ನವ ದೆಹಲಿ: ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) 2023ರ ವಿಶ್ವಕಪ್ನಲ್ಲಿ (World Cup 2023) ಭಾಗವಹಿಸುವುದನ್ನು ಖಚಿತಪಡಿಸಿಕೊಳ್ಳಲು ಪಾಕಿಸ್ತಾನ ಸರ್ಕಾರದ ಅನುಮತಿಗಾಗಿ ಕಾಯುತ್ತಿದೆ. ಕರಡು ವೇಳಾಪಟ್ಟಿಗೆ ಒಪ್ಪಿಗೆ ನೀಡಿರುವ ಹೊರತಾಗಿಯೂ ಸರಕಾರದ ಅನುಮತಿ ದೊರೆಯದೇ ಭಾರತಕ್ಕೆ ಪ್ರಯಾಣ ಮಾಡುವುದಿಲ್ಲ ಎಂದು ಆ ದೇಶ ಐಸಿಸಿಗೆ ಮಾಹಿತಿ ನೀಡಿದೆ. ಇದೀಗ ತಂಡದ ಭದ್ರತೆಯ ವಿಚಾರದಲ್ಲಿ ತಪಾಸಣೆ ನಡೆಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಭಾರತಕ್ಕೆ ನಿಯೋಗವೊಂದನ್ನು ಕಳುಹಿಸಲಿದೆ ಎಂದು ವರದಿಯಾಗಿದೆ. ಅಹಮದಾಬಾದ್, ಚೆನ್ನೈ, ಬೆಂಗಳೂರು, ಕೋಲ್ಕತಾ ಮತ್ತು ಹೈದರಾಬಾದ್ನಲ್ಲಿ ಬಾಬರ್ ಅಜಮ್ ಪಡೆ ಆಡಲಿದ್ದು, ಅಲ್ಲೆಲ್ಲ ಆಂತರಿಕ ತಂಡ ವೀಕ್ಷಣೆ ನಡೆಸಲಿದೆ.
ಪಂದ್ಯದ ಸ್ಥಳಗಳು ಸೇರಿದಂತೆ ಭಾರತದ ಪ್ರವಾಸಕ್ಕೆ ಪಿಸಿಬಿಗೆ ಪಾಕಿಸ್ತಾನ ಸರ್ಕಾರದ ಅನುಮತಿ ಬೇಕು. ನಿರ್ದೇಶನಕ್ಕಾಗಿ ನಾವು ನಮ್ಮ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದೇವೆ. ಸರಕಾರ ಅಭಿಪ್ರಾಯ ಹೇಳಿದ ಬಳಿಕ ನಾವು ವಿಶ್ವ ಕಪ್ ಪಾಲ್ಗೊಳ್ಳುವಿಕೆಯನ್ನು ದೃಢೀಕರಿಸುತ್ತೇವೆ “ಎಂದು ಪಿಸಿಬಿ ವಕ್ತಾರರು ತಿಳಿಸಿದ್ದಾರೆ.
ಇದನ್ನೂ ಓದಿ : ICC World Cup 2023: ಭಾರತ ತಂಡಕ್ಕೆ ಮೆಂಟರ್ ಆಗಲಿದ್ದಾರೆ ಎಂ.ಎಸ್ ಧೋನಿ; ವರದಿ
ತಂಡ ಬಂದು ಹೋದ ಬಳಿಕ ಕ್ರೀಡಾಂಗಣಗಳ ಬಗ್ಗೆ ಐಸಿಸಿಯೊಂದಿಗೆ ಚರ್ಚೆ ನಡೆಸುವ ಜೊತೆಗೆ, ಪಂದ್ಯಾವಳಿಯಲ್ಲಿ ಭಾಗವಹಿಸಲು ಅಗತ್ಯ ಅನುಮೋದನೆ ಪಡೆಯಲು ಸರ್ಕಾರದೊಂದಿಗೆ ಚರ್ಚೆ ನಡೆಸಲಿದ್ದೇವೆ ಎಂಬುದಾಗಿಯೂ ಪಿಸಿಬಿ ಹೇಳಿದೆ.
ಪಾಕಿಸ್ತಾನ ವಿಶ್ವಕಪ್ 2023 ವೇಳಾಪಟ್ಟಿ
ಅಕ್ಟೋಬರ್ 6: ಕ್ವಾಲಿಫೈಯರ್ 1ರ ವಿರುದ್ಧ, ಹೈದರಾಬಾದ್
ಅಕ್ಟೋಬರ್ 12: ಕ್ವಾಲಿಫೈಯರ್2ರ ವಿರುದ್ಧ, ಹೈದರಾಬಾದ್
ಅಕ್ಟೋಬರ್ 15: ಭಾರತ ವಿರುದ್ಧ, ಅಹಮದಾಬಾದ್
ಅಕ್ಟೋಬರ್ 20: ಆಸ್ಟ್ರೇಲಿಯಾ ವಿರುದ್ಧ, ಬೆಂಗಳೂರು
ಅಕ್ಟೋಬರ್ 23: ಅಫ್ಘಾನಿಸ್ತಾನ ವಿರುದ್ಧ, ಚೆನ್ನೈ
ಅಕ್ಟೋಬರ್ 27: ದಕ್ಷಿಣ ಆಫ್ರಿಕಾ ವಿರುದ್ಧ, ಚೆನ್ನೈ
ಅಕ್ಟೋಬರ್ 21: ಬಾಂಗ್ಲಾದೇಶ ವಿರುದ್ಧ, ಕೋಲ್ಕೊತಾ
ನವೆಂಬರ್ 5: ನ್ಯೂಜಿಲೆಂಡ್ ವಿರುದ್ಧ, ಬೆಂಗಳೂರು
ನವೆಂಬರ್ 12: ಇಂಗ್ಲೆಂಡ್ ವಿರುದ್ಧ, ಕೋಲ್ಕೊತಾ
ಸರ್ಕಾರದ ಪ್ರತಿಕ್ರಿಯೆಯು ಪಾಕಿಸ್ತಾನ ತಂಡದ ಪ್ರಯಅಣದ ಸಮಯವನ್ನು ನಿರ್ಧರಿಸಲಿದೆ. ಬೇರೆಲ್ಲ ತಂಡಗಳು ಪ್ರಯಾಣದ ಅವಧಿಯನ್ನು ಘೋಷಿಸಿದ್ದರೂ ಪಾಕಿಸ್ತಾಣ ಇನ್ನೂ ನಿಗದಿಪಡಿಸಿಲ್ಲ. ಭದ್ರತೆಗಳ ವೀಕ್ಷಣೆಯನ್ನು ಕೆಲವು ತಂಡಗಳು ಪ್ರಮುಖ ಟೂರ್ನಿಗಳ ಮುಂಚಿತವಾಗಿ ವಾಡಿಕೆಯಂತೆ ನಡೆಸುತ್ತವೆ. ಪಾಕಿಸ್ತಾನದ ಭದ್ರತಾ ತಂಡದ ವರದಿಗೆ ಪ್ರತಿಕ್ರಿಯೆಯಾಗಿ ಭಾರತ ವಿರುದ್ಧದ 2016ರ ವಿಶ್ವ ಟಿ20 ಪಂದ್ಯವನ್ನು ಧರ್ಮಶಾಲಾದಿಂದ ಕೋಲ್ಕತಾಗೆ ಮರು ನಿಗದಿಪಡಿಸಿದ್ದು ಇದಕ್ಕೆ ಸೂಕ್ತ ಉದಾಹರಣೆ. ಆ ಸಮಯದಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಪಾಕಿಸ್ತಾನದ ಭದ್ರತಾ ನಿಯೋಗದ ಶಿಫಾರಸುಗಳ ಆಧಾರದ ಮೇಲೆ ಧರ್ಮಶಾಲಾದಲ್ಲಿ ಆಡುವ ಬಗ್ಗೆ ತನ್ನ ಆಕ್ಷೇಪಣೆಗಳನ್ನು ಎತ್ತಿತ್ತು. ಬಳಿಕ ಐಸಿಸಿ ಮತ್ತು ಬಿಸಿಸಿಐಗೆ ಸ್ಥಳ ಬದಲಾವಣೆ ನಿರ್ಧಾರ ಕೈಗೊಂಡಿತ್ತು
ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅಕ್ಟೋಬರ್ 15ರಂದು ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಒಂದು ವೇಳೆ ಭಾರತ-ಪಾಕಿಸ್ತಾನ ತಂಡಗಳೆರಡೂ ಸೆಮಿಫೈನಲ್ಗೇರಿ ಮುಖಾಮುಖಿಯಾದರೆ ಈ ಪಂದ್ಯ ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿದೆ.