ಲಾಹೋರ್: ಲಾಹೋರ್ನ ಗಡಾಫಿ ಸ್ಟೇಡಿಯಂನಲ್ಲಿ ಬುಧವಾರ (ಸೆಪ್ಟೆಂಬರ್ 6) ನಡೆದ ಏಷ್ಯಾಕಪ್ನ ಸೂಪರ್ ಫೋರ್ ಹಂತದ ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಿವೆ. ಪ್ರಮುಖ ಮುಖಾಮುಖಿಯ ಎರಡನೇ ಇನ್ನಿಂಗ್ಸ್ ಸಮಯದಲ್ಲಿ, ಫ್ಲಡ್ಲೈಟ್ ವೈಫಲ್ಯದಿಂದಾಗಿ ಆಟವನ್ನು ನಿಲ್ಲಿಸಲಾಯಿತು. ಫ್ಲಡ್ ಲೈಟ್ ಗಳಲ್ಲಿ ಒಂದು ಆಫ್ ಆಯಿತು ಮತ್ತು ಅಂಪೈರ್ ಗಳಿಗೆ ಆಟ ನಿಲ್ಲಿಸುವುದನ್ನು ಬಿಟ್ಟು ಬೇರೆ ಆಯ್ಕೆ ಇರಲಿಲ್ಲ.
ಪಾಕಿಸ್ತಾನ ಹಾಲಿ ಏಷ್ಯಾ ಕಪ್ಗೆ ಆತಿಥ್ಯ ವಹಿಸಿರುವ ದೇಶವಾಗಿದೆ. ಹೀಗಾಗಿ ಇಲ್ಲಿನ ಕ್ರಿಕೆಟ್ ಮಂಡಳಿಗೆ ಹೆಚ್ಚಿನ ಜವಾಬ್ದಾರಿಯಿದೆ. ಆದರೆ, ಫ್ಲಡ್ ಲೈಟ್ ಆಫ್ ಆಗುವ ಮೂಲಕ ಪಾಕಿಸ್ತಾನ ಮಂಡಳಿ ಮುಖಭಂಗಕ್ಕೆ ಒಳಗಾಗಿದೆ. ಪಾಕಿಸ್ತಾನಕ್ಕೆ ಹೋಗಲು ಭಾರತ ತಂಡಕ್ಕೆ ಅವಕಾಶ ಸಿಗದ ಕಾರಣ ಪಂದ್ಯವನ್ನು ಶ್ರೀಲಂಕಾದ ಸಹ ಆತಿಥ್ಯದಲ್ಲಿ ನಡೆಸಲಾಗುತ್ತಿದೆ. ಆದರೆ, ಶ್ರೀಲಂಕಾದಲ್ಲಿ ಮಳೆಯಿಂದಾಗಿ ಹಲವಾರು ಪಂದ್ಯಗಳು ರದ್ದಾಗಿವೆ.