Site icon Vistara News

PKL 2024: ಪ್ರೊ ಕಬಡ್ಡಿ ಲೀಗ್ ಆಟಗಾರರ ಹರಾಜು ಪ್ರಕ್ರಿಯೆಗೆ ದಿನಾಂಕ ನಿಗದಿ

PKL 2024: Pro Kabaddi League Season 11 player auction to be held on August 15-16

ಮುಂಬಯಿ: 11ನೇ ಆವೃತ್ತಿಯ(Pro Kabaddi Season 11) ಪ್ರೊ ಕಬಡ್ಡಿ ಲೀಗ್ (ಪಿಕೆಎಲ್)ನ(pro kabaddi league) ಆಟಗಾರರ ಹರಾಜು(PKL 2024) ಪ್ರಕ್ರಿಯೆ ಆಗಸ್ಟ್ 15 ಮತ್ತು 16 ರಂದು ಮುಂಬೈನಲ್ಲಿ ನಡೆಯಲಿದೆ ಎಂದು ಆಯೋಜಕ ಮಶಾಲ್ ಸ್ಪೋರ್ಟ್ಸ್ ಸಂಸ್ಥೆ ತಿಳಿಸಿದೆ. 11ನೇ ಆವೃತ್ತಿಗೂ ಮುನ್ನ ಟೂರ್ನಿಯ ನೂತನ ಲಾಂಛನ ಅನಾವರಣದ ಮಾಡಲಾಗುತ್ತದೆ. ನೂತನ ಲಾಂಛನದಲ್ಲಿ ತ್ರಿವರ್ಣ ಧ್ವಜ ಹೋಲುವ ಕೇಸರಿ ಮತ್ತು ಹಸಿರು ಬಣ್ಣಗಳನ್ನು ಪ್ರದರ್ಶಿಸಲಾಗಿದೆ. ಕಬಡ್ಡಿ ದೇಶದ ಹೆಮ್ಮೆಯ ಕ್ರೀಡೆ ಎಂಬುದನ್ನು ಇದು ಸಾರುತ್ತದೆ.

ಕಳೆದ 10ನೇ ಆವೃತ್ತಿ ಪ್ರೊ ಕಬಡ್ಡಿಯ ಫೈನಲ್(Pro Kabaddi Final)​ ಪಂದ್ಯದಲ್ಲಿ ಪುಣೇರಿ ಪಲ್ಟಾನ್‌(Puneri Paltan) 28-25 ಅಂಕಗಳ ಅಂತರದಿಂದ ಹರಿಯಾಣ ಸ್ಟೀಲರ್ಸ್‌(Haryana Steelers) ತಂಡವನ್ನು ಮಣಿಸಿ ಚೊಚ್ಚಲ ಪ್ರಶಸ್ತಿ ಗೆದ್ದು ಬೀಗಿತ್ತು.

ಹೈದರಾಬಾದ್‌ನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದಿದ್ದ ಉಭಯ ತಂಡಗಳ ಈ ಫೈನಲ್​ ಫೈಟ್​ ಆರಂಭದಿಂದ ಹಿಡಿದು ಕೊನೆಯ ತನಕವೂ ರೋಚಕತೆ ಮತ್ತು ಕುತೂಹಲಕ್ಕೆ ಸಾಕ್ಷಿಯಾಗಿತ್ತು. ಇತ್ತಂಡಗಳ ಆಟಗಾರರು ಕೂಡ ಅಂಕ ಗಳಿಕೆಗಾಗಿ ತೀವ್ರ ಪೈಪೋಟಿ ನಡೆಸಿದ್ದರು. ಇವರ ಜತೆಗೆ ಕೋಚ್​ಗಳು ಕೂಡ ಅಗ್ರೆಸಿವ್​ ಆಗಿ ಕಂಡುಬಂದಿದ್ದರು. ಅಂತಿಮವಾಗಿ ಪುಣೇರಿ ಪಲ್ಟಾನ್‌ ತಂಡ 28-25 ಅಂಕಗಳ ಅಂತರದಿಂದ ಗೆದ್ದು ಚಾಂಪಿಯನ್​ ಪಟ್ಟ ಅಲಂಕರಿಸಿತ್ತು.

ಇದನ್ನೂ ಓದಿ Paris Olympics 2024: ನೀರಿನಾಳದಲ್ಲಿ ಅಭ್ಯಾಸ ನಡೆಸಿದ ನೀರಜ್ ಚೋಪ್ರಾ; ವಿಡಿಯೊ ವೈರಲ್​

ಕನ್ನಡಿಗ ಕೋಚ್‌ ಬಿ.ಸಿ. ರಮೇಶ್‌ ಮಾರ್ಗದರ್ಶನ


ಕನ್ನಡಿಗ ಕೋಚ್‌ ಬಿ.ಸಿ. ರಮೇಶ್‌ ಮಾರ್ಗದರ್ಶನದಲ್ಲಿ ಪುಣೇರಿ ತಂಡ ಈ ಆವೃತ್ತಿಯ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡಿ ಆಡಿದ 22 ಪಂದ್ಯಗಳಲ್ಲಿ 17 ಗೆಲುವುಗಳೊಂದಿಗೆ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿತ್ತು. ತನ್ನ ಖ್ಯಾತಿಗೆ ತಕ್ಕಂತೆ ಫೈನಲ್​ನಲ್ಲಿಯೂ ಇದೇ ಪ್ರದರ್ಶನ ತೋರುವ ಮೂಲಕ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಕಳೆದ ಬಾರಿಯೂ ಪುಣೇರಿ ತಂಡ ಫೈನಲ್​ ಆಡಿತ್ತು. ಆದರೆ ಅಲ್ಲಿ ಜೈಪುರ ವಿರುದ್ಧ ಸೋತು ರನ್ನರ್​ ಅಪ್​ ಸ್ಥಾನ ಪಡೆದಿತ್ತು. ಆದರೆ ಈ ಬಾರಿ ಪ್ರಶಸ್ತಿಗೆಲ್ಲುವಲ್ಲಿ ಯಶಸ್ಸು ಕಂಡಿತ್ತು. ಇದಕ್ಕೆ ಪ್ರಮುಖ ಕಾರಣ ಕೋಚ್‌ ಬಿ.ಸಿ. ರಮೇಶ್‌ ಮಾರ್ಗದರ್ಶನ.

ಮೊದಲಾರ್ಧದ 20 ನಿಮಿಷದ ಆಟದಲ್ಲಿ ಕೊನೆಯ 1.28 ನಿಮಿಷದವರೆಗೂ ಪುಣೆ ತಂಡ ಹಿನ್ನಡೆಯಲ್ಲಿತ್ತು. ಆದರೆ, ಈ ವೇಳೆ ಡು ಆರ್​ ಡೈ ರೇಟ್​ನಲ್ಲಿ ಪಂಕಜ್​ ಮೋಹಿತೆ ಅವರು ಪಾದರಸದಂತಹ ರೇಡಿಂಗ್​ ದಾಳಿ ನಡೆಸಿ ಒಂದೇ ಬಾರಿಗೆ 5 ಅಂಕ ಕಲೆಹಾಕಿ ಪಂದ್ಯದ ಗತಿಯನ್ನೇ ಬದಲಿಸಿದರು. ಇದು ಪಂದ್ಯ ಟರ್ನಿಂಗ್​ ಪಾಯಿಂಟ್​ ಕೂಡ ಆಯಿತು. ಅವರ ಈ ರೇಡಿಂಗ್​ ಸಾಹಸದಿಂದ ಪುಣೆ ಭರ್ಜರಿ ಲೀಡ್​ ಪಡೆಯಿತು. ಮೊದಲಾರ್ಧ ಮುಕ್ತಾಯಕ್ಕೆ 13-10 ಅಂಕದ ಮುನ್ನಡೆ ಸಾಧಿಸಿತು. ಇದೇ ಮುನ್ನಡೆಯನ್ನು ಪಂದ್ಯದಕ್ಕೂ ಕಾಯ್ದುಕೊಂಡು ಪ್ರಶಸ್ತಿ ಎತ್ತಿಹಿಡಿದಿತ್ತು.

Exit mobile version