ಲಂಡನ್: ಕೆಲ ದಿನಗಳ ಹಿಂದೆ ಕೌಂಟಿ ಕ್ರಿಕೆಟ್ ಟೂರ್ನಿಯಲ್ಲಿ ದಾಖಲೆಯ ದ್ವಿಶತಕ ಬಾರಿಸಿದ ಟೀಮ್ ಇಂಡಿಯಾದ ಯುವ ಆಟಗಾರ ಪೃಥ್ವಿ ಶಾ(Prithvi Shaw) ಮತ್ತೊಂದು ಪಂದ್ಯದಲ್ಲಿಯೂ ಭರ್ಜರಿ ಶತಕ ಬಾರಿಸಿ ಸಂಭ್ರಮಿಸಿದ್ದಾರೆ. ಈ ಮೂಲಕ ತಮ್ಮ ಬ್ಯಾಟಿಂಗ್ ಪ್ರತಾಪವನ್ನು ಮುಂದುವರಿಸಿದ್ದಾರೆ. ಅವರ ಪ್ರದರ್ಶನ ಕಂಡು ತಂಡದ ಕೋಚ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡರ್ಹಾಮ್ ತಂಡ 198 ರನ್ನಿಗೆ ಆಲೌಟಾಯಿತು. ಗುರಿ ಬೆನ್ನಟ್ಟಿದ ನಾರ್ಥಂಪ್ಟನ್‌ಶೈರ್ ತಂಡ ಕೇವಲ 25.4 ಓವರ್‌ಗಳಲ್ಲಿ ನಾಲ್ಕು ವಿಕೆಟಿಗೆ 204 ರನ್ ಗಳಿಸಿ ಜಯಭೇರಿ ಬಾರಿಸಿತು. ಪೃಥ್ವಿ ಶಾ 125 ರನ್ ಬಾರಿಸಿ ಅಜೇಯರಾಗಿ ಉಳಿದರು. 76 ಎಸೆತ ಎದುರಿಸಿದ ಅವರು 15 ಬೌಂಡರಿ ಮತ್ತು 7 ಸಿಕ್ಸರ್ ಬಾರಿಸಿ ತಂಡದ ಗೆಲವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಕೆಲ ದಿನಗಳ ಹಿಂದೆ ದಾಖಲೆಯ ದ್ವಿಶತಕ
ಕಳೆದ ಮಂಗಳವಾರ ನಡೆದಿದ್ದ ಪಂದ್ಯದಲ್ಲಿ ಪೃಥ್ವಿ ಶಾ ಅವರು ಸಿಡಿಲಬ್ಬರ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ 153 ಎಸೆತಗಳಿಂದ 244 ರನ್ ಬಾರಿಸಿದ್ದರು. ಅವರ ಈ ವಿಸ್ಫೋಟಕ ಬ್ಯಾಟಿಂಗ್ ಇನಿಂಗ್ಸ್ನಲ್ಲಿ 28 ಬೌಂಡರಿ ಮತ್ತು 11 ಸಿಕ್ಸರ್ ಸಿಡಿಸಿದ್ದರು. ಈ ಮೂಲಕ ಟೂರ್ನಿಯ ಇತಿಹಾಸದಲ್ಲಿ ದ್ವಿಶತಕ(Prithvi Shaw hits double hundred) ಸಿಡಿಸಿದ ಕೇವಲ ಮೂರನೇ ಕ್ರಿಕೆಟಿಗ ಮತ್ತು ಮಪದಲ ಭಾರತೀಯ ಆಟಗಾರ ಎಂಬ ದಾಖಲೆ ಬರೆದಿದ್ದರು. ಜತೆಗೆ ಕೌಂಟಿಯಲ್ಲಿ ವೈಯಕ್ತಿಕ ಅತ್ಯಧಿಕ ಮೊತ್ತ ಪೇರಿಸಿದ ಒಲಿ ರಾಬಿನ್ಸನ್(ollie robinson) ಹೆಸರಿನಲ್ಲಿದ್ದ ದಾಖಲೆಯನ್ನು ಕೂಡ ಅಳಿಸಿ ಹಾಕಿದ್ದರು. ರಾಬಿನ್ಸನ್ 206 ರನ್ ಬಾರಿಸಿದ್ದರು. ಪೃಥ್ವಿ ಶಾ 244 ರನ್ ಬಾರಿಸಿ ಈ ದಾಖಲೆಯನ್ನು ಮೀರಿ ನಿಂತಿದ್ದರು.
ಆಯ್ಕೆ ಸಮಿತಿ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ
ಇಂಗ್ಲೆಂಡ್ನ ಲಿಸ್ಟ್ ಎ ಕ್ರಿಕೆಟ್, ಕೌಂಟಿಯಲ್ಲಿ(county cricket 2023) ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆತ್ತಿರುವ ಪೃಥ್ವಿ ಶಾ ಕಳೆದ ವಾರ ಮಾಧ್ಯಮದ ಜತೆ ಮಾತನಾಡುವ ವೇಳೆ ರಾಷ್ಟ್ರೀಯ ತಂಡದ ಭವಿಷ್ಯದ ಕುರಿತಾಗಿ ಸದ್ಯಕ್ಕೆ ಯೋಚಿಸುತ್ತಿಲ್ಲ. ಕೌಂಟಿ ಕ್ರಿಕೆಟ್ನಲ್ಲಿ ಹೆಚ್ಚಿನ ಅವಧಿಯನ್ನು ಆನಂದಿಸಲು ಬಯಸಿದ್ದೇನೆ ಎಂದು ಹೇಳಿದ್ದರು. “ನಾನಿಲ್ಲಿ ಉತ್ತಮ ಕ್ರಿಕೆಟ್ ಆಡುತ್ತಿದ್ದೇನೆ. ನಾಟಿಂಗ್ಹ್ಯಾಮ್ಶೇರ್ ನನಗೆ ಈ ಉತ್ತಮ ಅವಕಾಶ ನೀಡಿದೆ” ಎಂದು ಹೇಳುವ ಮೂಲಕ ಆಯ್ಕೆ ಸಮಿತಿಗೆ ಪರೋಕ್ಷವಾಗಿ ಕುಟುಕಿದ್ದರು.
ಇದನ್ನೂ ಓದಿ Prithvi Shaw : ಯೂಟ್ಯೂಬರ್ ಸಪ್ನಾ ಗಿಲ್ಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಪೃಥ್ವಿ ಶಾ ನಿರಾಳ
He's done it again! 🌟
— Metro Bank One Day Cup (@onedaycup) August 13, 2023
Prithvi Shaw has another #MBODC23 century as the Steelbacks chase down 199 to win pic.twitter.com/b4B8NfOgNe
ಎರಡು ವರ್ಷಗಳಿಂದ ಅವಕಾಶ ಪಡೆದಿಲ್ಲ
2018ರಲ್ಲಿ ಟೀಮ್ ಇಂಡಿಯಾಕ್ಕೆ ಪದಾರ್ಪಣೆ ಮಾಡಿದ ಪೃಥ್ವಿ ಶಾ ಅವರು ಆರಂಭಿಕ ದಿನಗಳಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಭಾರತದ ಭವಿಷ್ಯದ ಸಚಿನ್ ತೆಂಡೂಲ್ಕರ್ ಎಂದು ಹೇಳಲಾಗಿತ್ತು. ಆದರೆ ಆ ಬಳಿಕ ಸತತ ಗಾಯದ ಸಮಸ್ಯೆಗೆ ಸಿಲುಕಿ ತಂಡದಲ್ಲಿ ಸರಿಯಾಗಿ ಅವಕಾಶ ಪಡೆಯಲೇ ಇಲ್ಲ. ಕಳೆದ ಎರಡು ವರ್ಷಗಳಿಂದ ಭಾರತ ತಂಡದಿಂದ ದೂರವುಳಿದಿರುವ ಅವರು 2021ರ ಜುಲೈನಲ್ಲಿ ಶ್ರೀಲಂಕಾ ಪರ ಕೊನೆಯ ಪಂದ್ಯ ಆಡಿದ್ದರು.