Site icon Vistara News

MS Dhoni: ಟ್ರ್ಯಾಕ್ಟರ್‌ ಮೂಲಕ ಉಳುಮೆ ಮಾಡಿದ ಎಂ.ಎಸ್​. ಧೋನಿ; ವಿಡಿಯೊ ವೈರಲ್​

ms dhoni

#image_title

ರಾಂಚಿ: ಟೀಮ್​ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ(MS Dhoni) ಬರೋಬ್ಬರಿ ಎರಡು ವರ್ಷಗಳ ಬಳಿಕ ಮತ್ತೆ ಇನ್​ಸ್ಟಾಗ್ರಾಮ್​ನಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಜಮೀನಿನಲ್ಲಿ ಟ್ರ್ಯಾಕ್ಟರ್‌ ಮೂಲಕ ಉಳುಮೆ ಮಾಡುತ್ತಿರುವ ವಿಡಿಯೊವನ್ನು ಶೇರ್​ ಮಾಡುವ ಮೂಲಕ ಧೋನಿ ಗಮನ ಸೆಳೆದಿದ್ದಾರೆ.

ಸ್ಟಾರ್​ ಆಟಗಾರನಾಗಿದ್ದು, ವಿಶ್ವದಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದರೂ ಮಹೇಂದ್ರ ಸಿಂಗ್​ ಧೋನಿ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟಿವ್​ ಆಗಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಖಾತೆ ಹೊಂದಿದ್ದರೂ ಧೋನಿ ಮಾತ್ರ ಇತರ ಆಟಗಾರರಂತೆ ಪೋಸ್ಟ್​ಗಳನ್ನು ಮಾಡುವುದು ಬಹಳ ಅಪರೂಪ. ಇದೀಗ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಜಮೀನಿನಲ್ಲಿ ಟ್ರ್ಯಾಕ್ಟರ್‌ ಮೂಲಕ ಉಳುಮೆ ಮಾಡುತ್ತಿರುವ ವಿಡಿಯೊವೊಂದನ್ನು ಶೇರ್​ ಮಾಡಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಇದನ್ನೂ ಓದಿ MS Dhoni: ರಾಂಚಿಯಿಂದ ಬೈಕ್​ ಸವಾರಿ ಹೊರಟ ಮಹೇಂದ್ರ ಸಿಂಗ್​ ಧೋನಿ

ಧೋನಿ ಅವರು ಎರಡು ವರ್ಷಗಳ ಹಿಂದೆ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಸ್ಟ್ರಾಬೆರಿ ಹಣ್ಣುಗಳನ್ನು ಬೆಳೆದಿರುವ ವಿಡಿಯೊವನ್ನು ಹಂಚಿಕೊಂಡಿದ್ದರು. ಇದಾದ ಬಳಿಕ ಅವರು ಯಾವುದೇ ವಿಡಿಯೊ ಹಂಚಿಕೊಂಡಿರಲಿಲ್ಲ. ಇದೀಗ ಬರೋಬ್ಬರಿ ಎರಡು ವರ್ಷಗಳ ಬಳಿಕ ಇನ್​ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನು ಕಂಡ ಅಭಿಮಾನಿಗಳು ಧೋನಿ ಈಸ್​ ಬ್ಯಾಕ್​ ಎಂದು ಕಾಮೆಂಟ್​ ಮಾಡಿದ್ದಾರೆ.

ಇತ್ತೀಚೆಗೆ ರಾಂಚಿ ಕ್ರಿಕೆಟ್​ ಸ್ಡೇಡಿಯಂನಿಂದ ಏಕಾಂಗಿಯಾಗಿ ಬೈಕ್ ಸವಾರಿ ನಡೆಸಿ ಧೋನಿ ಸುದ್ದಿಯಾಗಿದ್ದರು. ಸದ್ಯ ಅವರು 2023ರ ಐಪಿಎಲ್(IPL 2023)​ ಟೂರ್ನಿಗೆ ಸಿದ್ಧತೆ ನಡೆಸುತ್ತಿದ್ದಾರೆ.

Exit mobile version