Site icon Vistara News

PM Modi In france: ಫುಟ್ಬಾಲ್​ ಆಟಗಾರ ಎಂಬಪ್ಪೆ ಭಾರತದಲ್ಲಿ ಸೂಪರ್​ ಸ್ಟಾರ್​; ಪ್ರಧಾನಿ ಮೋದಿ

kylian mbappe

ಪ್ಯಾರಿಸ್: ಎರಡು ದಿನಗಳ ಫ್ರಾನ್ಸ್ ಭೇಟಿಗಾಗಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಗುರುವಾರ ಪ್ಯಾರಿಸ್‌ಗೆ (Paris) ಬಂದಿಳಿದ್ದಾರೆ. ಎರಡು ದಿನಗಳ ಈ ಭೇಟಿ ವೇಳೆ ಫ್ರಾನ್ಸ್ ಜತೆಗೆ ಅವರು ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಲಿದ್ದಾರೆ. ಗುರುವಾರ ನಡೆದ ಸಭೆಯೊಂದರ ವೇಳೆ ಮೋದಿ ಅವರು ಫ್ರೆಂಚ್ ಫುಟ್ಬಾಲ್ ಆಟಗಾರ ಕೈಲಿಯನ್ ಎಂಬಪ್ಪೆ(Kylian Mbappe) ಅವರ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ.

“ಫ್ರೆಂಚ್ ಫುಟ್ಬಾಲ್ ಆಟಗಾರ ಕೈಲಿಯನ್ ಎಂಬಪ್ಪೆ ಭಾರತದಲ್ಲಿನ ಯುವಕರಲ್ಲಿ ಸೂಪರ್‌ಹಿಟ್ ಆಗಿದ್ದಾರೆ. ಬಹುಶಃ ಫ್ರಾನ್ಸ್‌ಗಿಂತ ಭಾರತದಲ್ಲಿ ಅವರು ಹೆಚ್ಚಿನ ಜನರಿಗೆ ಪರಿಚಿತರಾಗಿದ್ದಾರೆ. ಅವರು ಭಾರತದಲ್ಲಿ ಸೂಪರ್​ ಸ್ಟಾರ್​ ಆಗಿದ್ದಾರೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಫ್ರೆಂಚ್ ಲೀಗ್ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಂಬಪ್ಪೆ ಅತ್ಯಂತ ಜನಪ್ರಿಯ ಫುಟ್ಬಾಲ್ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. 2022ರ ಫಿಫಾ ವಿಶ್ವಕಪ್ ಫೈನಲ್​ನಲ್ಲಿ ಅರ್ಜೆಂಟೀನಾ ವಿರುದ್ಧ ಅವರು ಬಾರಿಸಿದ ಹ್ಯಾಟ್ರಿಕ್ ಗೋಲಿನ ಬಳಿಕ ಎಂಬಪ್ಪೆ ಖ್ಯಾತಿ ಹೆಚ್ಚಿದೆ. ಅನೇಕ ಯುವ ಫುಟ್ಬಾಲ್​ ಆಟಗಾರರಿಗೆ ಅವರು ಇದೀಗ ಮಾದರಿಯಾಗಿದ್ದಾರೆ. ಎಂಬಪ್ಪೆ ಸಾಧನೆಯನ್ನು ಸ್ವತಃ ಫುಟ್ಬಾಲ್ ದಿಗ್ಗಜರಾದ ಲಿಯೋನೆಲ್​ ಮೆಸ್ಸಿ ಕೂಡ ಹೊಗಳಿದ್ದರು.

ಅತ್ಯುನ್ನತ ನಾಗರಿಕ ಮತ್ತು ಸೇನಾ ಗೌರವ ಪಡೆದ ಮೋದಿ

ಫ್ರಾನ್ಸ್‌ ದೇಶಕ್ಕೆ ಭೇಟಿ ನೀಡಿರುವ (PM Modi France Visit) ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಅಲ್ಲಿನ ಅತ್ಯುನ್ನತ ನಾಗರಿಕ ಮತ್ತು ಸೇನಾ ಗೌರವ ಆಗಿರುವ ʼಗ್ರ್ಯಾಂಡ್ ಕ್ರಾಸ್ ಆಫ್ ದಿ ಲೀಜನ್ ಆಫ್ ಆನರ್ʼ ಅನ್ನು ನೀಡಲಾಗಿದೆ.

ಗುರುವಾರ ಸಂಜೆ ಪ್ಯಾರಿಸ್‌ನ ಎಲಿಸಿ ಪ್ಯಾಲೇಸ್‌ನಲ್ಲಿ ಫ್ರಾನ್ಸ್‌ ಅಧ್ಯಕ್ಷರಾದ ಇಮ್ಯಾನುಯೆಲ್ ಮ್ಯಾಕ್ರಾನ್ (Emmanuel Macron) ಆಯೋಜಿಸಿದ್ದ ಖಾಸಗಿ ಔತಣಕೂಟದ ನಂತರ ಅಧ್ಯಕ್ಷರು ಪ್ರಧಾನಿ ಮೋದಿ ಅವರಿಗೆ ಈ ಪ್ರಶಸ್ತಿಯನ್ನು ನೀಡಿದರು. ಈ ವಿಶಿಷ್ಟ ಗೌರವ ಪ್ರದಾನಕ್ಕಾಗಿ ಪ್ರಧಾನಿ ಭಾರತದ ಜನರ ಪರವಾಗಿ ಮ್ಯಾಕ್ರಾನ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಈ ಗೌರವ ಪಡೆದ ಮೊದಲ ಭಾರತೀಯ ಪ್ರಧಾನಿ ಮೋದಿ. ಹಿಂದೆ, ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ, ಜರ್ಮನಿಯ ಮಾಜಿ ಚಾನ್ಸೆಲರ್ ಏಂಜೆಲಾ ಮರ್ಕೆಲ್, ಮಾಜಿ ಯುಎನ್ ಸೆಕ್ರೆಟರಿ-ಜನರಲ್ ಬೌಟ್ರೋಸ್ ಘಾಲಿ ಸೇರಿದಂತೆ ಕೆಲವು ಪ್ರಮುಖ ನಾಯಕರು ಗ್ರ್ಯಾಂಡ್ ಕ್ರಾಸ್ ಆಫ್ ದಿ ಲೀಜನ್ ಆಫ್ ಆನರ್ ಪ್ರಶಸ್ತಿ ಪಡೆದಿದ್ದಾರೆ.

ಇದನ್ನೂ ಓದಿ Lionel Messi: ಕ್ರಿಸ್ಟಿಯಾನೊ ರೊನಾಲ್ಡೊ ದಾಖಲೆ ಹಿಂದಿಕ್ಕಿದ ಲಿಯೋನೆಲ್ ಮೆಸ್ಸಿ

ಜೂನ್‌ನಲ್ಲಿ ಈಜಿಪ್ಟ್ ಮೋದಿಯವರಿಗೆ ʼಆರ್ಡರ್ ಆಫ್ ದಿ ನೈಲ್ʼ ಪ್ರಶಸ್ತಿಯನ್ನು ನೀಡಿತು. ಮೋದಿಯವರು 2021ರಲ್ಲಿ ಭೂತಾನ್‌ನಿಂದ ʼಆರ್ಡರ್ ಆಫ್ ದಿ ಡ್ರುಕ್ ಗ್ಯಾಲ್ಪೋʼ, 2020ರಲ್ಲಿ ಯುಎಸ್‌ನಿಂದ ʼಲೀಜನ್ ಆಫ್ ಮೆರಿಟ್ʼ, 2019ರಲ್ಲಿ ರಷ್ಯಾದಿಂದ ʼಆರ್ಡರ್ ಆಫ್ ಸೇಂಟ್ ಆಂಡ್ರ್ಯೂʼ, 2019ರಲ್ಲಿ ಯುಎಇಯಿಂದ ʼಆರ್ಡರ್ ಆಫ್ ಜಾಯೆದ್ʼ ಮತ್ತು ʼಆರ್ಡರ್ ಆಫ್ ಅಬ್ದುಲಜೀಜ್ ಅಲ್ʼ, 2016ರಲ್ಲಿ ಸೌದಿ ಅರೇಬಿಯಾದಿಂದ ʼಸೌದ್ʼ ಪ್ರಶಸ್ತಿಗಳನ್ನು ಪಡೆದಿದ್ದಾರೆ.

Exit mobile version