Site icon Vistara News

Prithvi Shaw: ಪೃಥ್ವಿ ಶಾ ಮೇಲೆ ದಾಳಿಗೆ ಯತ್ನಿಸಿ ಬಂಧನವಾಗಿರುವ ಸಪ್ನಾ ಗಿಲ್ ಯಾರು?

sapna gill

#image_title

ಮುಂಬಯಿ: ಟೀಮ್ ಇಂಡಿಯಾ ಕ್ರಿಕೆಟಿಗ ಪೃಥ್ವಿ ಶಾ(Prithvi Shaw) ಅವರ ಮೇಲೆ ಹಲ್ಲೆ ವಿಚಾರಕ್ಕೆ ಸಂಬಂಧಿಸಿ ಸ್ವಪ್ನಾ ಗಿಲ್‌(Sapna Gill) ಎಂಬ ಯುವತಿಯನ್ನು ಮುಂಬೈಯ ಓಶಿವಾರ ಪೊಲೀಸರು ಬಂಧಿಸಿದ್ದಾರೆ.

ಫೆ. 15 ರಂದು ಮಹಾರಾಷ್ಟ್ರದ ಮುಂಬೈ ಸಾಂತಾಕ್ರೂಜ್ ವಿಮಾನ ನಿಲ್ದಾಣದ ಬಳಿ ಐಷಾರಾಮಿ ಹೋಟೆಲ್‌ನ ಹೊರಗೆ ಪೃಥ್ವಿ ಜತೆ ಸಪ್ನಾ ಸೆಲ್ಫಿಗಾಗಿ ಮುಗಿಬಿದ್ದು, ವಾಗ್ವಾದ ನಡೆದು ಜಗಳವಾಡಿದ್ದರು. ಇದೀಗ ಪ್ರಕರಣಕ್ಕೆ ಸಂಬಂಧಿಸಿ ಅವರನ್ನು ಬಂಧಿಸಲಾಗಿದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಈ ಸ್ವಪ್ನಾ ಯಾರೆಂದು ಭಾರಿ ಕುತೂಹಲದಿಂದ ಹುಡುಕಾಟ ನಡೆದಿದೆ.

ಸ್ವಪ್ನಾ ಗಿಲ್‌ ಹುಡುಕಾಟ ನಡೆಸಿದ ನೆಟ್ಟಿಗರಿಗೆ ಅವರ ಸಂಪೂರ್ಣ ಹಿನ್ನೆಲೆ ಸಿಕ್ಕಿದ್ದು ಸಾಮಾಜಿಕ ಜಾತಾಣದಲ್ಲಿ ಅವರ ಬಗೆಗಿನ ಎಲ್ಲ ಮಾಹಿತಿಗಳು ವೈರಲ್​ ಆಗಿದೆ. ಸಪ್ನಾ ಗಿಲ್ ಅವರು​ ಮಾಡೆಲ್ ಮತ್ತು ನಟಿಯಾಗಿದ್ದಾರೆ. ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಅವರು ತಮ್ಮ ಫ್ಯಾಷನ್​ ಫೋಟೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಸಪ್ನಾ ಗಿಲ್ ಅವರು ಭೋಜ್‌ಪುರಿ ಚಿತ್ರಗಳಲ್ಲಿ ನಟಿಸಿದ್ದು, 2017 ರಲ್ಲಿ ಕಾಶಿ ಅಮರನಾಥ್ ಮತ್ತು 2021 ರಲ್ಲಿ ಐ ಮೇರಾ ವತನ್ ಎಂಬ ಎರಡು ಚಿತ್ರಗಳಲ್ಲಿ ನಟಿಸಿದ್ದಾರೆ. ಕಾಶಿ ಅಮರನಾಥ್ ಚಿತ್ರದಲ್ಲಿ ಸಪ್ನಾ ಭೋಜ್‌ಪುರಿ ನಟರಾದ ರವಿ ಕಿಶನ್, ದಿನೇಶ್ ಲಾಲ್ ಯಾದವ್ ಮತ್ತು ನಟಿ ಆಮ್ರಪಾಲಿ ದುಬೆ ಅವರೊಂದಿಗೆ ಕೆಲಸ ಮಾಡಿದ್ದಾರೆ. ಸದ್ಯ ಅವರು ಇದೀಗ ಪೊಲೀಸ್​ ಅತಿಥಿಯಾಗಿದ್ದಾರೆ.

Exit mobile version