Site icon Vistara News

ಪ್ರಧಾನಿ ಮೋದಿ, ಖರ್ಗೆ, ಸಚಿನ್​ ಸೇರಿ ಹಲವರಿಂದ ಪ್ರಜ್ಞಾನಂದ ಸಾಧನೆಗೆ ಮೆಚ್ಚುಗೆ

Chess grandmaster Rameshbabu Praggnanandhaa

ನವದೆಹಲಿ: ಗುರುವಾರ ನಡೆದ ವಿಶ್ವಕಪ್​ ಚೆಸ್​​ ಫೈನಲ್(Chess World Cup)​ ಪಂದ್ಯದಲ್ಲಿ 2 ದಶಕಗಳ ಬಳಿಕ ಫೈನಲ್‌ ಪ್ರವೇಶಿಸಿದ ಭಾರತೀಯ ಗ್ರ್ಯಾಂಡ್ ಮಾಸ್ಟರ್ ಆರ್. ಪ್ರಜ್ಞಾನಂದ(R Praggnanandhaa) ಅವರು ವಿಶ್ವ ನಂ.1 ನಾರ್ವೆಯ ಮ್ಯಾಗ್ನಸ್‌ ಕಾರ್ಲ್‌ಸನ್‌(Magnus Carlsen)ಗೆ ತೀವ್ರ ಪೈಪೋಟಿ ನೀಡಿ ವಿರೋಚಿತ ಸೋಲು ಕಂಡಿದ್ದಾರೆ. ಆದರೆ ಕೇವಲ 18 ವರ್ಷದಲ್ಲಿ ಈ ಮಟ್ಟದ ಶ್ರೇಷ್ಠ ಸಾಧನೆ ತೋರಿದ ಅವರನ್ನು ದೇಶದ ಪ್ರಧಾನಿ ನರೇಂದ್ರ ಮೋದಿ(PM Narendra Modi), ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjun Kharge), ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡೂಲ್ಕರ್(Sachin Tendulkar)​ ಸೇರಿ ಹಲವರು ಕೊಂಡಾಡಿದ್ದಾರೆ.

ಟ್ವೀಟ್​ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ ಮೋದಿ

“ವಿಶ್ವದ ಅಗ್ರಸ್ಥಾನಿಯ ವಿರುದ್ಧ ನೀವು ಮೂರು ದಿನಗಳ ಕಾಲ ನಡೆಸಿದ ಹೋರಾಟವೇ ನಿಮ್ಮ ಗೆಲುವು. ಫಿಡೆ ವಿಶ್ವಕಪ್​ನಲ್ಲಿ ನೀಡಿದ ಗಮನಾರ್ಹ ಪ್ರದರ್ಶನಕ್ಕೆ ನಮಗೆ ಹೆಮ್ಮೆ ಇದೆ. ಇಡೀ ದೇಶವೇ ನಿಮ್ಮ ಸಾಧನೆಯನ್ನು ಕೊಂಡಾಡಿದೆ. ನಿಮ್ಮ ಅಸಾಧಾರಣ ಕೌಶಲ್ಯ ಜಗತ್ತಿಗೆ ಪರಿಚಯವಾಗಿದೆ. ಇದು ಸಣ್ಣ ಸಾಧನೆಯಲ್ಲ. ಛಲದಿಂದ ಮುನ್ನಗ್ಗಿ ಮುಂದಿನ ಪಂದ್ಯಗಳಲ್ಲಿ ಗೆಲುವು ಖಚಿತ. ಮುಂದಿನ ಎಲ್ಲ ಪಂದ್ಯಗಳಿಗೂ ಶುಭ ಹಾರೈಸುತ್ತೇನೆ” ಎಂದು ಮೋದಿ ಟ್ವಿಟರ್​ನಲ್ಲಿ ಪ್ರಜ್ಞಾನಂದ ಸಾಧನೆಗೆ ಮೆಚ್ಚುಗೆ ಸೂಚಿಸಿದ್ದಾರೆ.

ಸಾಕಷ್ಟು ಮಂದಿಗೆ ಸ್ಫೂರ್ತಿ; ಖರ್ಗೆ ಮೆಚ್ಚುಗೆ

“ಯುವ ಮತ್ತು ಪ್ರತಿಭಾವಂತ ಗ್ರ್ಯಾಂಡ್‌ಮಾಸ್ಟರ್ ಪ್ರಜ್ಞಾನಂದ ಅವರಿಗೆ ಅಭಿನಂದನೆಗಳು. ನೀವು ವಿಶ್ವಕಪ್​​ನಲ್ಲಿ ಆಡಿದ ಅತ್ಯಂತ ಕಿರಿಯ ಆಟಗಾರ ಎಂಬ ಇತಿಹಾಸ ನಿರ್ಮಿಸಿದ್ದೀರ. ನಿಮ್ಮ ಈ ಅಭೂತಪೂರ್ವ ಸಾಧನೆ ಕಂಡು ದೇಶವೇ ಹೆಮ್ಮೆ ಪಟ್ಟಿದೆ. ನೀವು ಸಾಕಷ್ಟು ಮಂದಿಗೆ ಸ್ಫೂರ್ತಿ. ನಿಮ್ಮ ಭವಿಷ್ಯವು ಯಶಸ್ವಿಯಾಗಲಿ. ಶ್ರೇಷ್ಠ ಪ್ರದರ್ಶನದೊಂದಿಗೆ ಇನ್ನೂ ದೊಡ್ಡ ಸ್ಥಾನಮಾನ ಸಿಗುವಂತಾಗಲಿ” ಎಂದು ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಶುಭ ಹಾರೈಸಿದ್ದಾರೆ.

ಇದನ್ನೂ ಓದಿ R Praggnanandhaa: ಚದುರಂಗ ಚತುರನಿಗೆ ಎಲ್ಲೇ ಹೋದರೂ ಅಮ್ಮನ ಅಡುಗೆಯೇ ಬೇಕು

ಕನಸುಗಳನ್ನು ಬೆನ್ನಟ್ಟುತ್ತಿರಿ; ಸಚಿನ್​ ಹಾರೈಕೆ

“ಸೋಲು ಗೆಲುವು ಕ್ರೀಡೆಯ ಪ್ರಮುಖ ಭಾಗ. ಇಂದು ಸೋತರೆ ನಾಳೆ ಗೆಲುವು ಖಚಿತ. ಆದರೆ ನಿಮ್ಮ ಈ ಸಾಧನೆಯನ್ನು ಸೋಲು ಎಂದು ಪರಿಣಿಸಲು ಕಷ್ಟ. ಟೂರ್ನಿಯುದ್ದಕ್ಕೂ ನೀವು ತೋರಿದ ಪ್ರದರ್ಶನಕ್ಕೆ ಅಭಿನಂದನೆಗಳು. ಕನಸುಗಳನ್ನು ಬೆನ್ನಟ್ಟುತ್ತಿರಿ. ಭಾರತವನ್ನು ಹೆಮ್ಮೆ ಪಡುವಂತೆ ಮಾಡುತ್ತಲೇ ಇರಿ” ಎಂದು ಸಚಿನ್​ ತೆಂಡೂಲ್ಕರ್​ ಅವರು ಪ್ರಜ್ಞಾನಂದ ಅವರಿಗೆ ಮುಂದಿನ ಟೂರ್ನಿಗೆ ಆತ್ಮವಿಶ್ವಾಸ ತುಂಬಿದ್ದಾರೆ.

ಫೈನಲ್​ ಪ್ರವೇಶಿಸಿದ ಕೇವಲ 2ನೇ ಭಾರತೀಯ

ಗುರುವಾರ ನಡೆದ ಟೈ ಬ್ರೇಕರ್ ಪಂದ್ಯದಲ್ಲಿ ಮೊದಲ ಸೆಟ್​ನಲ್ಲಿ ಪ್ರಜ್ಞಾನಂದ ಹಿನ್ನಡೆ ಅನುಭವಿಸಿದರು. ಆ ಬಳಿಕದ ಸುತ್ತಿನಲ್ಲಿ ಡ್ರಾ ಸಾಧಿಸಿದರೂ 1-0 ಮುನ್ನಡೆ ಕಾಯ್ದುಕೊಂಡ ಮ್ಯಾಗ್ನಸ್‌ ಕಾರ್ಲ್‌ಸನ್‌ ಗೆದ್ದು 6ನೇ ಬಾರಿ ವಿಶ್ವ ಕಿರೀಟ ತಮ್ಮದಾಗಿಸಿಕೊಂಡರು. ಪ್ರಜ್ಞಾನಂದ ಅವರು ವಿಶ್ವನಾಥನ್‌ ಆನಂದ್‌ ಬಳಿಕ ಚೆಸ್‌ ವಿಶ್ವಕಪ್‌ನಲ್ಲಿ ಫೈನಲ್​ ಪ್ರವೇಶಿಸಿದ ಕೇವಲ 2ನೇ ಭಾರತೀಯ ಎನಿಸಿಕೊಂಡಿದ್ದಾರೆ. 2000 ಹಾಗೂ 2002ರಲ್ಲಿ ವಿಶ್ವನಾಥನ್‌ ಆನಂದ್‌ ಭಾರತಕ್ಕೆ ವಿಶ್ವಕಪ್​ ಗೆದ್ದಿದ್ದರು. ಆದರೆ ಪ್ರಜ್ಞಾನಂದ ಅವರು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟರು.

ಇದನ್ನೂ ಓದಿ R Praggnanandhaa: ಚದುರಂಗ ಚತುರನಿಗೆ ಎಲ್ಲೇ ಹೋದರೂ ಅಮ್ಮನ ಅಡುಗೆಯೇ ಬೇಕು

ಮೊದಲ ಸುತ್ತಿನ ಫಸ್ಟ್ ಗೇಮ್​ನ 16 ಚಲನೆಗಳ ನಂತರ, ಕಾರ್ಲ್‌ಸೆನ್‌ನ ‘ಬಿಷಪ್’ ಗಾಗಿ ಪ್ರಜ್ಞಾನಂದ ತನ್ನ ‘ನೈಟ್’ (ಹೋರ್ಸ್ ಹೆಡ್) ತ್ಯಾಗ ಮಾಡಿದರು. ಇದರ ಬೆನ್ನಲ್ಲೇ ಇಬ್ಬರು ತಮ್ಮ ರಾಣಿಯನ್ನೂ ಕೂಡ ಕಳೆದುಕೊಂಡರು. ಆದರೆ 21ನೇ ನಡೆಯ ವೇಳೆಗೆ ಕಾರ್ಲ್​ಸೆನ್ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದರು. ಇದೇ ವೇಳೆ ಪ್ರಜ್ಞಾನಂದ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದರು. 25 ನಡೆಗಳ ಬಳಿಕ ಪ್ರಜ್ಞಾನಂದ ಸಮಬಲ ಸಾಧಿಸುವಲ್ಲಿ ಯಶಸ್ವಿಯಾದರು. ಆದರೆ 34 ನಡೆಗಳ ವೇಳೆಗೆ ಇಬ್ಬರು ರೂಕ್ ಕಾಯಿಕೆಯನ್ನು ಕಳೆದುಕೊಂಡಿದ್ದರು. 47 ಚಲನೆಯ ಬಳಿಕ ಟೈಬ್ರೇಕ್​ನ ಮೊದಲ ಗೇಮ್​ನಲ್ಲಿ ಜಯ ಸಾಧಿಸುವಲ್ಲಿ ಯಶಸ್ವಿಯಾದ ಕಾರ್ಲ್‌ಸೆನ್ 1-0 ಮುನ್ನಡೆ ಸಾಧಿಸಿ ಪಂದ್ಯವನ್ನು ತಮ್ಮದಾಗಿಸಿಕೊಂಡರು.

Exit mobile version