Site icon Vistara News

FTX Crypto Cup | ವಿಶ್ವದ ನಂಬರ್‌ ಒನ್ ಆಟಗಾರನಿಗೆ ಮತ್ತೆ ಸೋಲುಣಿಸಿದ ಭಾರತದ 16ರ ಗ್ರ್ಯಾಂಡ್‌ ಮಾಸ್ಟರ್‌

FTX Crypto Cup

ಮಿಯಾಮಿ : ಭಾರತದ ೧೬ ವರ್ಷದ ಚೆಸ್‌ ಗ್ರ್ಯಾಂಡ್‌ ಮಾಸ್ಟರ್‌ ಪ್ರಜ್ಞಾನಂದ ರಮೇಶ್‌ಬಾಬು ವಿಶ್ವದ ನಂಬರ್‌ ಒನ್ ಆಟಗಾರ ನಾರ್ವೆಯ ಮ್ಯಾಗ್ನಸ್‌ ಕಾರ್ಲ್‌ಸೆನ್‌ ಅವರಿಗೆ ಮತ್ತೊಮ್ಮೆ ಸೋಲುಣಿಸಿದ್ದಾರೆ. ಸೋಮವಾರ ನಡೆದ ಎಫ್‌ಟಿಎಕ್ಸ್‌ ಕ್ರಿಪ್ಟೋ ಕಪ್‌ (FTX Crypto Cup) ಚೆಸ್‌ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಅವರು ಅನುಭವಿ ಆಟಗಾರನಿಗೆ ಸೋಲುಣಿಸಿದರು. ಆದಾಗ್ಯೂ ಅವರು ಒಟ್ಟು ಅಂಕಗಳ ಆಧಾರದಲ್ಲಿ ರನ್ನರ್‌ ಅಪ್‌ ಸ್ಥಾನ ತಮ್ಮದಾಗಿಸಿಕೊಂಡರು. ಪ್ರಜ್ಞಾನಂದ ಅಗ್ರ ಸ್ಥಾನಿಯನ್ನು ಸೋಲಿಸುವುದು ಪ್ರಸಕ್ತ ವರ್ಷದಲ್ಲಿ ಮೂರನೇ ಬಾರಿ. ಅವರು ಕಳೆದ ಫೆಬ್ರವರಿಯಲ್ಲಿ ನಡೆದ ಏರ್‌ಥಿಂಗ್ ಮಾಸ್ಟರ್ಸ್‌ ಚೆಸ್‌ ಸ್ಪರ್ಧೆಯಲ್ಲಿ ಕಾರ್ಲ್‌ಸೆನ್ ಅವರನ್ನು ಮೊದಲ ಬಾರಿ ಮಣಿಸಿದ್ದರು. ನಂತರ ಮೇ ತಿಂಗಳಲ್ಲಿ ಚೆಸ್ಸೇಬಲ್‌ ಮಾಸ್ಟರ್ಸ್‌ನಲ್ಲಿ ಮಣಿಸಿದ್ದರು.

ಕೊನೇ ಸತ್ತಿನ ಸ್ಪರ್ಧೆಯಲ್ಲಿ ಪ್ರಜ್ಞಾನಂದ ೪-೨ ಅಂಕಗಳಿಂದ ಗೆಲುವು ಸಾಧಿಸಿದರು. ಆದರೂ ಅವರಿಗೆ ಒಟ್ಟಾರೆ ೧೫ ಅಂಕಗಳನ್ನು ಮಾತ್ರ ಸಂಪಾದಿಸಲು ಸಾಧ್ಯವಾಯಿತು. ೧೬ ಅಂಕಗಳನ್ನು ಪಡೆದುಕೊಂಡ ಕಾರ್ಲ್‌ಸೆನ್‌ ಅವರು ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಪ್ರಜ್ಞಾನಂದ ಅವರು ಇತ್ತೀಚಿನ ಕೆಲವು ದಿನಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದು, ಮಹಾಬಲಿಪುರಮ್‌ನಲ್ಲಿ ನಡೆದ ೪೪ನೇ ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತ ಬಿ ತಂಡ ಕಂಚಿನ ಪದಕ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

“ಕಳೆದ ಕೆಲವು ದಿನಗಳಿಂದ ನಾನು ಇನ್ನಷ್ಟು ಉತ್ತಮ ಫಲಿತಾಂಶ ಪಡೆಯಬಹುದಾಗಿತ್ತು. ಆದರೂ ನಾನು ಎರಡನೇ ಸ್ಥಾನ ಪಡೆದುಕೊಂಡೆ,” ಎಂದು ಪ್ರಜ್ಞಾನಂದ ಅವರು ಹೇಳಿದ್ದಾರೆ.

ಇದನ್ನೂ ಓದಿ | ರಜನಿಕಾಂತ್‌ ಭೇಟಿಯಾದ Grandmaster ಪ್ರಜ್ಞಾನಂದ; ರಾಘವೇಂದ್ರ ಸ್ವಾಮಿ ಫೋಟೊ ಗಿಫ್ಟ್‌

Exit mobile version