Site icon Vistara News

IPL 2023: ಐಪಿಎಲ್​ನಿಂದ ಹೊರಬಿದ್ದ ಕರ್ನಾಟಕದ ಬಲಗೈ ವೇಗಿ ಪ್ರಸಿದ್ಧ್ ಕೃಷ್ಣ!

prasidh krishna

#image_title

ಬೆಂಗಳೂರು: 16ನೇ ಆವೃತ್ತಿಯ ಐಪಿಎಲ್(IPL 2023) ಟೂರ್ನಿಯ ವೇಳಾಪಟ್ಟಿ ಇಂದು(ಫೆ.17)​ ಬಿಡುಗಡೆಗೊಂಡಿದೆ. ಆದರೆ ಟೂರ್ನಿ ಆರಂಭಕ್ಕೂ ಮುನ್ನ ರಾಜಸ್ಥಾನ ರಾಯಲ್ಸ್(rajasthan royals)​ ತಂಡಕ್ಕೆ ಆಘಾತವೊಂದು ಎದುರಾಗಿದೆ. ಬೆನ್ನು ನೋವಿನಿಂದ ಬಳಲುತ್ತಿರುವ ಟೀಮ್​ ಇಂಡಿಯಾದ ಮಧ್ಯಮ ವೇಗಿ ಪ್ರಸಿದ್ಧ್ ಕೃಷ್ಣ(Prasidh Krishna) ಅವರು ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ ಎಂದು ವರದಿಯಾಗಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಪರ ಆಡುವ ಕರ್ನಾಟಕದ ಬಲಗೈ ವೇಗಿ ಪ್ರಸಿದ್ಧ್ ಕೃಷ್ಣ ಬೆನ್ನು ನೋವಿನ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಗುರುವಾರ(ಫೆ.16) ಟ್ವಿಟರ್​ನಲ್ಲಿ ತಾನು ಚೇತರಿಕೆಯ ಹಾದಿಯಲ್ಲಿದ್ದೇನೆ ಎಂದು ಹೇಳಿದ್ದರು. ಆದರೆ ಇದೀಗ ಅವರ ಚೇತರಿಕೆಗೆ ಸುಮಾರು 8 ತಿಂಗಳ ಕಾಲ ವಿಶ್ರಾಂತಿ ಅಗತ್ಯವಿದೆ ಎಂದು ವರದಿಯಾಗಿದೆ. ಹೀಗಾಗಿ ಅವರು 16ನೇ ಆವೃತ್ತಿಯ ಐಪಿಎಲ್​ಗೆ ಅನುಮಶನ ಎನ್ನಲಾಗಿದೆ.

ಪ್ರಸಿದ್ಧ ಕೃಷ್ಣ ಅವರು ಕಳೆದ ಸೆಪ್ಟೆಂಬರ್​ನಲ್ಲಿ ಕಿವೀಸ್​ ‘ಎ’ ವಿರುದ್ಧ ಮೂರು ಪಂದ್ಯಗಳ ಅನಧಿಕೃತ ಟೆಸ್ಟ್ ಸರಣಿಯ ಮುನ್ನಾದಿನ ಗಾಯಗೊಂಡಿದ್ದರು. ಇದರಿಂದಾಗಿ ಅವರು ದೀರ್ಘಕಾಲದವರೆಗೆ ಆಟದಿಂದ ಹೊರಗುಳಿಯಬೇಕಾಯಿತು.

ಪ್ರಸಿದ್ಧ ಕೃಷ್ಣ ಅವರು ಕೊನೆಯದಾಗಿ ಭಾರತ ತಂಡದ ಪರ ಕಳೆದ ವರ್ಷದ ಆಗಸ್ಟ್​ನಲ್ಲಿ ಭಾರತದ ಜಿಂಬಾಬ್ವೆ ಪ್ರವಾಸದಲ್ಲಿ ಆಡಿದ್ದರು. ಒಟ್ಟಾರೆಯಾಗಿ ಅವರು ಟೀಮ್ ಇಂಡಿಯಾ ಪರ 14 ಏಕ ದಿನ ಪಂದ್ಯವಾಡಿದ್ದು 23.92 ರ ಸರಾಸರಿಯಲ್ಲಿ 25 ವಿಕೆಟ್​ ಕಲೆಹಾಕಿದ್ದಾರೆ.

Exit mobile version