Site icon Vistara News

ICC World Cup 2023 : ಡ್ರೆಸಿಂಗ್​ ರೂಮ್​ಗೆ ತೆರಳಿ ಆಟಗಾರರನ್ನು ಅಪ್ಪಿ ಸಂತೈಸಿದ ಪ್ರಧಾನಿ ಮೋದಿ

Narendra Modi

ಅಹಮದಾಬಾದ್​: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭಾರತೀಯ ಕ್ರೀಡಾ ಕ್ಷೇತ್ರದ ಬಗ್ಗೆ ಅಪಾರ ಪ್ರೀತಿ ಇಟ್ಟುಕೊಂಡಿದ್ದಾರೆ. ಅವರ ಸೋಲು, ಗೆಲುವು, ಹತಾಶೆ ಮತ್ತು ಸಂತೋಷದಲ್ಲಿ ಜತೆಗಿರುತ್ತಾರೆ. ಅಂತೆಯೇ ಭಾರತ ತಂಡ ಭಾನುವಾರ (ನವೆಂಬರ್​ 19ರಂದು) ವಿಶ್ವ ಕಪ್​ ಫೈನಲ್​​ನಲ್ಲಿ (ICC World Cup 2023) ಆಸ್ಟ್ರೇಲಿಯಾ ವಿರುದ್ಧ ಹೀನಾಯವಾಗಿ ಸೋತು ಮೂರನೇ ವಿಶ್ವ ಕಪ್​​ ಗೆಲ್ಲುವ ಅವಕಾಶ ನಷ್ಟ ಮಾಡಿಕೊಂಡಿತು. ಈ ವೇಳೆ ಭಾರತ ತಂಡದ ಆಟಗಾರರು ದುಃಖದಲ್ಲಿದ್ದರು. ತಕ್ಷಣವೇ ಪ್ರಧಾನಿ ಮೋದಿ ಅವರು ಡ್ರೆಸಿಂಗ್ ರೂಮ್​ಗೆ ತೆರಳಿ ಅವರನ್ನು ಸಂತೈಸಿದ್ದಾರೆ. ಇದರ ವಿಡಿಯೊಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ.

ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಸಿಸಿ ವಿಶ್ವಕಪ್ 2023 ರ ಫೈನಲ್​ನಲ್ಲಿ ಭಾರತ ತಂಡವನ್ನು ಸೋಲಿಸಿ ದಾಖಲೆಯ ಆರನೇ ಬಾರಿಗೆ ಟ್ರೋಫಿಯನ್ನು ಗೆದ್ದುಕೊಂಡಿತು. ಫೈನಲ್​ನಲ್ಲಿ ಸೋತ ನಂತರ ಭಾರತೀಯ ಆಟಗಾರರೊಂದಿಗೆ ಪ್ರಧಾನಿ ಮೋದಿ ಸಂವಹನ ನಡೆಸಿ ಸಮಾಧಾನ ಹೇಳಿದರು. ಮುಂದಿನ ದಿನಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವಂತೆ ಅವರು ಪ್ರೇರಣೆ ಕೊಟ್ಟರು.

ಐಸಿಸಿ ಟ್ರೋಫಿಯನ್ನು ಗೆಲ್ಲುವ ಭಾರತ ತಂಡ ಮತ್ತೊಂದು ಸುವರ್ಣಾವಕಾಶವನ್ನು ಕಳೆದುಕೊಂಡಿತು. ಈ ನಡುವೆಯೂ ತಮ್ಮನ್ನು ಭೇಟಿಯಾದ ಪ್ರಧಾನಿ ಮೋದಿ ಅವರಿಗೆ ರವೀಂದ್ರ ಜಡೇಜಾ ಧನ್ಯವಾದ ಸಲ್ಲಿಸಿದ್ದಾರೆ.

“ನಾವು ಉತ್ತಮ ಟೂರ್ನಿಯನ್ನು ಹೊಂದಿದ್ದೆವು. ಆದರೆ ನಾವು ನಿನ್ನೆಯ ಆಟದಲ್ಲಿ ಸೋತೆವು. ನಮ್ಮೆಲ್ಲರ ಹೃದಯ ಒಡೆದು ಹೋಗಿದೆ. ಆದರೆ ನಮ್ಮ ಜನರ ಬೆಂಬಲವು ನಮ್ಮನ್ನು ಮುಂದುವರಿಯುವಂತೆ ಮಾಡುತ್ತಿದೆ. ಪ್ರಧಾನಿ ಮೋದಿ ಅವರು ನಿನ್ನೆ ಡ್ರೆಸ್ಸಿಂಗ್ ರೂಮ್​ಗೆ ಭೇಟಿ ನೀಡಿ ಸಂತೈಸಿದ್ದು ಪ್ರೇರಣಾದಾಯಕವಾಗಿತ್ತು,” ಎಂದು ಜಡೇಜಾ ಟ್ವೀಟ್ ಮಾಡಿದ್ದಾರೆ.

ನಾವು ಎಲ್ಲವನ್ನೂ ಪ್ರಯತ್ನಿಸಿದ್ದೇವೆ’; ಸೋಲಿಗೆ ಕಾರಣ ತಿಳಿಸಿದ ರೋಹಿತ್

ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ಭಾನುವಾರ ರಾತ್ರಿ ನಡೆದ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ(India vs Australia, Final) ಅಮೋಘ ಪ್ರದರ್ಶನ ತೋರಿದ ಆಸ್ಟ್ರೇಲಿಯಾ ತಂಡ ಭಾರತ ವಿರುದ್ಧ 6 ವಿಕಟ್​ಗಳ ಅಂತರದಿಂದ ಗೆದ್ದು 6ನೇ ಬಾರಿ ವಿಶ್ವಕಪ್​ ಚಾಂಪಿಯನ್​ ಆಗಿ ಹೊರಹೊಮ್ಮಿತು. ಸೋಲಿನ ಬಳಿಕ ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮ(Rohit Sharma) ತಂಡದ ಸೋಲಿಗೆ ಪ್ರಮುಖ ಕಾರಣವನ್ನು ತಿಳಿಸಿದ್ದಾರೆ.

ಪಂದ್ಯ ಮುಕ್ತಾಯಕ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್​ನಲ್ಲಿ ಮಾತನಾಡಿದ ರೋಹಿತ್ ಶರ್ಮಾ, “ಫಲಿತಾಂಶವು ನಾವು ಅಂದುಕೊಂಡಂತೆ ಬರಲಿಲ್ಲ. ನಮ್ಮ ಕಡೆಯಿಂದ ಇನ್ನಷ್ಟು ಉತ್ತಮವಾದ ಪ್ರದರ್ಶನ ಬೇಕಿತ್ತು” ಎಂದು ಹೇಳಿದರು.

20-30 ರನ್‌ ಕೊರತೆ

“ನಾವು ಎಲ್ಲವನ್ನೂ ಪ್ರಯತ್ನಿಸಿದ್ದೇವೆ, ಆದರೆ ಗೆಲುವು ಮಾತ್ರ ಇಲಿಯಲಿಲ್ಲ. 20 ರಿಂದ 30 ರನ್‌ಗಳು ಹೆಚ್ಚು ಕಲೆಹಾಕುತ್ತಿದ್ದರೆ ಪಂದ್ಯ ಗೆಲ್ಲಬಹುದಿತ್ತು. ಕೆ.ಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ಉತ್ತಮ ಜತೆಯಾಟವನ್ನು ನಡೆಸಿದ್ದಾರೆ. ಬೌಲಿಂಗ್​ನಲ್ಲಿಯೂ ಬುಮ್ರಾ, ಶಮಿ ಉತ್ತಮ ನಿರ್ವಹಣೆ ನೀಡಿದ್ದಾರೆ. ರನ್ ಕಡಿಮೆಯಾದದ್ದೇ ಸೋಲಿಗೆ ಪ್ರಮುಖ ಕಾರಣ. ಬೌಲರ್​ಗಳು ಶಕ್ತಿ ಮೀರಿ ಪ್ರಯತ್ನಿಸಿದ್ದಾರೆ. ಬ್ಯಾಟಿಂಗ್​ ವಿಭಾಗದ ವೈಫಲ್ಯವೇ ಹಿನ್ನಡೆಯಾಯಿತು. 270 ರಿಂದ 280 ರನ್​ಗಳನ್ನು ಬಾರಿಸುತ್ತಿದ್ದರೆ ಪಂದ್ಯ ಗೆಲ್ಲಬಹುದಿತ್ತು” ಎಂದು ಹೇಳಿದರು.

ಇದನ್ನೂ ಓದಿ : Virat Kohli: ಫೈನಲ್ ಪಂದ್ಯದಲ್ಲಿ ಬೆಸ್ಟ್​ ಫೀಲ್ಡರ್​ ಪ್ರಶಸ್ತಿ ಗೆದ್ದ ವಿರಾಟ್​ ಕೊಹ್ಲಿ

“ಆರಂಭಿಕ ಹಂತದಲ್ಲಿ ಮೂರು ವಿಕೆಟ್​ ಪಡೆದರೂ ಟ್ರಾವಿಸ್​ ಹೆಡ್ ಮತ್ತು ಲಬುಶೇನ್ ಅವರು ದೊಡ್ಡ ಜತೆಯಾಟ ನಡೆಸಿ ನಮ್ಮ ಎಲ್ಲ ಯೋಜನೆಗಳನ್ನು ವಿಫಲಗೊಳಿಸಿದರು.ನಮ್ಮಿಂದ ಆಗುವಷ್ಟು ಪ್ರಯತ್ನ ನಾವು ಮಾಡಿದ್ದೇವೆ. ಆದರೆ ಅದೃಷ್ಟ ಕೈ ಹಿಡಿಯಲಿಲ್ಲ” ಎಂದು ಹೇಳಿ ಭಾವುಕರಾದರು.

Exit mobile version