Site icon Vistara News

INDvsAUS : ಪ್ರದರ್ಶನ ವೈಫಲ್ಯ; ಉಪನಾಯಕನ ಪಟ್ಟ ಕಳೆದುಕೊಂಡ ರಾಹುಲ್​

IND VS AUS

#image_title

ನವ ದೆಹಲಿ: ಪ್ರದರ್ಶನ ವೈಫಲ್ಯ ಎದುರಿಸಿದ ಕನ್ನಡಿಗ ಕೆ. ಎಲ್​ ರಾಹುಲ್​ ಆಸ್ಟ್ರೇಲಿಯಾ (INDvsAUS) ವಿರುದ್ಧದ ಮುಂದಿನೆರಡು ಪಂಧ್ಯಗಳಿಗೆ ಟೆಸ್ಟ್​ ತಂಡದ ಉಪನಾಯಕನ ಪಟ್ಟ ಕಳೆದುಕೊಂಡಿದ್ದಾರೆ. ನಿರಂತರ ವೈಫಲ್ಯ ಎದುರಿಸುತ್ತಿರುವ ಕೆ. ಎಲ್​ ರಾಹುಲ್​ (KL Rahul) ಅವರನ್ನು ತಂಡಕ್ಕೆ ಸೇರಿಸಿಕೊಂಡಿರುವ ಬಗ್ಗೆ ಮಾಜಿ ವೇಗದ ಬೌಲರ್ ವೆಂಕಟೇಶ್​ ಪ್ರಸಾದ್​ ಸೇರಿದಂತೆ ಹಿರಿಯ ಕ್ರಿಕೆಟಿಗರನೇಕರು ಟೀಕೆ ವ್ಯಕ್ತಪಡಿಸಿದ್ದರು. ಇದೀಗ ಬಿಸಿಸಿಐ (BCCI) ಕೊನೇ ಎರಡು ಪಂದ್ಯಗಳಿಗೆ ತಂಡವನ್ನು ಪ್ರಕಟಿಸಿದ್ದು, ಅಲ್ಲಿ ರಾಹುಲ್​ಗೆ ನೀಡಿದ್ದ ಜವಾಬ್ದಾರಿಯನ್ನು ವಾಪಸ್​ ಪಡೆಯಲಾಗಿದೆ.

ಕೆ. ಎಲ್​ ರಾಹುಲ್​ ಕಳೆದ ಏಳು ಟೆಸ್ಟ್​ ಪಂದ್ಯಗಳಲ್ಲಿ ಕೇವಲ 175 ರನ್​ ಮಾತ್ರ ಬಾರಿಸಿದ್ದಾರೆ. ಆದಾಗ್ಯೂ ಅವರನ್ನು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿಗೆ ಆಯ್ಕೆ ಮಾಡಲಾಗಿತ್ತು. ಇದೇ ವೇಳೆ ಅವರ ವಿರುದ್ಧ ಟೀಕೆಗಳೂ ಜಾಸ್ತಿಯಾಗಿದ್ದವು. ಒತ್ತಡಕ್ಕೆ ಬಿದ್ದ ಅವರು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಇದೀಗ ಅವರನ್ನು ಉಪನಾಯಕನ ಪಟ್ಟದಿಂದ ಕೆಳಕ್ಕೆ ಇಳಿಸಿದ ಕಾರಣ ಮುಂದಿನ ಎರಡು ಪಂದ್ಯಗಳಲ್ಲಿ ಆಡುವ 11ರ ಬಳಗದಲ್ಲಿ ಅವಕಾಶ ಪಡೆಯುವುದು ಕೂಡ ಕಷ್ಟ ಎಂದು ಹೇಳಲಾಗುತ್ತಿದೆ.

ಕೆ. ಎಲ್​ ರಾಹುಲ್​ ಬಾಂಗ್ಲಾದೇಶ ಪ್ರವಾಸದಲ್ಲಿನ ಎರಡು ಟೆಸ್ಟ್​ನಲ್ಲಿ ನಾಯಕತ್ವ ವಹಿಸಿಕೊಂಡಿದ್ದರು. ಚೇತೇಶ್ವರ್​ ಪೂಜಾರ ಉಪನಾಯಕರಾಗಿದ್ದರು. ಅದೇ ನೆಲೆಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ಗೂ ಅವಕಾಶ ನೀಡಲಾಗಿತ್ತು. ಆದರೆ, ಅವರು ಪ್ರದರ್ಶನ ನೀಡಲು ವಿಫಲರಾಗಿದ್ದರು. ಇದೀಗ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದ್ದರೂ ಉಪನಾಯಕನ ಪಟ್ಟ ಕಸಿದುಕೊಳ್ಳಲಾಗಿದೆ.

ಉತ್ತಮ ಫಾರ್ಮ್​ನಲ್ಲಿರುವ ಶುಭ್​ಮನ್ ಗಿಲ್​ ಅವರನ್ನು ತಂಡದಿಂದ ಹೊರಕ್ಕಿಟ್ಟು ರಾಹುಲ್ ಅವರನ್ನು ಆಡುವ ಬಳಗಕ್ಕೆ ಸೇರಿಸಿಕೊಳ್ಳಲಾಗಿತ್ತು. ಈ ವಿಚಾರದಲ್ಲಿ ಟೀಮ್​ ಇಂಡಿಯಾ ಮ್ಯಾಜೇನ್ಮೆಂಟ್​ ಟೀಕೆಗಳನ್ನು ಎದುರಿಸಿತ್ತು.

ಟೆಸ್ಟ್​ ಸರಣಿಯ ಉಳಿದೆರಡು ಪಂದ್ಯಕ್ಕೆ ಭಾರತ ತಂಡ

ರೋಹಿತ್​ ಶರ್ಮಾ(ನಾಯಕ), ಚೇತೇಶ್ವರ ಪೂಜಾರ, ವಿರಾಟ್​ ಕೊಹ್ಲಿ, ಕೆ.ಎಲ್​. ರಾಹುಲ್, ಸೂರ್ಯಕುಮಾರ್​ ಯಾದವ್, ಶ್ರೇಯಸ್​ ಅಯ್ಯರ್​, ಅಕ್ಷರ್​ ಪಟೇಲ್​, ಕೆ.ಎಸ್​ ಭರತ್​, ರವೀಂದ್ರ ಜಡೇಜಾ, ಆರ್​. ಅಶ್ವಿನ್​, ಮೊಹಮ್ಮದ್​ ಸಿರಾಜ್​, ಮೊಹಮ್ಮದ್​ ಶಮಿ, ಕುಲ್​ದೀಪ್​ ಯಾದವ್​, ಉಮೇಶ್​ ಯಾದವ್​, ಜೈದೇವ್​ ಉನಾದ್ಕತ್​, ಇಶಾನ್​ ಕಿಶನ್​.

Exit mobile version