Site icon Vistara News

Pakistan Cricket Board: ಪಾಕಿಸ್ತಾನ ತಂಡದ ಆಯ್ಕೆ ಸಮಿತಿಗೆ ಹೊಸ ಮುಖ್ಯಸ್ಥರನ್ನು ನೇಮಿಸಿದ ಪಿಸಿಬಿ

Haroon Rasheed

ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡದ (ಪಿಸಿಬಿ)(Pakistan Cricket Board) ರಾಷ್ಟ್ರೀಯ ಆಯ್ಕೆ ಸಮಿತಿಯ ಮುಖ್ಯ ಆಯ್ಕೆಗಾರರನ್ನಾಗಿ ಮಾಜಿ ಆಟಗಾರ ಹರೂನ್ ರಶೀದ್ ಅವರನ್ನು ನೇಮಕ ಮಾಡಲಾಗಿದೆ. ಈ ವಿಚಾರವನ್ನು ಪಿಸಿಬಿ ಅಧ್ಯಕ್ಷ ನಜೀಮ್ ಸೇಥಿ ಖಚಿತ ಪಡಿಸಿದ್ದಾರೆ.

ಸೋಮವಾರ ಲಾಹೋರ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಜೀಮ್ ಸೇಥಿ, ಪಾಕಿಸ್ತಾನ ತಂಡದ ಹೊಸ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ಹರೂನ್ ರಶೀದ್‌ರನ್ನು ನೇಮಿಸಲಾಗಿದೆ. ಉಳಿದ ಸದಸ್ಯರನ್ನು ಶೀಘ್ರದಲ್ಲೇ ನೇಮಕ ಮಾಡಲಾಗುವುದು’ ಎಂದು ಹೇಳಿದರು. ಇದಕ್ಕೂ ಮುನ್ನ ಈ ಹುದ್ದೆಯಲ್ಲಿ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಪಾಕಿಸ್ತಾನ ಕ್ರಿಕೆಟ್ ನಿರ್ವಹಣಾ ಸಮಿತಿ ರಚನೆಯಾದ ಕೂಡಲೇ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿಯನ್ನು ಹಂಗಾಮಿ ಮುಖ್ಯ ಆಯ್ಕೆಗಾರ ಎಂದು ನೇಮಿಸಿತ್ತು ಮತ್ತು ಅವರನ್ನು ದೀರ್ಘಾವಧಿಯ ಆಧಾರದ ಮೇಲೆ ಮುಂದುವರಿಸಬೇಕೆಂದು ನಜಿಮ್ ಸೇಥಿ ಬಯಸಿದ್ದರು. ಆದರೆ ಶಾಹಿದ್ ಅಫ್ರಿದಿ ಈ ಹುದ್ದೆಯಲ್ಲಿ ಮುಂದುವರಿಯಲು ನಿರಾಕರಿಸಿದ್ದಾರೆ ಹೀಗಾಗಿ ಇದೀಗ ಆಯ್ಕೆ ಸಮಿತಿಗೆ ಹರೂನ್ ರಶೀದ್ ಅವರನ್ನು ನೇಮಿಸಲಾಗಿದೆ.

ಹರೂನ್ ರಶೀದ್ ಪಾಕಿಸ್ತಾನ ಕ್ರಿಕೆಟ್ ತಂಡದ ಪರ 23 ಟೆಸ್ಟ್ ಮತ್ತು 12 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಸದ್ಯ ಇವರ ಅಧಿಕಾರವಧಿಯಲ್ಲಿ ತಂಡ ಹೇಗೆ ಪ್ರದರ್ಶನ ತೋರಲಿದೆ ಎನ್ನುವುದು ಕಾದು ನೋಡಬೇಕಿದೆ. ಜತೆಗೆ ಇದೇ ವರ್ಷ ನಡೆಯುವ ಏಷ್ಯಾ ಕಪ್​ ಮತ್ತು ಏಕದಿನ ವಿಶ್ವಕಪ್​ಗೆ ಬಲಿಷ್ಠ ತಂಡವನ್ನು ಕಟ್ಟುವ ದೊಡ್ಡ ಜವಾಬ್ದಾರಿಯೂ ಇವರ ಮೇಲಿದೆ.

ಇದನ್ನೂ ಓದಿ | Ramiz Raja | ಬಿಜೆಪಿ ಮನಸ್ಥಿತಿ ಹೊಂದಿರುವ ಬಿಸಿಸಿಐ; ರಮೀಜ್​​ ರಾಜಾ​ ಹೇಳಿಕೆಗೆ​ ಆಕ್ರೋಶ!

Exit mobile version