Site icon Vistara News

Doping Test | ಕರ್ನಾಟಕದ ಪೂವಮ್ಮಗೆ ಎರಡು ವರ್ಷ ನಿಷೇಧ, ಶಿಕ್ಷೆಯ ಪ್ರಮಾಣ 3 ತಿಂಗಳಿಂದ 2 ವರ್ಷಕ್ಕೆ ಏರಿಕೆ

doping test

ಬೆಂಗಳೂರು : ಉದ್ದೀಪನ ಮದ್ದು ಸೇವನೆ ಪರೀಕ್ಷೆಯಲ್ಲಿ (Doping Test) ಫೇಲಾಗಿರುವ ಕರ್ನಾಟಕದ ಅಥ್ಲೀಟ್‌ ಎಮ್‌. ಪೂವಮ್ಮ ಅವರಿಗೆ ಎರಡು ವರ್ಷಗಳ ನಿಷೇಧ ಶಿಕ್ಷೆಯನ್ನು ಪ್ರಕಟಿಸಲಾಗಿದೆ. ೩೨ ವರ್ಷದ ಪೂವಮ್ಮ ಅವರು ೨೦೨೧ರ ಫೆಬ್ರವರಿಯಲ್ಲಿ ಪಂಜಾಬ್‌ನ ಪಟಿಯಾಲದಲ್ಲಿ ನಡೆದ ಇಂಡಿಯನ್ ಗ್ರ್ಯಾನ್‌ ಪ್ರಿ ಕೂಟದಲ್ಲಿ ಭಾಗವಹಿಸಿದ್ದರು. ಈ ವೇಳೇ ಅವರು ಉದ್ದೀಪನಾ ಮದ್ದು ನಿಗ್ರಹ ಘಟಕಕ್ಕೆ ನೀಡಿದ ಸ್ಯಾಂಪಲ್‌ನಲ್ಲಿ ನಿಷೇಧದ ಪಟ್ಟಿಯಲ್ಲಿರುವ ಮಿಥೈಲ್‌ ಹೆಕ್ಸಾನಿಮೈನ್‌ ಅಂಶ ಕಂಡು ಬಂದಿತ್ತು.

ಪೂವಮ್ಮ ಅವರು ತಪ್ಪಿತಸ್ಥೆ ಎಂದು ಸಾಬೀತಾದ ಹಿನ್ನೆಲೆಯಲ್ಲಿ ೨೦೨೨ರ ಜೂನ್‌ನಲ್ಲಿ ಅಂತಾರಾಷ್ಟ್ರೀಯ ಉದ್ದೀಪನಾ ಮದ್ದು ನಿಗ್ರಹ ಘಟಕ (ವಾಡಾ) ಮೂರು ವರ್ಷ ತಿಂಗಳು ಶಿಕ್ಷೆ ಪ್ರಕಟಿಸಿತ್ತು. ರಾಷ್ಟ್ರೀಯ ಉದ್ದೀಪನಾ ಮದ್ದು ನಿಗ್ರಹ ಘಟಕ ಈ ಶಿಕ್ಷೆಯನ್ನು ಪ್ರಶ್ನಿಸಿ ಆಂಟಿ ಡೋಪಿಂಗ್‌ ಅಪೀಲ್‌ ಪ್ಯಾನೆಲ್‌ಗೆ (ಎಡಿಎಪಿ) ಮೇಲ್ಮನವಿ ಸಲ್ಲಿಸಲಾಗಿತ್ತು. ಅದನ್ನು ಬದಿರಿರಿಸಿದ ಎಡಿಸಿಎ ಶಿಕ್ಷೆಯನ್ನು ಎರಡು ವರ್ಷಕ್ಕೆ ಏರಿಕೆ ಮಾಡಿದೆ.

“೨೦೨೧ರ ಫೆಬ್ರವರಿಯಲ್ಲಿ ಪೂವಮ್ಮ ಅವರಿಂದ ಸ್ಯಾಂಪಲ್ ಪಡೆದುಕೊಳ್ಳಲಾಗಿದೆ. ಅಂದಿನಿಂದ ಇಲ್ಲಿಯವರೆಗೆ ಅವರು ಗೆದ್ದಿರುವ ಎಲ್ಲ ಮೆಡಲ್‌ಗಳನ್ನು ಮುಟ್ಟುಗೋಲು ಹಾಕಲಾಗುವುದು ಹಾಗೂ ಫಲಿತಾಂಶಗಳನ್ನು ಅಮಾನ್ಯ ಮಾಡಲಾಗುವುದು,” ಎಂಬುದಾಗಿ ಎಡಿಎಪಿ ಹೇಳಿದೆ.

ಪೂವಮ್ಮ ಅವರು ಭಾರತದ ಭರವಸೆಯ ಅಥ್ಲೀಟ್‌ ಆಗಿ ಬೆಳೆದಿದ್ದರು. ೨೦೧೮ರಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಅವರು 4×100 ಮೀಟರ್‌ ಮಹಿಳೆಯರ ರಿಲೇಯಲ್ಲಿ ಚಿನ್ನದ ಪದಕ ಗೆದ್ದಿದ್ದರು. ಅಂತೆಯೇ ೨೦೧೨ರ ಏಷ್ಯನ್‌ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದರು.

ಇದನ್ನೂ ಓದಿ | Commonwealth Games | ಮತ್ತೊಂದು ಉದ್ದೀಪನಾ ಕಳಂಕ

Exit mobile version