ಕೌಲಲಾಂಪುರ: ಇಲ್ಲಿ ನಡೆಯುತ್ತಿರುವ ಮಲೇಷ್ಯಾ ಓಪನ್(Malaysia Open) ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಎಚ್.ಎಸ್ ಪ್ರಣಯ್ ಅವರು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋತು ಕೂಟದಿಂದ ಹೊರಬಿದ್ದಿದ್ದಾರೆ. ಇದರೊಂದಿಗೆ ಈ ಕೂಟದಲ್ಲಿ ಭಾರತ ಸಿಂಗಲ್ಸ್ ರೇಸ್ ಕೊನೆಗೊಂಡಿದೆ.
ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಎಚ್.ಎಸ್ ಪ್ರಣಯ್ ಅವರು ವಿಶ್ವದ 7ನೇ ಶ್ರೇಯಾಂಕದ ಜಪಾನ್‌ನ ಕೊಡಾಯಿ ನರೋಕಾ ವಿರುದ್ಧ 16-21, 21-19, 10-21 ಗೇಮ್ಗಳ ಅಂತರದಿಂದ ಸೋಲು ಕಂಡರು. ಉಭಯ ಆಟಗಾರರ ಈ ಹೋರಾಟ 84 ನಿಮಿಷದ ವರೆಗೆ ಸಾಗಿತ್ತು.
ಪ್ರಣಯ್ ಮೊದಲ ಗೇಲ್ನಲ್ಲಿ ಸೋತರೂ ದ್ವಿತೀಯ ಗೇಮ್ನಲ್ಲಿ ತಿರುಗಿಬಿದ್ದು ಮೇಲುಗೈ ಸಾಧಿಸಿದರು. ಆದರೆ ಅಂತಿಮ ಮತ್ತು ನಿರ್ಣಾಯಕ ಗೇಮ್ನಲ್ಲಿ ನರೋಕಾ ಆಕ್ರಮಣಕಾರಿ ಆಟಕ್ಕೆ ಮುಂದಾದರು. ಬಲಿಷ್ಠ ಹೊಡೆತಗಳ ಮೂಲಕ ಪ್ರಯಣಯ್ ಅವರನ್ನು ಕಾಡಿದರು. ಅವರ ಈ ಬಿರುಸಿನ ಆಟದ ಮುಂದೆ ಯಾವ ಹಂತದಲ್ಲಿಯೂ ಪ್ರಣಯ್ಗೆ ಸವಾಲೊಡ್ಡಲಾಗದೆ ಕೇವಲ 10 ಅಂಕಕ್ಕೆ ಸೀಮಿತಗೊಂಡು ಶರಣಾದರು.
ಇದಕ್ಕೂ ಮುನ್ನ ಗುರುವಾರ ನಡೆದ 16ನೇ ಸುತ್ತಿನ ಪುರುಷರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಎಚ್.ಎಸ್. ಪ್ರಣಯ್ ಇಂಡೋನೇಷ್ಯಾದ 19ನೇ ಶ್ರೇಯಾಂಕದ ಆಟಗಾರ ಚಿಕೊ ಔರ ದ್ವಿ ವಾರ್ಡೊಯೊ ವಿರುದ್ಧ 21-9, 15-21, 21-16 ಅಂತರದ ಗೆಲುವು ಸಾಧಿಸಿದ್ದರು.
ಇದನ್ನೂ ಓದಿ | Malaysia Open | ಲಕ್ಷ್ಯ ಸೇನ್ ಮಣಿಸಿ ದ್ವಿತೀಯ ಸುತ್ತಿಗೆ ಪ್ರವೇಶಿಸಿದ ಎಚ್.ಎಸ್ ಪ್ರಣಯ್