Site icon Vistara News

ಕಾಮನ್ವೆಲ್ತ್​ ಗೇಮ್ಸ್​ ನಿಯೋಗವನ್ನು ಹುರಿದುಂಬಿಸಲಿದ್ದಾರೆ Narendra Modi , ಬುಧವಾರ ಸಂವಾದ

Narendra Modi

ನವ ದೆಹಲಿ : ಅಂತಾರಾಷ್ಟ್ರಿಯ ಕ್ರೀಡಾಕೂಟಗಳಿಗೆ ತೆರಳುವ ಸ್ಪರ್ಧಿಗಳ ಜತೆ ಮಾತುಕತೆ ನಡೆಸಿ ಅವರನ್ನು ಹುರಿದುಂಬಿಸುವುದು ಪ್ರಧಾನ ಮಂತ್ರಿ Narendra Modi ಅವರ ಪದ್ಧತಿ. ಅಂತೆಯೇ ಅವರು ಜುಲೈ 28ರಂದು ಇಂಗ್ಲೆಂಡ್​ನ ಬರ್ಮಿಂಗ್​ಹ್ಯಾಮ್​ನಲ್ಲಿ ಆರಂಭವಾಗಲಿರುವ commenwealth games ಕೂಟದಲ್ಲಿ ಪಾಲ್ಗೊಳ್ಳಲು ತೆರಳಲಿರುವ ಭಾರತದ ಸ್ಪರ್ಧಿಗಳ ಜತೆ ಜುಲೈ 20ರಂದು ಚರ್ಚೆ ನಡೆಸಲಿದ್ದಾರೆ.

ಬುಧವಾರ ಬೆಳಗ್ಗೆ 10 ಗಂಟೆಗೆ ವಿಡಿಯೊ ಕಾನ್ಫರೆನ್ಸ್​ ಮೂಲಕ ಈ ಸಂವಾದ ನಡೆಯಲಿದೆ. commenwealth games ಸ್ಪರ್ಧೆಗೆ ತೆರಳಲಿರುವ ಪ್ರಮುಖ ಸ್ಪರ್ಧಿಗಳು ಹಾಗೂ ಅವರ ಕೋಚ್​ಗಳು ಈ ಕಾನ್ಫರೆನ್ಸ್​ನಲ್ಲಿ ಹಾಜರಿರುತ್ತಾರೆ ಎಂದು ಪ್ರಧಾನಿ ಕಾರ್ಯಾಲಯದ ಮೂಲಗಳು ಮಾಹಿತಿ ನೀಡಿವೆ.

ನೀರಜ್​ ಆಕರ್ಷಣೆ

ಕಳೆದ ವರ್ಷ ನಡೆದ ಟೋಕಿಯೊ ಒಲಿಂಪಿಕ್ಸ್​ನ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿರುವ ಭಾರತದ ನೀರಜ್​ ಚೋಪ್ರಾ ಅವರು ಬುಧವಾರ ನಡೆಯಲಿರುವ ಪ್ರಧಾನಿ ಜತೆಗಿನ ಸಂವಾದದಲ್ಲಿ ಕ್ರೀಡಾಭಿಮಾನಿಗಳ ಆಕರ್ಷಣೆ ಎನಿಸಿಕೊಳ್ಳಲಿದ್ದಾರೆ. ಅವರ ಜತೆಗೆ ವಿಶ್ವ ಚಾಂಪಿಯನ್​ ಮಹಿಳಾ ಬಾಕ್ಸರ್​ ನಿಖತ್ ಜರೀನ್​, ಕುಸ್ತಿಪಟು ಬಜರಂಗ್​ ಪೂನಿಯಾ ಅವರಂತಹ ಪದಕದ ನಿರೀಕ್ಷೆ ಹೊತ್ತಿರುವ ಸ್ಪರ್ಧಿಗಳು ಇರಲಿದ್ದಾರೆ.

ಟೋಕಿಯೊ ಒಲಿಂಪಿಕ್ಸ್​ನಲ್ಲಿ ಭಾರತದ ಸ್ಪರ್ಧಿಗಳ ಒಂದು ಬಂಗಾರ ಸೇರಿದಂತೆ ಏಳು ಪದಕಗಳನ್ನು ಬಾಚಿಕೊಂಡಿತ್ತು. ಸರಕಾರದ ಪ್ರೋತ್ಸಾಹವೇ ಪದಕಗಳ ಹೆಚ್ಚಳಕ್ಕೆ ಕಾರಣವಾಗಿದೆ. ಅದೇ ರೀತಿ commenwealth games ಸ್ಪರ್ಧೆಯಲ್ಲೂ ಅದೇ ಮಾದರಿಯ ಪ್ರದರ್ಶನ ನೀಡಲಿ ಎಂಬುದು ಭಾರತೀಯರ ಆಶಯ. ಪ್ರಧಾನಿ ಮೋದಿಯವರು ತಮ್ಮ ವಿಡಿಯೊ ಕಾನ್ಫರೆನ್ಸ್​ನಲ್ಲಿ ಕ್ರೀಡಾಪಟುಗಳಿಗೆ ಒತ್ತಡ ಮುಕ್ತರಾಗಿ ಸ್ಪರ್ಧಿಸುವಂತೆ ಸಲಹೆ ನೀಡಲಿದ್ದಾರೆ.

ಟೋಕಿಯೊ ಒಲಿಂಪಿಕ್ಸ್​ಗೆ ಹೊರಡುವ ಮೊದಲು ಷಟ್ಲರ್​ ಪಿ. ವಿ ಸಿಂಧೂ, ಟೇಬಲ್​ ಟೆನಿಸ್​ ಪಟು ಮಣಿಕಾ ಬಾತ್ರಾ, ಕುಸ್ತಿಪಟು ವಿನೇಶ್​ ಫೋಗಾಟ್​ ಸೇರಿದಂತೆ ಹಲವು ಕ್ರೀಡಾಳುಗಳ ಜತೆ ವಿಡಿಯೊ ಕಾನ್ಫರೆನ್ಸ್ ನಡೆಸಿದ್ದರು. ಪ್ರಧಾನಿಯವರ ಮಾತಿನಂತೆ ಹೆಚ್ಚು ಪದಕಗಳನ್ನು ಗೆಲ್ಲುವಲ್ಲಿ ಭಾರತದ ಕ್ರೀಡಾಳುಗಳು ಯಶಸ್ವಿಯಾಗಿದ್ದರು. ಅಂತೆಯೇ ಒಲಿಂಪಿಕ್ಸ್ ಮುಗಿಸಿ ವಾಪಸಾದ ಕ್ರೀಡಾಪಟುಗಳಿಗೆ ಚಹಾ ಕೂಟವನ್ನು ಏರ್ಪಡಿಸಿ ಅವರ ಜತೆ ಮಾತುಕತೆ ನಡೆಸಿದ್ದರು.

ಎಷ್ಟು ಮಂದಿಯ ನಿಯೋಗ?

commenwealth games ಇಂಗ್ಲೆಂಡ್​ನ ಬರ್ಮಿಂಗ್​ಹ್ಯಾಮ್​ನಲ್ಲಿ ಜುಲೈ 28 ರಿಂದ ಆಗಸ್ಟ್ 8 ರವರೆಗೆ ನಡೆಯಲಿದೆ. ಈ ಸ್ಪರ್ಧೆಯಲ್ಲಿ ಭಾರತದಿಂದ 215 ಅಥ್ಲೀಟ್‌ಗಳು 19 ಕ್ರೀಡೆಗಳ 141 ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಕಳೆದ ಬಾರಿ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್​ನಲ್ಲಿ ನಡೆದ commenwealth games ಕೂಟದಲ್ಲಿ ಭಾರತದ ಸ್ಪರ್ಧಿಗಳು ಒಟ್ಟಾರೆ 66 ಪದಕ ಗೆದ್ದು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಗಳಿಸಿದ್ದರು. ಈ ಬಾರಿ ಅದನ್ನು ಮೀರಿವುದು ಭಾರತದ ನಿಯೋಗದ ಗುರಿಯಾಗಿದೆ. 2010ರಲ್ಲಿ ನವ ದೆಹಲಿಯಲ್ಲಿ ನಡೆದ commenwealth games ಕೂಟದಲ್ಲಿ 101 ಪದಕಗಳನ್ನು ಗೆದ್ದು ಎರಡನೇ ಸ್ಥಾನ ಪಡೆದಿರುವುದು ಭಾರತದ ಇದುವರೆಗಿನ ಅತ್ಯುತ್ತಮ ಸಾಧನೆಯಾಗಿದೆ.

ಇದನ್ನೂ ಓದಿ | Commonwealth Games ; ಇದೇ ಮೊದಲ ಬಾರಿಗೆ ಮಹಿಳೆಯರ ಕ್ರಿಕೆಟ್‌, ಭಾರತ ತಂಡ ಪ್ರಕಟ

Exit mobile version