Site icon Vistara News

INDvsBAN | ಆಕ್ರಮಣಕಾರಿ ಆಟ ಆಡುತ್ತೇವೆ; ಬಾಂಗ್ಲಾಗೆ ಎಚ್ಚರಿಕೆ ಕೊಟ್ಟ ನಾಯಕ ರಾಹುಲ್​

IND vs AUS

ಚಿತ್ತಗಾಂಗ್​: ಭಾರತ ಹಾಗೂ ಬಾಂಗ್ಲಾದೇಶ ನಡುವೆ ಡಿಸೆಂಬರ್​ 14ರಂದು ಮೊದಲ ಟೆಸ್ಟ್​ ಪಂದ್ಯ (INDvsBAN)ನಡೆಯಲಿದೆ. ಏಕ ದಿನ ಸರಣಿಯಲ್ಲಿ ಸೋತಿರುವ ಭಾರತ ತಂಡಕ್ಕೆ ಈ ಸರಣಿಯ ಗೆಲುವು ಎರಡು ರೀತಿಯಲ್ಲಿ ಅನಿವಾರ್ಯ. ಒಂದು ಮರ್ಯಾದೆ ಉಳಿಸಿಕೊಂಡು ತವರಿಗೆ ಮರಳುವುದು. ಇನ್ನೊಂದು ವಿಶ್ವ ಟೆಸ್ಟ್​​ ಚಾಂಪಿಯನ್​ಷಿಪ್​ನ ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳಲ್ಲಿ ಒಂದನ್ನು ಪಡೆಯುವುದು. ಹೀಗಾಗಿ ಉತ್ತಮ ಕಾರ್ಯ ಯೋಜನೆಯೊಂದಿಗೆ ಭಾರತ ತಂಡ ಬಾಂಗ್ಲಾದೇಶ ವಿರುದ್ಧ ಕಣಕ್ಕೆ ಇಳಿಯಲಿದೆ. ಇದೇ ಗುರಿಯೊಂದಿಗೆ ಮಾತನಾಡಿದ ಟೀಮ್​ ಇಂಡಿಯಾದ ಹಂಗಾಮಿ ನಾಯಕ ಕೆ ಎಲ್​ ರಾಹುಲ್​ ಬಾಂಗ್ಲಾದೇಶ ವಿರುದ್ಧ ಆಕ್ರಮಣಕಾರಿ ಆಡವಾಡಲಿದ್ದೇವೆ ಎಂದು ಹೇಳುವ ಮೂಲಕ ಎದುರಾಳಿ ತಂಡಕ್ಕೆ ಎಚ್ಚರಿಕೆ ಸಂದೇಶ ರವಾನೆ ಮಾಡಿದ್ದಾರೆ.

ರೋಹಿತ್​ ಶರ್ಮ ಅನುಪಸ್ಥಿತಿಯಲ್ಲಿ ಕೆ. ಎಲ್​ ರಾಹುಲ್​ ತಂಡವನ್ನು ಮುನ್ನಡೆಸಲಿದ್ದಾರೆ. ಹೀಗಾಗಿ ಗೆಲುವಿಗಾಗಿ ರಣ ತಂತ್ರ ರೂಪಿಸಿದ್ದಾರೆ ಅವರು. ಅದರ ಭಾಗವಾಗಿ ಮುಂದಿನ ಬಾಂಗ್ಲಾದೇಶ ವಿರುದ್ದ ಆಕ್ರಮಣಕಾರಿ ಅಟ ಆಡುವುದಾಗಿ ತಿಳಿಸಿದ್ದಾರೆ.

ಭಾರತ ತಂಡಕ್ಕೆ ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್​ ಸರಣಿ ಸೇರಿದಂತೆ ಒಟ್ಟು ಆರು ಟೆಸ್ಟ್​ ಪಂದ್ಯಗಳಿವೆ. ಉಳಿದ ನಾಲ್ಕು ಪಂದ್ಯಗಳು ಆಸ್ಟ್ರೇಲಿಯಾ ವಿರುದ್ಧದ ತವರಿನ ಸರಣಿ. ಈ ಎಲ್ಲ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದರಷ್ಟೇ ಭಾರತ ತಂಡ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ನ ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನ ಪಡೆಯಲು ಸಾಧ್ಯ ಹಾಗೂ ಫೈನಲ್​ಗೇರಬಹುದು.

ಭಾರತ ತಂಡ ಪ್ರಸ್ತುತ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿದ್ದು, ದಕ್ಷಿಣ ಆಫ್ರಿಕಾ ಹಾಗೂ ಶ್ರೀಲಂಕಾ ತಂಡ ನಂತರದ ಎರಡು ಸ್ಥಾನಗಳಲ್ಲಿ ಇವೆ. ಹೀಗಾಗಿ ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾವನ್ನು ಹಿಂದಿಕ್ಕಬೇಕಾದರೆ ಮುಂದಿನ ಎಲ್ಲ ಪಂದ್ಯಗಳಲ್ಲಿ ಅಮೋಘ ಪ್ರದರ್ಶನ ನೀಡಬೇಕಾಗುತ್ತದೆ.

”ಮುಂದಿನ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ ಅನ್ನು ಗುರಿಯಾಗಿಸಿಕೊಂಡು ಅತ್ಯುತ್ತಮ ಪ್ರದರ್ಶನ ನೀಡಲಿದ್ದೇವೆ. ಅದರಲ್ಲೂ ಆಕ್ರಮಣಕಾರಿ ಆಟಕ್ಕೆ ಮೊರೆ ಹೋಗುತ್ತೇವೆ”, ಎಂದು ರಾಹುಲ್​ ಹೇಳಿದ್ದಾರೆ.

”ಪಂದ್ಯವೊಂದಕ್ಕೆ ಮೊದಲು ನಿರ್ದಿಷ್ಟ ಯೋಜನೆಗಳನ್ನು ಹಾಕಿಕೊಳ್ಳುವುದಿಲ್ಲ. ಬದಲಾಗಿ ಪರಿಸ್ಥಿತಿಗೆ ಪೂರಕವಾಗಿ ಆಡಲಿದ್ದೇವೆ,” ಎಂಬದಾಗಿಯೂ ನಾಯಕ ರಾಹುಲ್​ ಹೇಳಿದ್ದಾರೆ.

ಇದನ್ನೂ ಓದಿ | INDvsBAN | ವಿರಾಟ್​ ಕೊಹ್ಲಿಯ ಪ್ರರ್ಶನ ಪ್ರಶ್ನಾತೀತ; ಅನುಮಾನವೇ ಬೇಡ ಎಂದ ಕೆ. ಎಲ್​ ರಾಹುಲ್​

Exit mobile version