Site icon Vistara News

Asia Cup 2023 : ಏಷ್ಯಾಕಪ್ ಗೆದ್ದ ರೋಹಿತ್ ಶರ್ಮಾ ಬಳಗಕ್ಕೆ ಪ್ರಧಾನಿ ಮೋದಿ ಅಭಿನಂದನೆ, ಏನಂದ್ರು ಅವರು?

Asia Cup 2023 Cricket

ಕೊಲೊಂಬೊ: ಕೊಲಂಬೊದಲ್ಲಿ ಭಾನುವಾರ (ಸೆಪ್ಟೆಂಬರ್ 17) ನಡೆದ ಏಷ್ಯಾ ಕಪ್ 2023 ಫೈನಲ್​ನಲ್ಲಿ ಟೀಮ್ ಇಂಡಿಯಾ ಶ್ರೀಲಂಕಾವನ್ನು 10 ವಿಕೆಟ್​​ಗಳಿಂದ ಸೋಲಿಸಿ ದಾಖಲೆಯ 8 ನೇ ಬಾರಿಗೆ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಮೊಹಮ್ಮದ್ ಸಿರಾಜ್ (21ಕ್ಕೆ 6) ಅವರ 6 ವಿಕೆಟ್ ಸಾಧನೆಯ ನೆರವಿನಿಂದ ಟೀಮ್​ ಇಂಡಿಯಾ 15.2 ಓವರ್ ಗಳಲ್ಲಿ 50 ರನ್ ಗಳಿಗೆ ಆಲೌಟ್ ಆಯಿತು. ಹಾರ್ದಿಕ್ ಪಾಂಡ್ಯ (3/3) ಮತ್ತು ಜಸ್ಪ್ರೀತ್ ಬುಮ್ರಾ (1/23) ಉಳಿದ ನಾಲ್ಕು ವಿಕೆಟ್​​ಗಳನ್ನು ಹಂಚಿಕೊಂಡರು.

ಪ್ರತಿಯಾಗಿ ಶುಭ್ಮನ್ ಗಿಲ್ (27) ಮತ್ತು ಇಶಾನ್ ಕಿಶನ್ (23) ಅವರ ಆಕರ್ಷಕ ಶತಕದ ನೆರವಿನಿಂದ ಭಾರತ ಕೇವಲ 6.1 ಓವರ್​ಗಳಲ್ಲಿ ಗುರಿ ತಲುಪಿತು.

ಏಷ್ಯಾಕಪ್ ಪ್ರಶಸ್ತಿ ಗೆದ್ದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ರೋಹಿತ್ ಶರ್ಮಾ ಮತ್ತು ಅವರ ತಂಡದ ಅಸಾಧಾರಣ ಪ್ರಯತ್ನವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, “ಟೀಮ್ ಇಂಡಿಯಾ ಉತ್ತಮವಾಗಿ ಆಡಿದೆ. ಏಷ್ಯಾಕಪ್ ಗೆದ್ದಿದ್ದಕ್ಕೆ ಅಭಿನಂದನೆಗಳು. ಪಂದ್ಯಾವಳಿಯ ಮೂಲಕ ನಮ್ಮ ಆಟಗಾರರು ಗಮನಾರ್ಹ ಕೌಶಲ್ಯವನ್ನು ತೋರಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ : IND vs AUS | ರೋಹಿತ್‌ ಶರ್ಮ ಅಬ್ಬರ; ಎರಡನೇ ಟಿ20 ಪಂದ್ಯದಲ್ಲಿ ಭಾರತ ತಂಡಕ್ಕೆ 6 ವಿಕೆಟ್‌ ಜಯ

2023ರ ಏಷ್ಯಾಕಪ್ ಟೂರ್ನಿಯು ಮುಂಬರುವ ಏಕದಿನ ವಿಶ್ವಕಪ್​ಗೆ ಭಾರತದ ಸಿದ್ಧತೆಯನ್ನು ತೋರಿಸಿದೆ. ಅಕ್ಟೋಬರ್ 8 ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತನ್ನ ವಿಶ್ವಕಪ್ ಅಭಿಯಾನವನ್ನು ಪ್ರಾರಂಭಿಸಲಿದೆ. ಇದಕ್ಕೂ ಮುನ್ನ ಸೆಪ್ಟೆಂಬರ್ 22ರಿಂದ 27ರವರೆಗೆ ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ.

ಚೆಕ್​ ದಾನ ಮಾಡಿದ ಸಿರಾಜ್​

ಶ್ರೀಲಂಕಾ ತಂಡದ ವಿರುದ್ಧದ ಏಷ್ಯಾ ಕಪ್ 2023 ಫೈನಲ್ ಪಂದ್ಯದಲ್ಲಿ ಅಸಾಧಾರಣ ಬೌಲಿಂಗ್ ಸಾಧನೆ ಮಾಡಿದ ಭಾರತದ ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಅರ್ಹವಾಗಿ ಪಡೆದುಕೊಂಡರು. ಅವರು ಮಾರಕ ದಾಳಿಯ ನೆರವಿನಿಂದ ಭಾರತವು ಲಂಕಾ ತಂಡವನ್ನು ಹತ್ತು ವಿಕೆಟ್ ಗಳಿಂದ ಸೋಲಿಸಿ ಕಾಂಟಿನೆಂಟಲ್ ಚಾಂಪಿಯನ್ ಶಿಪ್ ನಲ್ಲಿ ಎಂಟನೇ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಸಿರಾಜ್​ ಅವರ 21 ರನ್​ಗಳಿಗೆ 6 ವಿಕೆಟ್ ಸಾಧನೆ ಅವರ ಜೀವನ ಶ್ರೇಷ್ಠ ಸಾಧನೆಯಾಗಿದೆ.

ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದ 29 ವರ್ಷದ ಆಟಗಾರನಿಗೆ 5000 ಡಾಲರ್ (4,15,451.75 ರೂ.) ಬಹುಮಾನ ನೀಡಲಾಯಿತು. ಆದರೆ ಅವರು ಸ್ಥಳದಲ್ಲೇ ಆ ಬಹುಮಾನವನ್ನು ಮೈದಾನದ ಸಿಬ್ಬಂದಿಗೆ (ಗ್ರೌಂಡ್​ ಸ್ಟಾಪ್​) ಅರ್ಪಿಸಿದರು. ಅವರಿಲ್ಲದೆ ಸ್ಪರ್ಧೆ ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿ ಅಷ್ಟೂ ಮೊತ್ತವನ್ನು ನೀಡಿದ್ದಾರೆ.

Exit mobile version