Site icon Vistara News

Prithvi Shaw: ಸೆಲ್ಫಿ ನಿರಾಕರಿಸಿದ್ದಕ್ಕೆ ಪೃಥ್ವಿ ಶಾ ಕಾರಿನ ಮೇಲೆ ದಾಳಿ; 8 ಮಂದಿ ವಿರುದ್ಧ ಪ್ರಕರಣ ದಾಖಲು

Prithvi Shaw

#image_title

ಮುಂಬಯಿ: ಟೀಮ್​ ಇಂಡಿಯಾದ(team india) ಯುವ ಆಟಗಾರ ಪೃಥ್ವಿ ಶಾ(Prithvi Shaw) ಅವರ ಕಾರಿನ ಮೇಲೆ 8 ಅಪರಿಚಿತರು ದಾಳಿ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸೆಲ್ಫಿ (Selfie) ತೆಗೆದುಕೊಳ್ಳಲು ನಿರಾಕರಿಸಿದ ಹಿನ್ನೆಲೆಯಲ್ಲಿ ಪೃಥ್ವಿ ಶಾ ಅವರ ಕಾರಿನ ಮೇಲೆ ಬೇಸ್‌ಬಾಲ್ ಬ್ಯಾಟ್‌ಗಳಿಂದ ದಾಳಿ ಮಾಡಲಾಗಿದೆ ಎಂದು ಮುಂಬೈನ ಓಶಿವಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಫೆ.15ರಂದು ಪೃಥ್ವಿ ಶಾ ತಮ್ಮ ಸ್ನೇಹಿತರೊಂದಿಗೆ ಮುಂಬೈಯ ಸಾಂತಾಕ್ರೂಜ್​ ಹೊಟೇಲ್​ನಲ್ಲಿ ಡಿನ್ನರ್​ ಮಾಡಲು ತೆರಳಿದ್ದಾರೆ. ಇದೇ ವೇಳೆ ಕೆಲ ವ್ಯಕ್ತಿಗಳು ಪೃಥ್ವಿ ಶಾ ಅವರೊಂದಿಗೆ ಎರಡನೇ ಬಾರಿ ಸೆಲ್ಫಿ ತೆಗೆಯಲು ಮುಂದಾಗಿದ್ದಾರೆ. ಆದರೆ ಪೃಥ್ವಿ ಶಾ ಇದನ್ನು ನಿರಾಕರಿಸಿದ್ದಾರೆ. ಇದರಿಂದ ಕೋಪಗೊಂಡ ಈ ವ್ಯಕ್ತಿಗಳು ಪೃಥ್ವಿ ಶಾ ಕಾರಿನ ಮೇಲೆ ದಾಳಿ ನಡೆಸಿದ್ದಾರೆ. ಈ ಸಂಬಂಧ ಪೃಥ್ವಿ ಶಾ ಓಶಿವಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ Vinod Kambli: ಪತ್ನಿ ಮೇಲೆ ಹಲ್ಲೆ; ಮಾಜಿ ಕ್ರಿಕೆಟಿಗ ಕಾಂಬ್ಳಿ ವಿರುದ್ಧ ಎಫ್​ಐಆರ್​

ಪೃಥ್ವಿ ಶಾ ನೀಡಿದ ದೂರಿನ ಮೇರೆಗೆ ಸನಾ ಗಿಲ್, ಶೋಭಿತ್ ಠಾಕೂರ್ ಸೇರಿದಂತೆ ಒಟ್ಟು 8 ಮಂದಿ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 143, 148, 149, 384, 437, 504, 506 ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Exit mobile version