ನವ ದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಧುನಿಕ ಯುಗದ ವಿಶ್ವದ ಶ್ರೇಷ್ಠ ನಾಯಕರಲ್ಲಿ ಒಬ್ಬರು. ಅತಿ ಹೆಚ್ಚು ಅಭಿಮಾನಿಗಳು ಹೊಂದಿರುವ ರಾಷ್ಟ್ರ ನಾಯಕರ ಪಟ್ಟಿಯಲ್ಲಿ ಮೋದಿ ಅಗ್ರಗಣ್ಯರು. ಹೀಗಾಗಿ ಅವರೊಂದಿಗೆ ಫೋಟೊ ತೆಗೆಸಿಕೊಂಡು ಅದನ್ನು ತಮ್ಮ ತಿಜೋರಿಯಲ್ಲಿ ಜೋಪಾನವಾಗಿಟ್ಟುಕೊಳ್ಳುವುದು ಹಲವರ ಕನಸು. ಆದರೆ, ಈ ಕನಸು ಈಡೇರಿಸಿಕೊಳ್ಳಲು ಎಲ್ಲರಿಗೂ ಸಾಧ್ಯವಿಲ್ಲ. ಆದರೂ ಅದೃಷ್ಟವಂತರಿಗಎ ಅಂಥ ಅವಕಾಶ ಈಗಾಗಲೇ ಸಿಕ್ಕಿದೆ. ಇಂತಹ ಸ್ಮರಣೀಯ ಫೋಟೊಗಳು ನಿಮ್ಮಿಂದ ಕಳೆದು ಹೋಗಿದ್ದರೆ ಅಥವಾ ಮೋದಿ ಜತೆ ತೆಗಿಸಿಕೊಂಡಿದ್ದ ಫೋಟೊ ನಿಮ್ಮ ಕೈಗೆ ಸಿಗದೇ ಹೋಗಿದ್ದರೆ ಮಂಡೆ ಬಿಸಿ ಮಾಡುವ ಅವಶ್ಯಕತೆ ಇಲ್ಲ. ನಮೊ ಆ್ಯಪ್ (NaMo) ಈ ಫೋಟೊವನ್ನು ಹುಡುಕಿಕೊಟ್ಟು ನಿಮ್ಮನ್ನು ಖುಷಿ ಪಡಿಸಲು ಕಾರ್ಯದಲ್ಲಿ ಯಶಸ್ಸಾಗಿದೆ.
ನಮೊ ಆ್ಯಪ್ನ ಡೆವಲಪರ್ಗಳು ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಬಳಸಿಕೊಂಡು ಈ ಕಾರ್ಯವನ್ನು ಮಾಡುತ್ತಿದೆ. ಹೇಗೆಂದರೆ ಮೋದಿ ಅವರು ಪ್ರಧಾನಿಯಾಗಿ ವಿಶ್ವದ ಉದ್ದಗಲಕ್ಕೂ ಸಂಚರಿಸುವ ವೇಳೆ ಲಕ್ಷಾಂತರ ಮಂದಿಯನ್ನು ಭೇಟಿಯಾಗಿದ್ದಾರೆ. ಅವರೆಲ್ಲರ ಜತೆ ಫೋಟೋ ತೆಗೆಸಿಕೊಂಡಿದ್ದಾರೆ. ಜತೆಗೆ ಮೋದಿ ನಾಯಕರಾಗುವ ಮೊದಲು ತೆಗೆಸಿಕೊಂಡು ಹಲವಾರು ಚಿತ್ರಗಳು ಸೇರಿದಂತೆ ಎಲ್ಲವನ್ನೂ ಮೋದಿ ಆ್ಯಪ್ನ ತಂಡ ಸಂಗ್ರಹಿಸಿಟ್ಟಿದೆ. ಅದನ್ನು ಡಿಜಿಟಲ್ ರೂಪಕ್ಕೆ ಇಳಿಸಿದೆ. ಅಷ್ಟೊಂದು ದೊಡ್ಡ ಬಂಡಲ್ ನಡುವೆ ತಮ್ಮ ಫೋಟೊಗಳನ್ನು ಹುಡುಕುವುದು ಸುಲಭವಲ್ಲ. ಆದರೆ, ಡೆವಲಪರ್ಗಳು ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಫೊಟೊ ಹುಡುಕಲು ನೆರವಾಗುತ್ತಿದ್ದಾರೆ.
ಫೋಟೊ ಪಡೆಯುವುದು ಹೇಗೆ?
ಮೊದಲಿಗೆ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬೇಕು. ಬಳಿಕ ನಿಮ್ಮ ಮುಖವನ್ನು ಮೊಬೈಲ್ ಕ್ಯಾಮೆರಾದಲ್ಲಿ ಸ್ಕ್ಯಾನ್ ಮಾಡಿಕೊಂಡು ಸರ್ಚ್ ಬಟನ್ ಒತ್ತಿ. ತಕ್ಷಣ ನಿಮ್ಮ ಫೊಟೋ ಅಲ್ಲಿದ್ದರೆ ಪಾಪ್ಅಪ್ ಆಗುತ್ತದೆ. ಸದ್ಯದ ಮಟ್ಟಿಗೆ ಮೂವತ್ತು ದಿನಗಳ ಹಿಂದಿನ ಫೊಟೋಗಳು ಮಾತ್ರ ಲಭಿಸುತ್ತಿವೆ. ಮುಂದಿನ ದಿನಗಳಲ್ಲಿ ಎಲ್ಲ ಫೋಟೋಗಳು ಸಿಗಲಿವೆ ಎಂದು ಡೆವಲಪರ್ ತಂಡ ಹೇಳಿದೆ.
ಇದನ್ನೂ ಓದಿ : Amit Shah: ನರೇಂದ್ರ ಮೋದಿ ನೇತೃತ್ವದಿಂದ ಮಾತ್ರ ಕರ್ನಾಟಕದ ಕಲ್ಯಾಣ: ಬೀದರ್‌ನ ಗೊರಟಾದಲ್ಲಿ ಅಮಿತ್ ಶಾ
ಎಂಪಿ ಮತ್ತು ಬಿಜೆಪಿ ನಾಯಕರಿಗೆ ಪ್ರಧಾನಿ ಮೋದಿ ಅವರ ಜತೆಗಿನ ಫೋಟೊ ಪಡೆದುಕೊಳ್ಳುವುದು ಸುಲಭ. ಆದರೆ, ಅವರ ಅಭಿಮಾನಿಗಳಿಗೆ ಸರಳವಾಗಿರಲಿಲ್ಲ. ಇದೀಗ ನಮೊ ಟೀಮ್ ಎಲ್ಲವನ್ನೂ ಸಲೀಸು ಮಾಡಿದೆ ಎಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.