Site icon Vistara News

PBKS vs RR:​ ಬ್ಯಾಟಲ್​ ಆಫ್​​ ಕಿಂಗ್ಸ್​​ನಲ್ಲಿ ಗೆದ್ದು ಬೀಗೋರು ಯಾರು?; ರಾಜಸ್ಥಾನ್​-ಪಂಜಾಬ್​ ಮುಖಾಮುಖಿ

PBKS vs RR

ಮುಲ್ಲಾನ್‌ಪುರ್‌ (ಚಂಡೀಗಢ): ಟೂರ್ನಿಯಲ್ಲಿ ಸತತ ಗೆಲುವಿನೊಂದಿಗೆ ಮುನ್ನುಗ್ಗುತ್ತಿದ್ದ ರಾಜಸ್ಥಾನ್​ ರಾಯಲ್ಸ್​ಗೆ(PBKS vs RR) ಕಳೆದ ಪಂದ್ಯದಲ್ಲಿ ಗುಜರಾತ್​ ಟೈಟಾನ್ಸ್​ ಬ್ರೇಕ್​ ಹಾಕಿತ್ತು. ಇದೀಗ ಮತ್ತೆ ಗೆಲುವಿನ ಹಳಿ ಏರಲು ಸಜ್ಜಾಗಿರುವ ಸಂಜು ಪಡೆ​ ಶನಿವಾರದ ಐಪಿಎಲ್​ ಮುಖಾಮುಖಿಯಲ್ಲಿ ಪಂಜಾಬ್​ ಕಿಂಗ್ಸ್(Punjab Kings)​ ತಂಡದ ಸವಾಲು ಎದುರಿಸಲಿದೆ. ಪಂದ್ಯ ಪಂಜಾಬ್‌ ತವರು ಅಂಗಳದಲ್ಲಿ ನಡೆಯುತ್ತಿರುವ ಕಾರಣಕ್ಕಾಗಿ ಶಿಖರ್​ ಪಡೆಗೆ ಗೆಲುವಿನ ಸಾಧ್ಯತೆ ತುಸು ಹೆಚ್ಚು ಎನ್ನಲಡ್ಡಿಯಿಲ್ಲ.

ಪಂಜಾಬ್​ ಆಡಿದ 5 ಪಂದ್ಯಗಳಲ್ಲಿ 2 ಪಂದ್ಯಗಳನ್ನು ಗೆದ್ದಿದೆ. ಈ 2 ಗೆಲುವಿನಲ್ಲಿಯೂ ಮಧ್ಯಮ ಕ್ರಮಾಂಕದ ಆಟಗಾರ ಶಶಾಂಕ್‌ ಸಿಂಗ್‌ ಪ್ರಮುಖ ಪಾತ್ರವಹಿಸಿದ್ದರು. ಪ್ರತಿ ಪಂದ್ಯದಲ್ಲಿಯೂ ಶಕ್ತಿ ಮೀರಿ ಬ್ಯಾಟಿಂಗ್​ ನಡೆಸುವ ಇವರಿಗೆ ಅಶುತೋಷ್‌ ಶರ್ಮ ಉತ್ತಮ ಸಾಥ್​ ನೀಡುತ್ತಿದ್ದಾರೆ. ಉಭಯ ಆಟಗಾರರನ್ನು ಹೊರತುಪಡಿಸಿ ಉಳಿದ ಯಾವುದೇ ಆಟಗಾರರು ಕೂಡ ನಿರೀಕ್ಷಿತ ಪ್ರದರ್ಶನ ತೋರುತಿಲ್ಲ. ನಾಯಕ ಶಿಖರ್​ ಧವನ್​ ಆರಣಭಿಂಕ 2 ಪಂದ್ಯಗಳಲ್ಲಿ ಅಬ್ಬರಿಸಿದರೂ ಆ ಬಳಿಕ ಮಂಕಾಗಿದ್ದಾರೆ. ಜಾನಿ ಬೇರ್​ಸ್ಟೋ ಕೂಡ ಲೆಕ್ಕ ಭರ್ತಿಗೆ ಆಡುತ್ತಿರುವಂತೆ ತಂಡದಲ್ಲಿದ್ದಾರೆ.

ತಂಡದಲ್ಲಿ ಅನುಭವಿ ಬೌಲರ್​ಗಳಿದ್ದರೂ ಕೂಡ ಇದುವರಿಗಿನ ಪಂದ್ಯದಲ್ಲಿ ಅಷ್ಟು ಪರಿಣಾಮಕಾರಿಯಾಗಿ ಕಂಡುಬಂದಿಲ್ಲ. ಎಡಗೈ ವೇಗಿ ಅರ್ಶ್​ದೀಪ್​ ಸಿಂಗ್​ ಸಿಕ್ಕಾಪಟ್ಟೆ ವೈಡ್​ ಎಸೆತಗಳನ್ನು ಎಸೆಯುತ್ತಿದ್ದಾರೆ. ರಬಾಡ ಅಡ್ಡಿಯಿಲ್ಲ. ಕೊಂಚ ಮಟ್ಟಿನ ಬೌಲಿಂಗ್ ಪ್ರದರ್ಶನ ತೋರುತ್ತಿದ್ದಾರೆ. ಆರ್​ಸಿಬಿಯ ಮಾಜಿ ವೇಗಿ ಹರ್ಷಲ್​ ಪಟೇಲ್​ಗೆ ಈ ಬಾರಿ ಹರ್ಷ ಸಿಕ್ಕಿಲ್ಲ. ಪ್ರತಿ ಪಂದ್ಯದಲ್ಲೂ ದುಬಾರಿಯಾಗುತ್ತಿದ್ದಾರೆ. ಒಟ್ಟಾರೆಯಾಗಿ ಅಗ್ರ ಕ್ರಮಾಂಕದ ಬ್ಯಾಟರ್​ಗಳು ಮತ್ತು ಬೌಲರ್​ಗಳು ಕ್ಷಿಪ್ರ ಗತಿಯ ಫಾರ್ಮ್​ ಕಂಡುಕೊಳ್ಳಬೇಕಿದೆ.

ಇದನ್ನೂ ಓದಿ IPL 2024: ಆರ್​ಸಿಬಿ ವಿರುದ್ಧ ಅಬ್ಬರಿಸಿ ಟಿ20 ಕ್ರಿಕೆಟ್​ನಲ್ಲಿ ದಾಖಲೆ ಬರೆದ ಸೂರ್ಯಕುಮಾರ್

ರಾಜಸ್ಥಾನ್(Rajasthan Royals) ತಂಡ ಬ್ಯಾಟಿಂಗ್​ ಮತ್ತು ಬೌಲಿಂಗ್​ ಉತ್ತಮವಾಗಿದ್ದರೂ ಕೂಡ ಈ ತಂಡದ ಪ್ರದರ್ಶನದ ಮೇಲೆ ಹೆಚ್ಚು ನಂಬಿಕೆ ಇಡುವಂತಿಲ್ಲ. ಕಾರಣ ಪ್ರತಿ ಆವೃತ್ತಿಯಲ್ಲಿಯೂ ಆರಂಭಿಕ ಹಂತದಲ್ಲಿ ಸತತ ಗೆಲುವು ಸಾಧಿಸಿ ಆ ಬಳಿಕ ಸತತ ಸೋಲು ಕಂಡು ಪಾತಾಳಕ್ಕೆ ಕುಸಿಯುತ್ತದೆ. ಇದು ತಂಡದ ವಿಶೇಷತೆ. ಹೀಗಾಗಿ ನಾಳಿನ ಪಂದ್ಯದಲ್ಲಿಯೂ ತಂಡ ಮೇಲೆ ಬರವಸೆ ಇಡುವುದು ಕಷ್ಟ.

ಮುಖಾಮುಖಿ​


ರಾಜಸ್ಥಾನ್​ ರಾಯಲ್ಸ್​ ಮತ್ತು ಪಂಜಾಬ್​ ಕಿಂಗ್ಸ್​ ತಂಡಗಳು ಇದುವರೆಗೆ 26 ಬಾರಿ ಸೆಣಸಾಟ ನಡೆಸಿವೆ. ಇದರಲ್ಲಿ ರಾಜಸ್ಥಾನ್​ 15 ಪಂದ್ಯಗಳನ್ನು, ಪಂಜಾಬ್​ 11 ಪಂದ್ಯಗಳನ್ನು ಗೆದ್ದಿವೆ. ಕಳೆದ ಆವೃತ್ತಿಯ ಮುಖಾಮುಖಿಯಲ್ಲಿ ಉಭಯ ತಂಡಗಳು ತಲಾ ಒಂದೊಂದು ಪಂದ್ಯ ಗೆದ್ದಿವೆ.

ಸಂಭಾವ್ಯ ತಂಡಗಳು


ರಾಜಸ್ಥಾನ್​ ರಾಯಲ್ಸ್​: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ನಾಯಕ), ರಿಯಾನ್ ಪರಾಗ್, ಧ್ರುವ್ ಜುರೆಲ್, ಶಿಮ್ರಾನ್ ಹೆಟ್ಮೆಯರ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಅವೇಶ್ ಖಾನ್, ಕುಲದೀಪ್ ಸೇನ್, ಯುಜ್ವೇಂದ್ರ ಚಹಾಲ್.

ಪಂಜಾಬ್​ ಕಿಂಗ್ಸ್​: ಶಿಖರ್ ಧವನ್ (ನಾಯಕ), ಜಾನಿ ಬೈರ್‌ಸ್ಟೋವ್, ಜಿತೇಶ್ ಶರ್ಮಾ (ವಿಕೆಟ್​ ಕೀಪರ್​), ಅಶುತೋಷ್ ಶರ್ಮಾ, ಸ್ಯಾಮ್ ಕರನ್​, ಶಶಾಂಕ್ ಸಿಂಗ್, ಸಿಕಂದರ್ ರಜಾ, ಹರ್‌ಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ಕಗಿಸೊ ರಬಾಡ, ಅರ್ಶ್‌ದೀಪ್ ಸಿಂಗ್.

Exit mobile version