Site icon Vistara News

PR Sreejesh: ಶ್ರೀಜೇಶ್​ ಜೆರ್ಸಿ ಸಂಖ್ಯೆ 16ಕ್ಕೆ ವಿದಾಯ ಹೇಳಿದ ಹಾಕಿ ಇಂಡಿಯಾ

PR Sreejesh

PR Sreejesh: PR Sreejesh's Jersey Number 16 to be Retired as Hockey India Honour Legend With Classy Gesture

ನವದೆಹಲಿ: ಭಾರತ ಪುರುಷರ ಹಾಕಿ ತಂಡದ ದಿಗ್ಗಜ ಗೋಲು ಕೀಪರ್​ ಪಿ.ಆರ್ ಶ್ರೀಜೇಶ್(PR Sreejesh)​ ಅವರು ಈಗಾಗಲೇ ಅಂತಾರಾಷ್ಟ್ರೀಯ ಹಾಕಿಗೆ ವಿದಾಯ ಹೇಳಿದ್ದಾರೆ. ಇದೀಗ ಭಾರತೀಯ ಹಾಕಿಗೆ ಅವರು ನೀಡಿದ ಅಪಾರ ಸೇವೆಯನ್ನು ಪರಿಗಣಿಸಿ ಹಾಕಿ ಇಂಡಿಯಾ(Hockey India) ಶ್ರೀಜೇಶ್ ಅವರ ಜೆರ್ಸಿ ನಂ.16ಕ್ಕೆ ವಿದಾಯ ಹೇಳಲು ನಿರ್ಧರಿಸಿದೆ.

ಭಾರತ ಹಾಕಿ ತಂಡ ಸತತವಾಗಿ ಒಲಿಂಪಿಕ್ಸ್​ ಕಂಚಿನ ಪದಕ ಗೆಲ್ಲುವಲ್ಲಿ ಶ್ರೀಜೇಶ್ ಪ್ರಮುಖ ಪಾತ್ರ ವಹಿಸಿದ್ದರು. ತಡೆಗೋಡೆಯಂತೆ ನಿಂತು ಎದುರಾಳಿ ತಂಡಗಳ ಗೋಲುಗಳನ್ನು ತಡೆದು ಭಾರತ ತಂಡದ ಗೆಲುವಿಗೆ ಯಶಸ್ಸು ತಂದುಕೊಟ್ಟಿದ್ದರು. ಈ ಎಲ್ಲ ಕಾರ್ಯ ಸಾಧನೆಯನ್ನು ಪರಿಗಣಿಸಿ ಅವರ ಜೆರ್ಸಿ ನಂ.16ಕ್ಕೆ ಹಾಕಿ ಇಂಡಿಯಾ ವಿದಾಯ ಹೇಳಿದೆ. ಈ ಮೂಲಕ ಅವರಿಗೆ ಗೌರವ ಸೂಚಿಸಿದೆ.

‘ಶ್ರೀಜೇಶ್ ಅವರು ತಮ್ಮ 18 ವರ್ಷಗಳ ಹಾಕಿ ವೃತ್ತಿ ಜೀವನದಲ್ಲಿ ಭಾರತದ ಹಾಕಿಗೆ ಅಪಾರ ಕೊಡುಗೆ ಸಲ್ಲಿಸಿದ್ದಾರೆ. ಅವರು ಧರಿಸಿದ್ದ ಜೆರ್ಸಿ ಸಂಖ್ಯೆ 16 ಅನ್ನು ಹಿರಿಯ ತಂಡದಿಂದ ನಿವೃತ್ತಿ ಘೋಷಿಸುತ್ತಿದ್ದೇವೆ. ಕಿರಿಯರ ತಂಡದಲ್ಲಿ ಆ ಸಂಖ್ಯೆಗೆ ನಿವೃತ್ತಿ ಘೋಷಿಸಲಾಗಿಲ್ಲ’ ಎಂದು ಹಾಕಿ ಇಂಡಿಯಾ ಕಾರ್ಯದರ್ಶಿ ಭೋಲಾ ನಾಥ್ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ಗೆ ತೆರೆ; ಅದ್ಧೂರಿ ಸಮಾರೋಪದಲ್ಲಿ ಮನು ಭಾಕರ್​, ಶ್ರೀಜೇಶ್​ ಭಾಗಿ

ಇನ್ನು ಮುಂದೆ ಶ್ರೀಜೇಶ್ ಧರಿಸುತ್ತಿದ್ದ ಜೆರ್ಸಿ ಸಂಖ್ಯೆ 16 ಅನ್ನು ಹಾಕಿ ಹಿರಿಯರ ತಂಡದ ಯಾವೊಬ್ಬ ಆಟಗಾರರಿಗೂ ನೀಡಲಾಗುವುದಿಲ್ಲ. ಪ್ಯಾರಿಸ್​ ಒಲಿಂಪಿಕ್ಸ್​ ಕಂಚಿನ ಪದಕ ಪಂದ್ಯವನ್ನಾಡುವ ಮೂಲಕ ಶ್ರೀಜೇಶ್​ ತಮ್ಮ 18 ವರ್ಷಗಳ ಹಾಕಿ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದರು.​

ಶ್ರೀಜೇಶ್​ ಅವರಿಗೆ ಹಾಕಿ ಇಂಡಿಯಾ(Hockey India) ಭಾರತ ಜೂನಿಯರ್ ಪುರುಷರ ತಂಡದ ಹೊಸ ಮುಖ್ಯ ಕೋಚ್ ಆಗಿ ನೇಮಿಸಿದೆ. 36 ವಷದ ಕೇರಳದ ಶ್ರೀಜೇಶ್‌ ಭಾರತ ಪರ 336 ಪಂದ್ಯಗಳನ್ನು ಆಡಿದ್ದಾರೆ. 2 ಒಲಿಂಪಿಕ್ಸ್‌ ಕಂಚಿನ ಪದಕ, ಏಷ್ಯನ್‌ ಗೇಮ್ಸ್‌ನಲ್ಲಿ 2 ಚಿನ್ನ, 1 ಕಂಚು, ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ 2 ಬೆಳ್ಳಿ, ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿಯಲ್ಲಿ 2 ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ.

ಕೇರಳದ ಕೊಚ್ಚಿಯ ಆಟಗಾರ

ಕೇರಳದ ಕೊಚ್ಚಿಯ ಉಪನಗರವಾದ ಕಿಝಕ್ಕಂಬಲಂನಲ್ಲಿ ಜನಿಸಿದ ಶ್ರೀಜೇಶ್ ಕೃಷಿ ಕುಟುಂಬದಿಂದ ಬಂದವರು. ಹಾಕಿ ಕಿಟ್ ಖರೀದಿಸಲು ತಮ್ಮ ಹಸುವನ್ನು ಮಾರಿದ ಅವರ ತಂದೆಯ ತ್ಯಾಗವು ಕ್ರೀಡೆಯಲ್ಲಿ ಅವರ ಆರಂಭಿಕ ಹಂತದ ಪ್ರಯಾಣವಾಗಿತ್ತು. ಸಾಂಪ್ರದಾಯಿಕ ಉಡುಗೆ ಮತ್ತು ಮಲಯಾಳಂ ಉಚ್ಚಾರಣೆಗಾಗಿ ಅಪಹಾಸ್ಯವನ್ನು ಎದುರಿಸುತ್ತಿದ್ದರೂ, ಶ್ರೀಜೇಶ್ ತನ್ನ ತಂದೆಯ ಅಚಲ ಬೆಂಬಲದಿಂದ ತಿರುವನಂತಪುರಂನ ಜಿವಿ ರಾಜಾ ಸ್ಪೋರ್ಟ್ಸ್ ಸ್ಕೂಲ್​ಗೆ ಸೇರಿದ್ದರು ಅಲ್ಲಿ ಅವರ ತರಬೇತುದಾರರು ಗೋಲ್ ಕೀಪಿಂಗ್ ಆಯ್ಕೆ ಮಾಡಲು ಸಲಹೆ ನೀಡಿದರು. ಈ ನಿರ್ಧಾರವು ಅವರ ವೃತ್ತಿಜೀವನವನ್ನು ರೂಪಿಸುವಲ್ಲಿ ನಿರ್ಣಾಯಕವಾಯಿತು.

Exit mobile version