಲಿನ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ(Maharaja Yadavindra Singh International Cricket Stadium) ಮುಲ್ಲನ್ಪುರ್​ನಲ್ಲಿ(Mullanpur) ನಡೆಯಲಿದೆ.

ಅದೃಷ್ಟದ ವಿಚಾರದಲ್ಲಿ ಉಭಯ ತಂಡಗಳು ಒಂದೇ ದೋಣಿಯ ಪಯಣಿಗರು. ಪಂಜಾಬ್​ 7 ನೇ ಸ್ಥಾನದಲ್ಲಿದ್ದರೆ, ಮುಂಬೈ 8 ನೇ ಸ್ಥಾನದಲ್ಲಿದೆ. ಉಭಯ ತಂಡಗಳು 6 ಪಂದ್ಯಗಳನ್ನು ಆಡಿದ್ದು, 2ರಲ್ಲಿ ಗೆದ್ದು 4ರಲ್ಲಿ ಸೋಲು ಕಂಡಿವೆ. ಎರಡೂ ತಂಡಗಳು ತಲಾ 4 ಅಂಕಗಳನ್ನು ಹೊಂದಿದೆ. ನಿವ್ವಳ ರನ್ ರೇಟ್ ಆಧಾರದಲ್ಲಿ ಮುಂದಿರುವ ಕಾರಣ ಪಂಜಾಬ್​ ತಂಡ ಮುಂಬೈಗಿಂತ ಒಂದು ಸ್ಥಾನ ಮೇಲಿದೆ. ಅಂಕಪಟ್ಟಿಯಲ್ಲಿ ಮೇಲೇರಬೇಕಾದರೆ ನಾಳಿನ ಪಂದ್ಯದಲ್ಲಿ ದೊಡ್ಡ ಗೆಲುವು ಅತ್ಯಗತ್ಯ. ದೊಡ್ಡ ಅಂತರದಿಂದ ಗೆದ್ದರೆ ಪಾಯಿಂಟ್ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೆರುವ ಅವಕಾಶವಿದೆ.

ಎರಡೂ ತಂಡಗಳು ತಮ್ಮ ಹಿಂದಿನ ಪಂದ್ಯಗಳಲ್ಲಿ ತಮ್ಮ ತವರು ಅಂಗಳದಲ್ಲಿ ಸೋತಿದ್ದವು. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ ಹಾರ್ದಿಕ್​ ಪಡೆ ತನ್ನ ಸಾಂಪ್ರದಾಯಿಕ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 20 ರನ್‌ಗಳಿಂದ ಸೋತಿತ್ತು. ಪಂಜಾಬ್ ಕಿಂಗ್ಸ್ ತಂಡ ರಾಜಸ್ಥಾನ್​ ವಿರುದ್ಧ ಥ್ರಿಲ್ಲರ್ ಪಂದ್ಯದಲ್ಲಿ 3 ವಿಕೆಟ್‌ಗಳಿಂದ ಸೋತಿತ್ತು.

ಮುಂಬೈ ತಂಡಕ್ಕೆ ಅಗ್ರ ಕ್ರಮಾಂಕದಲ್ಲಿ ಯಾವುದೇ ಚಿಂತೆಯಿಲ್ಲ. ಇಶಾನ್ ಕಿಶನ್ ಮತ್ತು ಮಾಜಿ ನಾಯಕ ರೋಹಿತ್​ ಶರ್ಮ ಪ್ರಸಕ್ತ ಋತುವಿನಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಸೂರ್ಯಕುಮಾರ್​ ಒಂದು ಪಂದ್ಯ ಆಡಿದರೆ ಮತ್ತೊಂದು ಪಂದ್ಯ ಆಡುತ್ತಿಲ್ಲ. ಇದು ತಂಡಕ್ಕಿರುವ ಸದ್ಯದ ದೊಡ್ಡ ಚಿಂತೆ. ಅತ್ತ ನಾಯಕ ಹಾರ್ದಿಕ್​ ಪಾಂಡ್ಯ ಕೂಡ ಕೆಲ ಕಟ್ಟ ನಿರ್ಧಾರಗಳನ್ನು ಕೈಗೊಂಡು ಪಂದ್ಯದ ಸೋಲಿಗೆ ಕಾರಣರಾಗುತ್ತಿದ್ದಾರೆ.

ಇದನ್ನೂ ಓದಿ IPL 2024: ಇನ್ನು ಮುಂದೆ ಐಪಿಎಲ್​ ಪಂದ್ಯದ ದಿನ ಮೈದಾನದ ಫೋಟೋ ಹಂಚಿಕೊಳ್ಳುವಂತಿಲ್ಲ; ಕಾರಣವೇನು?

ಪಂಜಾಬ್​ ತಂಡದಲ್ಲಿ ಮಧ್ಯಮ ಕ್ರಮಾಂಕದ ಆಟಗಾರ ಶಶಾಂಕ್‌ ಸಿಂಗ್‌ ಮತ್ತು ಅಶುತೋಷ್‌ ಶರ್ಮ ಹೊರತುಪಡಿಸಿ ಉಳಿದ ಯಾವುದೇ ಆಟಗಾರರು ಕೂಡ ನಿರೀಕ್ಷಿತ ಪ್ರದರ್ಶನ ತೋರುತ್ತಿಲ್ಲ. ಪ್ರತಿ ಪಂದ್ಯದಲ್ಲಿಯೂ ಉಭಯ ಆಟಗಾರರು ಮಾತ್ರ ತಂಡಕ್ಕಾಗಿ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ. ಇವರಿಬ್ಬರ ವಿಕೆಟ್​ ಪತನಗೊಂಡರೆ ಸಾಕು ತಂಡಕ್ಕೆ ಸೋಲು ಖಚಿತ ಎನ್ನಬಹುದು. ಅಷ್ಟರ ಮಟ್ಟಿಗೆ ಇವರ ಮೇಲೆ ತಂಡ ಅವಲಂಬಿತವಾಗಿದೆ. ಈ ಪಂದ್ಯದಲ್ಲಾದರೂ ಜಾನಿ ಬೇರ್​ಸ್ಟೊ, ಲಿವಿಂಗ್​ಸ್ಟೋನ್​ ಜಿತೇಶ್ ಶರ್ಮ, ಸ್ಯಾಮ್​ ಕರನ್​ ನಿರೀಕ್ಷಿತ ಬ್ಯಾಟಿಂಗ್​ ನಡೆಸುವ ಅನಿವಾರ್ಯತೆ ಇದೆ.

ಸಂಭಾವ್ಯ ತಂಡಗಳು


ಮುಂಬೈ ಇಂಡಿಯನ್ಸ್​:​
ರೋಹಿತ್ ಶರ್ಮಾ, ಇಶಾನ್ ಕಿಶನ್ (ವಿಕೆಟ್​ ಕೀಪರ್​), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಮೊಹಮ್ಮದ್ ನಬಿ, ಶ್ರೇಯಸ್ ಗೋಪಾಲ್, ಜಸ್​ಪ್ರೀತ್​ ಬುಮ್ರಾ, ಜೆರಾಲ್ಡ್ ಕೋಟ್ಜಿ, ಆಕಾಶ್ ಮಧ್ವಲ್.

ಪಂಜಾಬ್​ ಕಿಂಗ್ಸ್​: ಶಿಖರ್ ಧವನ್ (ನಾಯಕ), ಜಾನಿ ಬೈರ್‌ಸ್ಟೋವ್, ಜಿತೇಶ್ ಶರ್ಮಾ (ವಿಕೆಟ್​ ಕೀಪರ್​), ಅಶುತೋಷ್ ಶರ್ಮಾ, ಸ್ಯಾಮ್ ಕರನ್​, ಶಶಾಂಕ್ ಸಿಂಗ್, ಸಿಕಂದರ್ ರಜಾ, ಹರ್‌ಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ಕಗಿಸೊ ರಬಾಡ, ಅರ್ಶ್‌ದೀಪ್ ಸಿಂಗ್.

Exit mobile version