Site icon Vistara News

Pro Kabaddi: ಸತತ 2ನೇ ಸೋಲು ಕಂಡ ಬೆಂಗಾಲ್​ ವಾರಿಯರ್ಸ್

Bengal Warriors vs Dabang Delhi K.C.

ಚೆನ್ನೈ: ಪ್ರೊ ಕಬಡ್ಡಿ ಲೀಗ್​ನ(Pro Kabaddi) ಭಾನುವಾರದ ಪಂದ್ಯದಲ್ಲಿ ಸೋಲು ಕಂಡಿದ್ದ ಬೆಂಗಾಲ್​ ವಾರಿಯರ್ಸ್(Bengal Warriors)​ ತಂಡ ಮತ್ತೆ ಸೋಲಿನ ಆಘಾತ ಎದುರಿಸಿದೆ. ಸೋಮವಾರದ ಪಂದ್ಯದಲ್ಲಿ ಬಲಿಷ್ಠ ದಬಾಂಗ್​ ಡೆಲ್ಲಿ(Dabang Delhi K.C) ವಿರುದ್ಧ 38-29 ಅಂಕಗಳಿಂದ ಸೋಲು ಕಂಡಿದೆ.

ಚೆನ್ನೈಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಬೆಂಗಾಲ್​ ತಂಡ ಎಲ್ಲ ವಿಭಾಗದಲ್ಲಿಯೂ ವೈಫಲ್ಯ ಕಂಡಿತು. ನಾಯಕ ಮತ್ತು ಸ್ಟಾರ್​ ಆಟಗಾರ ಮಣೀಂದರ್​ ಸಿಂಗ್​ ಒಟ್ಟು 13 ರೇಡ್​ ನಡೆಸಿ ಗಳಿಸಿದ್ದು ಕೇವಲ 6 ಅಂಕ. ಇವರ ಈ ವೈಫಲ್ಯ ತಂಡದ ಸೋಲಿಗೆ ಪ್ರಮುಖ ಕಾರಣ. ಕಳೆದ ಪಂದ್ಯದಲ್ಲಿಯೂ ಕೂಡ ಅವರು ಅತಿ ಬುದ್ಧಿವಂತಿಕೆ ತೋರಲು ಮುಂದಾಗಿ ಪಂದ್ಯವನ್ನು ಸೋಲಿಗೆ ಸೋಲಿನ ಸುಳಿಗೆ ತಳಿದ್ದರು.

ಬೆಂಗಾಲ್​ ಪರ ಇಂದಿನ ಪಂದ್ಯದಲ್ಲಿ ಮಿಂಚಿದ್ದು ಯುವ ಆಟಗಾರ ನಿತೀನ್​ ಕುಮಾರ್​. ಅವರು 14 ರೇಡ್​ ನಡೆಸಿ 9 ಅಂಕ ಗಳಿಸಿದರು. ಇವರದ್ದೇ ತಂಡದ ಗರಿಷ್ಠ ಗಳಿಕೆ. ಇವರನ್ನು ಹೊರತುಪಡಿಸಿ ವೈಭವ್​ ಮತ್ತಯ ಶುಭಂ ತಲಾ 4 ಅಂಕ ಗಳಿಸಿದರು. ಶ್ರೀಕಾಂತ್​ ಜಾಧವ್​ 3 ಅಂಕ ಕಲೆಹಾಕಿದರು.

ಇದನ್ನೂ ಓದಿ Pro Kabaddi: ಟೈಟಾನ್ಸ್​ ಮುಳುಗಿಸಿ ಗೆಲುವಿನ ಹಳಿ ಏರಿದ ಬುಲ್ಸ್​

ಮಿಂಚಿದ ನವೀನ್​

ಎಕ್ಸ್​ಪ್ರೆಸ್​ ವೇಗದಲ್ಲಿ ರೇಡಿಂಗ್​ ಮಾಡುವ ಡೆಲ್ಲಿ ತಂಡದ ರೇಡರ್​ ನವೀನ್​ ಕುಮಾರ್​ ಅವರು ಗಾಯದ ಮಧ್ಯೆಯೂ ಮಿಂಚಿನ ರೇಡಿಂಗ್​ ನಡೆಸಿ 11 ಅಂಕ ಕಲೆಹಾಕಿದರು. ದ್ವಿತೀಯಾರ್ಧದ ಆಟದ ವೇಳೆ ಗಾಯದಿಂದಾಗಿ ಕೆಲ ಕಾಲ ಮ್ಯಾಟ್​ನಿಂದ ಹೊರಗಿದ್ದ ಅವರು ಮತ್ತೆ ಮರಳಿ ಶರವೇಗದ ರೇಡಿಂಗ್​ ನಡೆಸಿ ಗಮನ ಸೆಳೆದರು. ಇದೇ ವೇಳೆ ಪ್ರೋ ಕಬಡ್ಡಿ ಲೀಗ್​ನಲ್ಲಿ 1 ಸಾವಿರ ರೇಡ್ ಅಂಕಗಳನ್ನು ಪೂರ್ತಿಗೊಳಿಸಿದರು.

ಎಡ ಮತ್ತು ಬಲ ಭಾಗದ ಡಿಫೆಂಡಿಂಗ್​ನಲ್ಲಿ ಯೋಗೇಶ್​ ಮತ್ತು ಆಶೀಸ್​ ಸೇರಿಕೊಂಡು ಬಲಿಷ್ಠ ಕೋಟೆಯೊಂದನ್ನು ನಿರ್ಮಿಸಿದ್ದರು. ಇವರ ಉರುಳಿನಿಂದ ತಪ್ಪಿಸಿಕೊಳ್ಳಲು ಬೆಂಗಾಲ್​ ರೇಡರ್​ಗಳು ಸಂಪೂರ್ಣ ವಿಫಲರಾದರು. ಜಿದ್ದಿಗೆ ಬಿದ್ದವರಂತೆ ಟ್ಯಾಕ್​ ಮಾಡಿದ ಉಭಯ ಆಟಗಾರರು ಅಂತಿಮವಾಗಿ ತಲಾ 6 ವೈಯಕ್ತಿಕ ಅಂಕಗಳನ್ನು ಗಳಿಸಿದರು. ಮತೋರ್ವ ಡಿಫೆಂಡರ್​ ಮೋಹಿತ್​ 3 ಅಂಕ ಪಡೆದರು. ರೇಡರ್​ ಅಶು ಮಲಿಕ್​ ಕೂಡ 3 ಅಂಕ ಗಳಿಸಿದರು.​

Exit mobile version