ಬೆಂಗಳೂರು: ಪಂಜಾಬ್ ಕಿಂಗ್ಸ್ ತಂಡದ ಮಾಲೀಕರಾದ ಪ್ರೀತಿ ಜಿಂಟಾ (Preity Zinta) ಅವರು ಐಪಿಎಲ್ 2024 (IPL 2024) ರಲ್ಲಿ ಸಂಪೂರ್ಣವಾಗಿ ಬ್ಯುಸಿಯಾಗಿದ್ದಾರೆ. ಅವರು ತಮ್ಮ ಪಂಜಾಬ್ ಕಿಂಗ್ಸ್ (Punjab Kings) ತಂಡವನ್ನು ಹುರಿದುಂಬಿಸಲೆಂದೇ ಸ್ಟೇಡಿಯಮ್ಗೆ ಬರುತ್ತಿದ್ದಾರೆ. ಅಂತೆಯೇ ಗುರುವಾರ (ಏಪ್ರಿಲ್ 18ರಂದು) ಕಾಯಂ ನಾಯಕ ಶಿಖರ್ ಧವನ್ ಇಲ್ಲದೆ ಮುಂಬೈ ಇಂಡಿಯನ್ಸ್ ಆಡುತ್ತಿರುವ ಪಂಜಾಬ್ ತಂಡಕ್ಕೆ ಪ್ರೋತ್ಸಾಹ ನೀಡಲು ಅವರು ಬಂದಿದ್ದರು. ಅಂತೆಯೇ ಅವರು ಪಂದ್ಯಕ್ಕೆ ಮೊದಲು ಮಾತನಾಡುತ್ತಾ ರೋಹಿತ್ ಶರ್ಮಾ ಅವರನ್ನು ಪಡೆದುಕೊಳ್ಳುವುದಕ್ಕೆ ಜೀವನ ಪಣವಿಡುತ್ತೇನೆ ಎಂದು ಹೇಳಿದ್ದಾರೆ. ಈ ಮಾರು ವೈರಲ್ ಆಗಿದೆ.
ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯಕ್ಕೂ ಮುನ್ನ ಮಾತನಾಡಿದ ಪ್ರೀತಿ ಜಿಂಟಾ, ಮುಂಬರುವ ಐಪಿಎಲ್ ಮೆಗಾ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ತಂಡ ರೋಹಿತ್ ಅವರನ್ನು ಬಿಡುಗಡೆ ಮಾಡಿದರೆ ಅವರನ್ನು ನಾಯಕನನ್ನಾಗಿ ಮಾಡಲು ತಮ್ಮ ಪ್ರಾಣವನ್ನು ಪಣಕ್ಕಿಡಲು ಸಿದ್ಧ ಎಂದು ಹೇಳಿದ್ದಾರೆ.
“ರೋಹಿತ್ ಶರ್ಮಾ ಮೆಗಾ ಹರಾಜಿಗೆ ಬಂದರೆ ಅವರನ್ನು ಪಡೆಯಲು ನಾನು ನನ್ನ ಜೀವನವನ್ನು ಪಣಕ್ಕಿಡುತ್ತೇನೆ. ನಮ್ಮ ತಂಡದಲ್ಲಿ ಸ್ಥಿರತೆ ಮತ್ತು ಚಾಂಪಿಯನ್ ಮನಸ್ಥಿತಿಯನ್ನು ತರುವ ನಾಯಕನನ್ನು ಮಾತ್ರ ನಾವು ಕಳೆದುಕೊಳ್ಳುತ್ತಿದ್ದೇವೆ”ಎಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಸೋತ ನಂತರ ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ಪ್ರೀತಿ ಜಿಂಟಾ ಹೇಳಿದ್ದಾರೆ.
ಐಪಿಎಲ್ 2024 ಪಾಯಿಂಟ್ಸ್ ಟೇಬಲ್ನ್ಲಲಿ 8 ನೇ ಸ್ಥಾನದಲ್ಲಿರುವ ಶಿಖರ್ ಧವನ್ ನೇತೃತ್ವದ ಪಂಜಾಬ್ ಕಿಂಗ್ಸ್ ಈ ಋತುವಿನಲ್ಲಿ ಕೆಟ್ಟ ಫಾರ್ಮ್ನಿಂದ ಬಳಲುತ್ತಿದೆ.
ಇದನ್ನೂ ಓದಿ: IPL 2024 : ಮದುವೆ ಆಮಂತ್ರಣಕ್ಕೆ ಸಿಎಸ್ಕೆ ಥೀಮ್, ಯುವ ಜೋಡಿಯ ಅಭಿಮಾನಕ್ಕೆ ಮೆಚ್ಚುಗೆ
ಮತ್ತೊಂದು ಫ್ರಾಂಚೈಸಿ ರೋಹಿತ್ ಶರ್ಮಾ ಬಗ್ಗೆ ಆಸಕ್ತಿ ತೋರಿಸುತ್ತಿರುವುದು ಇದೇ ಮೊದಲಲ್ಲ. ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಐಪಿಎಲ್ ಮೆಗಾ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಮಾಜಿ ನಾಯಕ ಲಭ್ಯವಿರಬೇಕು ಎಂದು ಹಲವು ತಂಡಗಳು ಬಯಸಿವೆ. ಇದಕ್ಕೂ ಮುನ್ನ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಕೂಡ ರೋಹಿತ್ ಶರ್ಮಾ ಅವರನ್ನು ತಮ್ಮ ತಂಡದಲ್ಲಿ ಹೊಂದುವ ಬಗ್ಗೆ ಮಾತನಾಡಿದ್ದರು.