Site icon Vistara News

World Cup 2023 : ಪಾಕಿಸ್ತಾನದ ಗೊಡ್ಡು ಬೆದರಿಕೆ ಠುಸ್‌; ಭಾರತ ಹೇಳಿದ್ದೇ ಫೈನಲ್‌!

India pakistan match

#image_title

ಮುಂಬಯಿ: ವಿಶ್ವಕಪ್ 2023 ವೇಳಾಪಟ್ಟಿ (World Cup 2023) ಸಿದ್ಧಗೊಂಡಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) (ಪಿಸಿಬಿ) ನಿಯೋಜನೆಗೊಂಡಿರುವ ಕ್ರೀಡಾಂಗಣಗಳಿಗೆ ಒಪ್ಪಿಗೆ ಸೂಚಿಸಿದ್ದು, ಜೂನ್ 27ರಂದು ವೇಳಾಪಟ್ಟಿ ಮುಂಬಯಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಕಟಗೊಳ್ಳಲಿದೆ. ಅಹಮದಾಬಾದ್‌ನಲ್ಲಿ ಭಾರತ ವಿರುದ್ಧ, ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ವಿರುದ್ಧಶ ಚೆನ್ನೈನಲ್ಲಿ ಅಫ್ಘಾನಿಸ್ತಾನ ವಿರುದ್ಧ ಆಡುವುದಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಮೊದಲಿಗೆ ಆಕ್ಷೇಪ ವ್ಯಕ್ತಪಡಿಸಿತ್ತು. ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಈ ಬದಲಾವಣೆಗಳಿಗೆ ಕಿಮ್ಮತ್ತು ನೀಡದ ಕಾರಣ ಕರಡು ಪ್ರತಿಗೆ ಪಿಸಿಬಿ ಅನುಮೋದನೆ ಕೊಟ್ಟಿದೆ. ಹೀಗಾಗಿ ವಿಶ್ವ ಕಪ್‌ಗೆ (World Cup 2023) 100 ದಿನ ಬಾಕಿ ಇರುವಾಗ ವೇಳಾಪಟ್ಟಿ ಪ್ರಕಟವಾಗಲಿದೆ.

ವೇಳಾಪಟ್ಟಿ ಮಂಗಳವಾರ ಹೊರಬೀಳಲಿದೆ. ಪಾಕಿಸ್ತಾನವು (Pakistan) ಯೋಜಿತ ವೇಳಾಪಟ್ಟಿಯನ್ನು ಒಪ್ಪಿಕೊಂಡಿದೆ . ಯಾವುದೇ ಬದಲಾವಣೆಗಳು ಮಾಡಲಾಗಿಲ್ಲ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಕ್ರೀಡಾ ವೆಬ್‌ಸೈಟ್‌ ಒಂದಕ್ಕೆ ತಿಳಿಸಿದ್ದಾರೆ. ಪಾಕಿಸ್ತಾನದ ಆಕ್ಷೇಪದ ಹೊರತಾಗಿಯೂ, ಟೂರ್ನಿಯ ಕೇಂದ್ರ ಬಿಂದು ಎನಿಸಿರುವ ಭಾರತ ಮತ್ತು ಪಾಕಿಸ್ತಾನ ಪಂದ್ಯವು ಅಹಮದಾಬಾದ್‌ನಲ್ಲೇ ನಡೆಯಲಿದೆ. ಪಂದ್ಯವನ್ನು ಚೆನ್ನೈ ಅಥವಾ ಬೆಂಗಳೂರು ಅಥವಾ ಕೋಲ್ಕತಾಗೆ ಸ್ಥಳಾಂತರಿಸುವಂತೆ ಪಾಕಿಸ್ತಾನ ವಿನಂತಿಸಿತ್ತು. ಅದನ್ನು ಬಿಸಿಸಿಐ ಸಂಪೂರ್ಣವಾಗಿ ಅಲ್ಲಗೆಳೆದಿತ್ತು.

ಐಸಿಸಿಗೆ ಈ ಪಂದ್ಯವು ಮುಖ್ಯವಾಗಿದ್ದು, ಮೋದಿ ಸ್ಟೇಡಿಯಂನಲ್ಲಿ (Narendra Modi Stadium)ಆಡಿಸಲಾಗುವುದು. ನರೇಂದ್ರ ಮೋದಿ ಸ್ಟೇಡಿಯಂ 1,30,000 ಪ್ರೇಕ್ಷಕರಿಗೆ ಆತಿಥ್ಯ ನೀಡುತ್ತದೆ. ಅಷ್ಟೊಂದು ಟಿಕೆಟ್‌ಗಳು ಮಾರಾಟವಾಗುವ ನಿರೀಕ್ಷೆ ಇದೆ. ಹೀಗಾಗಿ ಐಸಿಸಿ ಮತ್ತು ಬಿಸಿಸಿಐ ಸ್ಥಳ ಬದಲಾವಣೆಗೆ ಒಪ್ಪಿಲ್ಲ.

ಭಾರತ ಪಾಕಿಸ್ತಾನ ನಡುವಿನ ಪಂದ್ಯ ಅಹ್ಮದಾಬಾದ್‌ನಲ್ಲೇ ನಡೆಯಲಿದ. ಪಾಕಿಸ್ತಾನ ಸ್ಥಳ ಬದಲಾವಣೆಗೆ ವಿನಂತಿ ಸಲ್ಲಿಸಿತ್ತು. ಆದರೆ ಆ ಬದಲಾವಣೆ ಮಾಡಿಲ್ಲ. ಇದು ಇಡೀ ಪಂದ್ಯಾವಳಿಯ ಅತ್ಯಂತ ಪ್ರಮುಖ ಮುಖಾಮುಖಿ. ಈ ಸ್ಟೇಡಿಯಮ್‌ ಹೊರತುಪಡಿಸಿದರೆ ಲಕ್ನೋ ಮತ್ತು ಕೋಲ್ಕೊತ್ತಾದಲ್ಲಿದೆ ದೊಡ್ಡ ಕ್ರೀಡಾಂಗಣವಿದೆ. ಆದರೆ ಆತಿಥೇಯ ಮಂಡಳಿಗೆ ಸ್ಥಳವನ್ನು ನಿರ್ಧರಿಸುವ ಹಕ್ಕು ಇದೆ. ಪಂದ್ಯಕ್ಕೆ ವಿವಿಐಪಿಗಳು ಹಾಜರಾಗುತ್ತಾರೆ. ಅವರ ಸುರಕ್ಷತೆಯನ್ನು ಪರಿಗಣಿಸಿದರೆ ಅಹಮದಾಬಾದ್‌ ಸೂಕ್ತ ಸ್ಥಳ ಎಂಬುದಾಗಿ ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ : World Cup 2023 : ವಿಶ್ವ ಕಪ್‌ಗೆ ತಂಡದ ಆಟಗಾರರ ಪಟ್ಟಿ ಸಲ್ಲಿಸಲು ಕೊನೇ ದಿನ ಪ್ರಕಟಿಸಿದ ಐಸಿಸಿ

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಐಸಿಸಿಯ ಉನ್ನತ ಅಧಿಕಾರಿಗಳು ಮತ್ತು ಸೆಲೆಬ್ರಿಟಿಗಳನ್ನು ಪಂದ್ಯಕ್ಕೆ ಆಹ್ವಾನಿಸಲಾಗುವುದು. ಪಾಕಿಸ್ತಾನ ಪ್ರಧಾನಿ ಮತ್ತು ಪಿಸಿಬಿ ಮುಖ್ಯಸ್ಥರನ್ನೂ ಬಿಸಿಸಿಐ ಆಹ್ವಾನಿಸಲಿದೆ. ಆದಾಗ್ಯೂ, ಅವರು ಪಂದ್ಯಕ್ಕೆ ಹಾಜರಾಗುತ್ತಾರೆಯೇ ಎಂಬುದು ಅವರಿಗೆ ಬಿಟ್ಟದ್ದು. ನರೇಂದ್ರ ಮೋದಿ ಸ್ಟೇಡಿಯಂ ಪ್ರಸ್ತುತ ಮೆಗಾ ಪಂದ್ಯಕ್ಕಾಗಿ ಸಿದ್ಧಗೊಂಡಿದೆ ಎಂದು ಅವರು ಹೇಳಿದ್ದಾರೆ .

ಉದ್ಘಾಟನಾ ಪಂದ್ಯ ಹಾಗೂ ಫೈನಲ್ ಪಂದ್ಯಕ್ಕೂ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯ ವಹಿಸಲಿದೆ. ಟೂರ್ನಿಯು ಅಕ್ಟೋಬರ್ 5 ರಂದು ಪ್ರಾರಂಭವಾಗಲಿದ್ದು, ನವೆಂಬರ್ 19 ರಂದು ಫೈನಲ್ ನಡೆಯಲಿದೆ.

ಭಾರತ ತಂಡದ ಸಂಭಾವ್ಯ ವಿಶ್ವಕಪ್ ವೇಳಾಪಟ್ಟಿ

ವಿಶ್ವಕಪ್ 2023 ಸ್ಟೇಡಿಯಮ್‌ಗಳು

ಅಹ್ಮದಾಬಾದ್: ನರೇಂದ್ರ ಮೋದಿ ಸ್ಟೇಡಿಯಂ
ಬೆಂಗಳೂರು: ಎಂ ಚಿನ್ನಸ್ವಾಮಿ ಕ್ರೀಡಾಂಗಣ
ಚೆನ್ನೈ: ಎಂಎ ಚಿದಂಬರಂ ಕ್ರೀಡಾಂಗಣ
ದೆಹಲಿ: ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂ
ಧರ್ಮಶಾಲಾ: ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣ
ಗುವಾಹಟಿ: ಅಸ್ಸಾಂ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣ
ಹೈದರಾಬಾದ್: ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ಉಪ್ಪಲ್
ಇಂದೋರ್: ಹೋಳ್ಕರ್ ಕ್ರೀಡಾಂಗಣ
ಕೋಲ್ಕೊತಾ: ಈಡನ್ ಗಾರ್ಡನ್ಸ್
ಮುಂಬಯಿ: ವಾಂಖೆಡೆ ಸ್ಟೇಡಿಯಂ (ಕನಿಷ್ಠ ಒಂದು ಸೆಮಿಫೈನಲ್)
ರಾಯ್ಪುರ: ಶಹೀದ್ ವೀರ್ ನಾರಾಯಣ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ
ರಾಜ್‌ಕೋಟ್‌: ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ

Exit mobile version