Site icon Vistara News

Prithvi Shaw: ಪೃಥ್ವಿ ಶಾ ಕಾರಿನ ಮೇಲೆ ದಾಳಿ: ನಟಿ ಸಪ್ನಾ ಗಿಲ್ ಸೇರಿ ನಾಲ್ವರಿಗೆ 14 ದಿನ ನ್ಯಾಯಾಂಗ ಬಂಧನ

Prithvi Shaw

#image_title

ಮುಂಬಯಿ: ಟೀಮ್​ ಇಂಡಿಯಾ ಕ್ರಿಕೆಟಿಗ ಪೃಥ್ವಿ ಶಾ(Prithvi Shaw) ಅವರೊಂದಿಗೆ ಅಮಾನುಷವಾಗಿ ನಡೆದುಕೊಂಡು ಬಳಿಕ ಅವರ ಕಾರಿನ ಮೇಲೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ನ್ಯಾಯಾಲಯ ನಟಿ ಸಪ್ನಾ ಗಿಲ್(Sapna Gill) ಮತ್ತು ಇತರ ಮೂವರು ಆರೋಪಿಗಳನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಪ್ರಾಥಮಿಕ ವಿಚಾರಣೆ ಸಲುವಾಗಿ ಪೊಲೀಸರ ವಶದಲ್ಲಿದ್ದ ಸಪ್ನಾ ಗಿಲ್ ಮತ್ತು ಪ್ರಕರಣದಲ್ಲಿ ಭಾಗಿಯಾದ ಇತರ ಆರೋಪಿಗಳನ್ನು ಸೋಮವಾರ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಇದೇ ವೇಳೆ ಆಪಾದಿತ ಅಪರಾಧಕ್ಕೆ ಬಳಸಿದ ಬೇಸ್‌ಬಾಲ್ ಬ್ಯಾಟ್ ಮತ್ತು ವಾಹನವನ್ನು ವಶಪಡಿಸಿಕೊಳ್ಳಬೇಕಾಗಿದೆ ಎಂದು ಹೇಳುವ ಮೂಲಕ ಪೊಲೀಸರು ಬಂಧನದ ಅವಧಿಯನ್ನು ವಿಸ್ತರಿಸಲು ಕೋರಿದರು. ಆದರೆ ಈ ಮನವಿಯನ್ನು ತಿರಸ್ಕರಿಸಿದ ನ್ಯಾಯಾಲಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಇದನ್ನೂ ಓದಿ Prithvi Shaw: ಪೃಥ್ವಿ ಶಾ ಮೇಲೆ ದಾಳಿಗೆ ಯತ್ನಿಸಿ ಬಂಧನವಾಗಿರುವ ಸಪ್ನಾ ಗಿಲ್ ಯಾರು?

ಫೆ.15 ಬುಧವಾರ ಮುಂಬೈನ ಸಾಂತಾಕ್ರೂಜ್ ಪ್ರದೇಶದ ಐಷಾರಾಮಿ ಹೋಟೆಲ್‌ನ ಹೊರಗೆ ಪೃಥ್ವಿ ಶಾ ಸೆಲ್ಫಿ ಕ್ಲಿಕ್ಕಿಸಲು ನಿರಾಕರಿಸಿದ ಕಾರಣಕ್ಕೆ ಸಪ್ನಾ ಗಿಲ್ ಅವರು ಪೃಥ್ವಿ ಶಾ ಮೇಲೆ ದಾಳಿ ಮಾಡಲು ಯತ್ನಿಸಿದ್ದರು. ಬಳಿಕ ಆಕೆಯ ಸ್ನೇಹಿತ ಶೋಭಿತ್ ಠಾಕೂರ್ ಸೇರಿ ಇತರ ಗೆಳೆಯರು ಪೃಥ್ವಿ ಶಾ ಅವರ ಕಾರಿನ ದಾಳಿ ನಡೆಸಿದ್ದರು.

Exit mobile version