Site icon Vistara News

Prithvi Shaw: ಪೃಥ್ವಿ ಶಾಗೆ ಬೆನ್ನು ಬಿಡದ ಗಾಯ; ಒನ್‌ ಡೇ ಕಪ್‌ನಿಂದ ಔಟ್‌

Prithvi Shaw scored 429 runs in four innings for Northamptonshire

ಲಂಡನ್‌: ಟೀಮ್‌ ಇಂಡಿಯಾದ ಯುವ ಆಟಗಾರ ಪೃಥ್ವಿ ಶಾ(Prithvi Shaw) ಅವರಿಗೆ ಗಾಯದ ಸಮಸ್ಯೆ ಬೆನ್ನು ಬಿಡುವಂತೆ ಕಾಣುತ್ತಿಲ್ಲ. ಪ್ರತಿಭಾವಂತ ಆಟಗಾರನಾಗಿದ್ದರೂ ಗಾಯದಿಂದಾಗಿಯೇ ಅವರ ಅರ್ಥ ಕ್ರಿಕೆಟ್‌ ಬಾಳ್ವೆ ಮುಕ್ತಾಯ ಕಂಡಿದೆ ಎಂದರು ತಪ್ಪಾಗಲಾರದು. ಬ್ಯಾಟಿಂಗ್‌ ಫಾರ್ಮ್‌ ಕಂಡುಕೊಳ್ಳಲು ಇಂಗ್ಲೆಂಡ್‌ ದೇಶಿ ಕ್ರಿಕೆಟ್‌ ಟೂರ್ನಿಯಾದ ಕೌಂಟಿಯತ್ತ(County) ಮುಖ ಮಾಡಿದ ಅವರಿಗೆ ಮತ್ತೆ ಗಾಯದ ಸಮಸ್ಯೆ ಕಾಡಿದೆ. ಮೊಣಕಾಲಿನ ಗಾಯದಿಂದಾಗಿ(Knee injury) ಟೂನಿಯಿಂದ ಹೊರಬಿದ್ದಿದ್ದಾರೆ.

ಕಳೆದ ವಾರವಷ್ಟ್ರೇ ದಾಖಲೆಯ ದ್ವಿಶತಕ ಮತ್ತು ಶತಕ ಸಿಡಿಸಿ ಮಿಂಚಿದ್ದ ಪೃಥ್ವಿ ಶಾ ಟೀಮ್‌ ಇಂಡಿಯಾಕ್ಕೆ ಕಮ್‌ಬ್ಯಾಕ್‌ ಮಾಡುವ ನಿರೀಕ್ಷೆಯಲ್ಲಿದ್ದರು. ಆದರೆ ಮೊಣಕಾಲಿನ ಗಾಯ ಅವರ ಎಲ್ಲ ನಿರೀಕ್ಷೆಯನ್ನು ಹುಸಿಗೊಳಿಸಿದೆ. ಗಾಯಗೊಂಡು ಟೂರ್ನಿಯಿಂದ ಹೊರ ಬಿದ್ದ ವಿಚಾರವನ್ನು ನಾರ್ಥಾಂಪ್ಟನ್‌ಶೈರ್(Northamptonshire) ಮುಖ್ಯ ತರಬೇತುದಾರ ಜಾನ್ ಸ್ಯಾಡ್ಲರ್(John Sadler) ಖಚಿತಪಡಿಸಿದ್ದಾರೆ.

“ನಾರ್ಥಾಂಪ್ಟನ್‌ಶೈರ್ ಪರ ಆಡುತ್ತಿದ್ದ ಪೃಥ್ವಿ ಶಾ ಆಡಿದ ಎಲ್ಲ ಪಂದ್ಯದಲ್ಲಿಯೂ ಉತ್ತಮ ಪ್ರದರ್ಶನ ತೋರಿದ್ದಾರೆ. ಗಾಯದಿಂದಾಗಿ ತಂಡದಿಂದ ಹೊರಬಿದ್ದಿರುವುದು ನಿಜಕ್ಕೂ ಬೇಸರ ತಂದಿದೆ. ಶೀಘ್ರ ಗುಣಮುಖರಾಗಿ ಮತ್ತೆ ತಂಡ ಸೇರುವಂತಾಗಲಿ. ನಿಮ್ಮ ಅನುಪಸ್ಥಿತಿ ತಂಡಕ್ಕೆ ದೊಡ್ಡ ಹಿನ್ನಡೆ” ಎಂದು ಜಾನ್ ಸ್ಯಾಡ್ಲರ್ ಹೇಳಿದರು.

ಫೀಲ್ಡಿಂಗ್‌ ವೇಳೆ ಗಾಯ

ಪೃಥ್ವಿ ಶಾ ಡರ್ಹಾಮ್ ವಿರುದ್ಧದ ಕೊನೆಯ ಲೀಗ್‌ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಬಿದ್ದು ಗಾಯಗೊಂಡಿದ್ದರು. ಸ್ಕ್ಯಾನಿಂಗ್‌ಗೆ ಒಳಪಟ್ಟ ಅವರ ವರದಿ ಬುಧವಾರ ಲಭ್ಯಗಾಗಿದೆ. ವರದಿಯಲ್ಲಿ ಗಾಯದ ಪ್ರಮಾಣ ಹೆಚ್ಚಾಗಿರುವುದು ಕಂಡು ಬಂದಿದೆ. ಶಸ್ತ್ರಚಿಕಿತ್ಸೆಯ ಅಗತ್ಯ ಇರುವುದರಿಂದ ಅವರಿಗೆ ಬಿಸಿಸಿಐ(BCCI) ಮೇಲ್ವಿಚಾರಣೆಯಲ್ಲಿ ಲಂಡನ್‌ನಲ್ಲಿರುವ ತಜ್ಞ ವೈದ್ಯರ ಬಳಿಚಿಕಿತ್ಸೆ ಪಡೆಯಲಿದ್ದಾರೆ.

ಗಾಯದ ಮಧ್ಯೆಯೂ ಶತಕ ಬಾರಿಸಿದ್ದ ಶಾ

ಫೀಲ್ಡಿಂಗ್‌ ವೇಳೆ ಗಾಯಗೊಂಡರೂ ಛಲ ಬಿಡದ ಪೃಥ್ವಿ ಬ್ಯಾಟಿಂಗ್‌ ನಡೆಸಿದ್ದರು. ವಿಸ್ಫೋಟಕ ಬ್ಯಾಟಿಂಗ್‌ ನಡೆಸಿ ತಂಡಕ್ಕೆ ಗೆಲುವು ತಂದು ಕೊಟ್ಟಿದ್ದರು. ಡರ್ಹಾಮ್‌ ನೀಡಿದ್ದ 199 ರನ್‌ ಗುರಿ ಬೆನ್ನಟುವ ವೇಳೆ 76 ಎಸೆತಗಳಲ್ಲಿ ಬರೋಬ್ಬರಿ 7 ಸಿಕ್ಸರ್‌ ಹಾಗೂ 15 ಬೌಂಡರಿಗಳೊಂದಿಗೆ 125 ರನ್‌ ಸಿಡಿಸಿದ್ದರು. ಆಗಸ್ಟ್‌ 13 ರಂದು ಈ ಪಂದ್ಯ ನಡೆದಿತ್ತು.

ಟೀಮ್‌ ಇಂಡಿಯಾದಿಂದಲೂ ದೂರ

2018ರಲ್ಲಿ ಟೀಮ್​ ಇಂಡಿಯಾಕ್ಕೆ ಪದಾರ್ಪಣೆ ಮಾಡಿದ ಪೃಥ್ವಿ ಶಾ ಅವರು ಆರಂಭಿಕ ದಿನಗಳಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಭಾರತದ ಭವಿಷ್ಯದ ಸಚಿನ್​ ತೆಂಡೂಲ್ಕರ್​ ಎಂದು ಹೇಳಲಾಗಿತ್ತು. ಆದರೆ ಆ ಬಳಿಕ ಸತತ ಗಾಯದ ಸಮಸ್ಯೆಗೆ ಸಿಲುಕಿ ತಂಡದಲ್ಲಿ ಸರಿಯಾಗಿ ಅವಕಾಶ ಪಡೆಯಲೇ ಇಲ್ಲ. ಕಳೆದ ಎರಡು ವರ್ಷಗಳಿಂದ ಭಾರತ ತಂಡದಿಂದ ದೂರವುಳಿದಿರುವ ಅವರು 2021ರ ಜುಲೈನಲ್ಲಿ ಶ್ರೀಲಂಕಾ ಪರ ಕೊನೆಯ ಪಂದ್ಯ ಆಡಿದ್ದರು.

ಇದನ್ನೂ ಓದಿ Prithvi Shaw: ಆಯ್ಕೆ ಸಮಿತಿ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ; ಪೃಥ್ವಿ ಶಾ

ಸಪ್ನಾ ಗಿಲ್​​ಗೆ ಕಿರುಕುಳ ಪ್ರಕರಣದಲ್ಲಿ ನಿರಾಳ

ಇದೇ ವರ್ಷಾರಂಭದಲ್ಲಿ ಮುಂಬಯಿಯ ಉಪನಗರ ಹೋಟೆಲ್​​ನಲ್ಲಿ ಸೆಲ್ಫಿ ಕ್ಲಿಕ್ಕಿಸುವ ವಿಚಾರವಾಗಿ ಸೋಶಿಯಲ್​ ಮೀಡಿಯಾ ಇನ್​ಫ್ಲುಯೆನ್ಸರ್​​ ಸಪ್ನಾ ಗಿಲ್(Sapna Gill) ಮತ್ತು ಅವರ ಸ್ನೇಹಿತರು ಪೃಥ್ವಿ ಶಾ ಕಾರಿನ ಮೇಲೆ ಹಲ್ಲೆ ನಡೆಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಸಪ್ನಾ ಗಿಲ್ ಅವರ ಬಂಧನವಾಗಿತ್ತು. ಜಾಮೀನು ಪಡೆದ ನಂತರ ಗಿಲ್ ವಿಮಾನ ನಿಲ್ದಾಣ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಶಾ ವಿರುದ್ಧ ಲೈಂಗಿಕ ಕಿರುಕುಳ ದೂರು ನೀಡಿದ್ದರು. ಪೊಲೀಸರು ಕ್ರಿಕೆಟಿಗನ ವಿರುದ್ಧ ಪ್ರಕರಣ ದಾಖಲಿಸದ ಕಾರಣ ಅವಳು ನಂತರ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ದೂರು ಸುಳ್ಳು ಮತ್ತು ಆಧಾರರಹಿತ ಎಂದು ಮುಂಬಯಿ ಪೊಲೀಸರು (Mumbai Police) ನ್ಯಾಯಾಲಯಕ್ಕೆ ತಿಳಿಸಿದ ಕಾರಣ ಶಾ ನಿರಾಳರಾಗಿದ್ದರು.

Exit mobile version