ಲಕ್ನೋ: ಹಾಲಿ ಆವೃತ್ತಿಯ ವಿಶ್ವಕಪ್ ಟೂರ್ನಿಯಲ್ಲಿ ಆಡಿದ 5 ಪಂದ್ಯಗಳನ್ನು ಗೆದ್ದು ಬೀಗಿರುವ ಭಾರತ(IND vs ENG) ತಂಡ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿ ಕಣಕ್ಕಿಳಿಯಲು ಸಜ್ಜಾಗಿದೆ. ಭಾನುವಾರ ನಡೆಯುವ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಈ ಪಂದ್ಯದ ಪಿಚ್ ರಿಪೋರ್ಟ್, ಹವಾಮಾನ ವರದಿ ಮತ್ತು ಸಂಭಾವ್ಯ ತಂಡ ಮಾಹಿತಿ ಇಂತಿದೆ.
ಗೆದ್ದರೆ ಭಾರತಕ್ಕೆ ಸೆಮಿ ಟಿಕೆಟ್
ಸೆಮಿಫೈನಲ್ ಪ್ರವೇಶ ಪಡೆಯಲು 9 ಪಂದ್ಯಗಳಲ್ಲಿ ಕನಿಷ್ಠ 6 ಪಂದ್ಯಗಳನ್ನು ಗೆಲ್ಲಲೇ ಬೇಕು. ಸದ್ಯ ಭಾರತ 5 ಪಂದ್ಯಗಳನ್ನು ಗೆದ್ದಿದೆ. ಇಂಗ್ಲೆಂಡ್ ವಿರುದ್ಧವೂ ಗೆದ್ದರೆ ಅಧಿಕೃತವಾಗಿ ಸೆಮಿಫೈನಲ್ ಪ್ರವೇಶ ಪಡೆಯಲಿದೆ. ಅಲ್ಲದೆ ಸೆಮಿ ಪ್ರವೇಶಿಸಿದ ಮೊದಲ ತಂಡ ಎನಿಸಿಕೊಳ್ಳಲಿದೆ. ಸದ್ಯಕ್ಕೆ ಭಾರತ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನ ಪಡೆದಿದೆ.
ಪಿಚ್ ರಿಪೋರ್ಟ್
ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನ(Ekana Cricket Stadium, Lucknow) ಪಿಚ್ ಆರಂಭದಲ್ಲಿ ಬ್ಯಾಟಿಂಗ್ ನಡೆಸಲು ಸೂಕ್ತವಾಗಿದ್ದರೂ ಆ ಬಳಿಕ ಸಂಪೂರ್ಣ ಬೌಲಿಂಗ್ ಸ್ನೇಹಿಯಾಗಲಿದೆ. ಬಡಬಡನೆ ವಿಕೆಟ್ ಉದುರಿ ಹೋಗುತ್ತದೆ. ಇದಕ್ಕೆ ಇಲ್ಲಿ ನಡೆದ ಈ ಹಿಂದಿನ ಪಂದ್ಯಗಳ ಫಲಿತಾಂಶವೇ ಉತ್ತಮ ನಿದರ್ಶನ. ಆರಂಭದಲ್ಲಿ ಬ್ಯಾಟಿಂಗ್ ನಡೆಸುವ ತಂಡ ಸುಮಾರು 15 ಓವರ್ಗೆ 80 ರಿಂದ 90 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿರುತ್ತದೆ. ಆ ಬಳಿಕ ಬೌಲರ್ಗಳು ಅದರಲ್ಲೂ ಸ್ಪಿನ್ನರ್ಗಳು ಸಂಪೂರ್ಣ ಹಿಡಿತ ಸಾಧಿಸಿ ವಿಕೆಟ್ ಕೀಳುತ್ತಾರೆ. ಹೀಗಾಗಿ ಉಭಯ ತಂಡಗಳು ಸ್ಪಿನ್ನ್ ಬೌಲಿಂಗ್ಗೆ ಹೆಚ್ಚಿನ ಮಹತ್ವದ ನೀಡಬಹುದು.
ಇದನ್ನೂ ಓದಿ AUS vs NZ: ಚೊಚ್ಚಲ ವಿಶ್ವಕಪ್ ಶತಕ ಬಾರಿಸಿ ಹಲವು ದಾಖಲೆ ಬರೆದ ಟ್ರಾವಿಸ್ ಹೆಡ್
Hello Lucknow 👋#TeamIndia are here for their upcoming #CWC23 clash against England 👌👌#MenInBlue | #INDvENG pic.twitter.com/FNF9QNVUmy
— BCCI (@BCCI) October 25, 2023
ಹವಾಮಾನ ವರದಿ
ಲಕ್ನೋದಲ್ಲಿ ಪಂದ್ಯ ನಡೆಯುವ ವೇಳೆ 32 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಶೇ 40 ರಷ್ಟು ಮಳೆಯ ಸಾಧ್ಯತೆ ಇಲ್ಲ ಎಂದು ವರದಿಯಲ್ಲಿ ತಿಳಿಸಿದೆ. ಆದ್ದರಿಂದ ಪಂದ್ಯಕ್ಕೆ ಯಾವುದೇ ಮಳೆಯ ಭೀತಿ ಇಲ್ಲ. ಹೀಗಾಗಿ ಪಂದ್ಯವನ್ನು ಅಭಿಮಾನಿಗಳು ಸಂಪೂರ್ಣವಾಗಿ ಕಣ್ತುಂಬಿಕೊಳ್ಳಬಹುದು. ಈ ಹಿಂದೆ ಇಲ್ಲ ನಡೆದಿದ್ದ ಎರಡು ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿತ್ತು. ಒಂದೊಮ್ಮೆ ಹವಾಮಾನದಲ್ಲಿ ಭಾರಿ ವೈಪರೀತ್ಯ ಕಂಡು ಮಳೆ ಬಂದು ಪಂದ್ಯ ರದ್ದಾದರೆ ಇತ್ತಂಡಗಳಿಗೂ ತಲಾ ಒಂದು ಅಂಕ ದೊರೆಯಲಿದೆ. ಏಕೆಂದರೆ ಲೀಗ್ ಪಂದ್ಯಗಳಿಗೆ ಮೀಸಲು ದಿನ ಇಲ್ಲ.
ಸಂಭಾವ್ಯ ತಂಡ
ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಆರ್ ಅಶ್ವಿನ್. ಮೊಹಮ್ಮದ್ ಶಮಿ, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ.
ಇದನ್ನೂ ಓದಿ IND vs ENG: ಭಾರತ-ಇಂಗ್ಲೆಂಡ್ ವಿಶ್ವಕಪ್ ದಾಖಲೆಯೇ ಬಲು ರೋಚಕ
India vs England world Cup 2023#hardikpandya #shubmangill #siraj #shreyasiyer #viratkohli #rohitsharma #kingkohli #indvseng #indiancricket #klrahul #indianfans #cricket #trendingreels #memes #odiwc2023 #icc #teamindia #worldcup #odiworldcup2023 #worldcup2023 #bcci #ravindrajade pic.twitter.com/hK3QfBGMCK
— M.K.PRENZHANIA (@ManishAryan7) October 27, 2023
ಇಂಗ್ಲೆಂಡ್: ಜಾನಿ ಬೇರ್ಸ್ಟೋ, ಡೇವಿಡ್ ಮಲಾನ್, ಜೋ ರೂಟ್, ಹ್ಯಾರಿ ಬ್ರೂಕ್, ಜೋಸ್ ಬಟ್ಲರ್, ಲಿಯಾಮ್ ಲಿವಿಂಗ್ಸ್ಟೋನ್, ಸ್ಯಾಮ್ ಕರ್ರನ್, ಕ್ರಿಸ್ ವೋಕ್ಸ್ / ಡೇವಿಡ್ ವಿಲ್ಲಿ, ಆದಿಲ್ ರಶೀದ್, ಮಾರ್ಕ್ ವುಡ್, ರೀಸ್ ಟಾಪ್ಲೆ.
ನೇರ ಪ್ರಸಾರದ ವಿವರ
- ಸಮಯ: ಮಧ್ಯಾಹ್ನ 2:00 (ಭಾರತೀಯ ಕಾಲಮಾನ)
- ಲೈವ್ ಸ್ಟ್ರೀಮಿಂಗ್ ಡಿಸ್ನಿ + ಹಾಟ್ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್ಸೈಟ್
- ಲೈವ್ ಬ್ರಾಡ್ಕಾಸ್ಟ್ ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್