ಮಂಬಯಿ: ಪ್ರೊ ಕಬಡ್ಡಿ ಲೀಗ್ 11ನೇ(PKL 11) ಆವೃತ್ತಿಗಾಗಿ(Pro Kabaddi 2024) ನಡೆದ ಆಟಗಾರರ ಹರಾಜು ಪ್ರಕ್ರಿಯೆ ಶುಕ್ರವಾರ ಕೊನೆಗೊಂಡಿದೆ. ದ್ವಿತೀಯ ದಿನದ ಹರಾಜಿನಲ್ಲಿ ರೇಡರ್ ಅಜಿತ್ ವಿ. ಕುಮಾರ್ 66 ಲಕ್ಷ ರೂ.ಗೆ ಪುಣೇರಿ ತಂಡದ ಪಾಲಾದರು. ಈ ಮೂಲಕ 2ನೇ ದಿನದ ದುಬಾರಿ ಆಟಗಾರರಾಗಿ ಹೊರಹೊಮ್ಮಿದರು. ಮೊದಲನೇ ದಿನ ಸಚಿನ್ ತನ್ವರ್ 2.15 ಕೋಟಿ ರೂ.ಗೆ ತಮಿಳು ತಲೈವಾಸ್ ಪಾಲಾಗಿ ದುಬಾರಿ ಆಟಗಾರ ಎನಿಸಿಕೊಂಡಿದ್ದರು. 500 ಮಂದಿ ಆಟಗಾರರಲ್ಲಿ 118 ಆಟಗಾರರು ಬೇರೆ ಬೇರೆ ತಂಡಗಳನ್ನು ಸೇರಿಕೊಂಡಿದ್ದಾರೆ.
ಅಜಿತ್ ಕಳೆದ 2 ವರ್ಷಗಳಲ್ಲಿ ಜೈಪುರ ತಂಡದ ಪರ ಗಮನಾರ್ಹ ಪ್ರದರ್ಶನ ತೋರಿದ್ದರು. ಜೈ ಭಗವಾನ್ 63 ಲಕ್ಷ ರೂ.ಗೆ ಬೆಂಗಳೂರು ಬುಲ್ಸ್ ತಂಡಕ್ಕೆ ಸೇರ್ಪಡೆಗೊಂಡರು. ಪ್ರದೀಪ್ ನರ್ವಾಲ್ ಕೂಡ ಈ ಬಾರಿ ಬುಲ್ಸ್ ತಂಡ ಸೇರಿದ್ದು ತಂಡದ ಬಲ ಹೆಚ್ಚಿದೆ. ಅವರನ್ನು 70 ಲಕ್ಷ ರೂ.ಗೆ ಖರೀದಿ ಮಾಡಲಾಗಿತ್ತು. ಎಂ. ಚಂದ್ರನಾಯ್ಕ್ ಈ ಬಾರಿಯ ಪ್ರೊ ಕಬಡ್ಡಿ ಲೀಗ್ನಲ್ಲಿರುವ ಏಕೈಕ ಕನ್ನಡಿಗ, ಒಟ್ಟು ಈ ಬಾರಿ ಹರಾಜಿನಲ್ಲಿ 31 ಮಂದಿ ಕಾಣಿಸಿಕೊಂಡಿದ್ದರು. ಈ ಪೈಕಿ ಒಬ್ಬ ಆಟಗಾರನಿಗೆ ಮಾತ್ರ ಅವಕಾಶ ಸಿಕ್ಕಿದೆ. ಚಂದ್ರನಾಯ್ಕ್ ಬುಲ್ಸ್ ತಂಡದ ಆಟಗಾರನಾಗಿದ್ದಾರೆ.
ಇದನ್ನೂ ಓದಿ Pro Kabaddi League : ತೆಲುಗು ಟೈಟನ್ಸ್ ತಂಡ ಸೇರಿಕೊಂಡ ಪವನ್ ಸೆಹ್ರಾವತ್; ಶಾಡ್ಲೋಯಿಗೆ 2.07 ಕೋಟಿ ರೂ.
ಕೋಟಿ ರೂ. ಪಡೆದ ಆಟಗಾರರು
ಸಚಿನ್ ತನ್ವರ್, 2.15 ಕೋಟಿ ರೂ. (ತಮಿಳುನಾಡು)
ಮೊಹಮ್ಮದ್ ಶಾರ್ದೂಯಿ, 2.07 ಕೋಟಿ (ಹರ್ಯಾಣ)
ಗುಮಾನ್ ಸಿಂಗ್, 1.97 ಕೋಟಿ ರೂ. (ಗುಜರಾತ್)
ಪವನ್ ಸೆಹ್ರಾವತ್, 1.72 ಕೋಟಿ ರೂ. (ತೆಲುಗು)
ಭರತ್ ಹೂಡಾ, 1.30 ಕೋಟಿ ರೂ. (ಯುಪಿ)
ಮಣಿಂದರ್ ಸಿಂಗ್, 1.15 ಕೋಟಿ ರೂ. (ಬೆಂಗಾಲ್)
ಅಜಿಂಕ್ಯ ಪವಾರ್, 1.11 ಕೋಟಿ ರೂ. (ಬೆಂಗಳೂರು)
ಸುನೀಲ್ ಕುಮಾರ್, 1.01 ಕೋಟಿ ರೂ. (ಮುಂಬಾ)
ಬೆಂಗಳೂರು ಬುಲ್ಸ್ ತಂಡ
ಅಜಿಂಕ್ಯ ಪವಾರ್, ಪ್ರದೀಪ್ ನರ್ವಾಲ್, ಲಕ್ಕಿ ಕುಮಾರ್, ಮಂಜೀತ್, ಚಂದ್ರನಾಯ್ಕ ಎಂ., ಹಾಸುನ್ ತೊಂಕ್ರುಯಿಯ, ಪ್ರಮೋದ್ ಸಾಯಿಸಿಂಗ್, ನಿತಿನ್ ರಾವಲ್, ಜೈ ಭಗವಾನ್, ಜತಿನ್. ಉಳಿಸಿಕೊಳ್ಳಲಾಗಿದ್ದ ಆಟಗಾರರು: ಪೊನ್ಪರ್ತಿಬನ್ ಸುಬ್ರಮಣಿಯನ್, ಸುಶೀಲ್, ರೋಹಿತ್ ಕುಮಾರ್, ಸೌರಭ್ ನಂದಲ್, ಆದಿತ್ಯ ಪವಾರ್, ಅಕ್ಷಿತ್, ಅರುಲ್‌ನಂತಬಾಬು, ಪ್ರತೀಕ್.