Site icon Vistara News

Pakistan Cricket : ಪಾಕಿಸ್ತಾನ ಕ್ರಿಕೆಟ್​ ಮಂಡಳಿಯ ವಿರುದ್ಧವೇ ತಿರುಗಿ ಬಿದ್ದ ಅಲ್ಲಿನ ಆಟಗಾರರು!

Pakistan Cricket team

ನವ ದೆಹಲಿ: ಪಾಕಿಸ್ತಾನ ಕ್ರಿಕೆಟ್ ತಂಡದ ಹಿರಿಯ ಆಟಗಾರರು ಅಲ್ಲಿನ ಕ್ರಿಕೆಟ್ ಮಂಡಳಿಯಾಗಿರು ಪಿಸಿಬಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ತಮ್ಮ ಕೇಂದ್ರೀಯ ಒಪ್ಪಂದದ ಖಾತ್ರಿ ನೀಡದ ಕ್ರಿಕೆಟ್​ ಸಂಸ್ಥೆಯ ನಿಲುವಿನ ಬಗ್ಗೆ ಆಟಗಾರರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಆಟಗಾರರು ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ ನಡುವಿನ ಕೇಂದ್ರ ಒಪ್ಪಂದಗಳು ಜೂನ್ 30 ರಂದು ಮುಕ್ತಾಯಗೊಂಡಿವೆ. ಆದರೆ, ಅದನ್ನು ನವೀಕರಿಸುವ ಕಾರ್ಯ ಮಾಡಿಲ್ಲ. ಬಾಬರ್ ಅಜಮ್ ಮತ್ತು ತಂಡ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಯಾವುದೇ ಒಪ್ಪಂದವಿಲ್ಲದೆ ಆಡುತ್ತಿದ್ದಾರೆ. ಇದೀಗ ಅವರೆಲ್ಲರೂ ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಇಡೀ ವ್ಯವಸ್ಥೆಯನ್ನು ರಚನೆ ಮಾಡಬೇಕು ಎಂದು ಒತ್ತಾಯ ಮಾಡಿದ್ದಾರೆ.

ಪಾಕಿಸ್ತಾನ ಕ್ರಿಕೆಟ್​ ಮಂಡಳಿಯ ಪ್ರಕಾರ ಗುತ್ತಿಗೆ ವಿಸ್ತರಣೆಯ ಬಗ್ಗೆ ಆಟಗಾರರು ಯಾವುದೇ ಒಪ್ಪಂದಕ್ಕೆ ಸಹಿ ಹಾಕಿಲ್ಲ. ಯಾಕೆಂದೆರೆ ಆಟಗಾರರು ಭಾರೀ ಮೊತ್ತದ ವೇತನ ಏರಿಕೆಯನ್ನು ಬಯಸಿದ್ದಾರೆ. ಆದರೆ, ಪಿಸಿಬಿ ಪ್ರಸ್ತಾಪದ ಪ್ರಕಾರ ಅವರ ನಿರೀಕ್ಷೆ ಮೀರಿಲ್ಲ. ಪಿಸಿಬಿ ಅಧ್ಯಕ್ಷ ಝಾಕಾ ಅಶ್ರಫ್ ಅವರೊಂದಿಗೆ ಮಾತನಾಡಲು ಅವರು ಬಯಸಿಸದ್ದಾರೆ. ನಜಾಮ್ ಸೇಥಿ ಪಿಸಿಬಿ ಅಧ್ಯಕ್ಷರಾಗಿದ್ದಾಗ 45% ವೇತನ ಹೆಚ್ಚಳದ ಬಗ್ಗೆ ಮಾತುಕತೆಗಳು ನಡೆದಿದ್ದವವು. ಆದರೆ, ಆಟಗಾರರು ಪಿಸಿಬಿಯಿಂದ ಹೆಚ್ಚಿನ ಪ್ರಯೋಜನಗಳನ್ನು ಬಯಸಿದ್ದಾರೆ ಎನ್ನಲಾಗಿದೆ.

ಆಟಗಾರರ ಬೇಡಿಕೆಗಳು

ವರದಿಗಳ ಪ್ರಕಾರ, ಪಾಕಿಸ್ತಾನ ಕ್ರಿಕೆಟ್ ತಂಡದ ತಾರೆಯರು ತಮ್ಮ ಪ್ರತಿಸ್ಪರ್ಧಿ ದೇಶಗಳಿಗೆ ಹೋಲಿಸಿದರೆ ಕಡಿಮೆ ಸಂಭಾವನೆ ಪಡೆಯುತ್ತಾರೆ. ಪಾಕಿಸ್ತಾನದ ನಾಯಕ ಮತ್ತು ವಿಶ್ವದ ನಂ.1 ಏಕದಿನ ಬ್ಯಾಟರ್​ ಬಾಬರ್ ಅಜಮ್ ಜಾಗತಿಕವಾಗಿ ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್ 10 ಕ್ರಿಕೆಟಿಗರಲ್ಲಿ ಸ್ಥಾನ ಪಡೆದಿಲ್ಲ. ಪಿಸಿಬಿ ತನ್ನದೇ ಆದ ಅಧ್ಯಯನ ಮಾಡಿ ದೀರ್ಘಕಾಲೀನ ಆರ್ಥಿಕ ಸ್ಥಿರತೆ ಖಾತರಿಪಡಿಸುವ ರಚನೆಯನ್ನು ಅಭಿವೃದ್ಧಿಪಡಿಸಬೇಕೆಂದು ಆಟಗಾರರು ಬಯಸಿದ್ದಾರೆ.

ಇದನ್ನೂ ಓದಿ : Team India : ಭಾರತೀಯ ಮಹಿಳೆಯ ತಂಡಕ್ಕೆ ರೋಚಕ ಜಯ; ಹರ್ಮನ್​ಪ್ರೀತ್​ ಬಳಗಕ್ಕೆ ಟಿ20 ಸರಣಿ

ವಿದೇಶಿ ಲೀಗ್​​ಗಳಲ್ಲಿ ಭಾಗವಹಿಸುವುದು ಆಟಗಾರರ ಯೋಜನೆಯಾಗಿದೆ ಈ ಹಿಂದೆ ಪಿಸಿಬಿ ಗ್ಲೋಬಲ್ ಟಿ20 ಲೀಗ್​ನಲ್ಲಿ ಭಾಗವಹಿಸುವ ಪ್ರತಿ ಆಟಗಾರನಿಗೆ 25,000 ಡಾಲರ್ ಶುಲ್ಕವನ್ನು ಕೇಳುತ್ತಿತ್ತು. ಆಟಗಾರರು ಈ ಶುಲ್ಕದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ತಂಡ ತವರಿಗೆ ಮರಳಿದ ನಂತರ ಈ ಬಗ್ಗೆ ಚರ್ಚೆಗಳು ಪುನರಾರಂಭಗೊಳ್ಳುವ ಸಾಧ್ಯತೆಯಿದೆ. ಅವರು ಪ್ರಸ್ತುತ ಶ್ರೀಲಂಕಾದಲ್ಲಿದ್ದು, ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡುತ್ತಿದ್ದಾರೆ. ಝಾಕಾ ಅಶ್ರಫ್ ತಮ್ಮ ಕಳವಳಗಳನ್ನು ಗಂಭೀರವಾಗಿ ಪರಿಗಣಿಸುತ್ತಾರೆ ಮತ್ತು ಅವುಗಳನ್ನು ಸಕಾರಾತ್ಮಕವಾಗಿ ಪರಿಹರಿಸುತ್ತಾರೆ ಎಂಬ ಭರವಸೆಯನ್ನು ಆಟಗಾರರು ಹೊಂದಿದ್ದಾರೆ.

Exit mobile version