Site icon Vistara News

Pro Kabaddi Final: ಕೆಲವೇ ಕ್ಷಣದಲ್ಲಿ ಫೈನಲ್; ಚೊಚ್ಚಲ ಪ್ರಶಸ್ತಿಗಾಗಿ ಪುಣೇರಿ-ಹರಿಯಾಣ ಫೈಟ್​

Pro Kabaddi Final

ಹೈದರಾಬಾದ್​: 10ನೇ ಆವೃತ್ತಿ ಪ್ರೊ ಕಬಡ್ಡಿಯ ಫೈನಲ್(Pro Kabaddi Final)​ ಪಂದ್ಯ ಇನ್ನೇನು ಕೆಲವೇ ಕ್ಷಣದಲ್ಲಿ ಆರಂಭಗೊಳ್ಳಲಿದೆ. ಹೈದರಾಬಾದ್‌ನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುವ ಪ್ರಶಸ್ತಿ ಕಾಳಗದಲ್ಲಿ ಪುಣೇರಿ ಪಲ್ಟಾನ್‌(Puneri Paltan) ಮತ್ತು ಹರಿಯಾಣ ಸ್ಟೀಲರ್ಸ್‌(Haryana Steelers) ಕಾದಾಟ ನಡೆಸಲಿದೆ. ಇಲ್ಲಿ ಯಾರೇ ಗೆದ್ದರು ಕೂಡ ಚೊಚ್ಚಲ ಪ್ರಶಸ್ತಿ ಗೆದ್ದ ಸಾಧನೆ ಮಾಡಲಿದ್ದಾರೆ.

ಬುಧವಾರ ನಡೆದಿದ್ದ 2 ಸೆಮಿಫೈನಲ್‌ನಲ್ಲಿ ಪುಣೆ ತಂಡ 3 ಬಾರಿ ಚಾಂಪಿಯನ್ ಪಾಟ್ನಾ ಪೈರೇಟ್ಸ್‌ ವಿರುದ್ಧ 37-21 ಅಂಕಗಳಿಂದ, ಹರ್ಯಾಣ ಹಾಲಿ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ 31-27 ಅಂಕಗಳಿಂದ ಗೆಲುವು ಸಾಧಿಸಿ ಪ್ರಶಸ್ತಿ ಸುತ್ತಿಗೇರಿದವು.

ಪುಣೇರಿ ತಂಡ ಈ ಆವೃತ್ತಿಯ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡಿ ಆಡಿದ 22 ಪಂದ್ಯಗಳಲ್ಲಿ 17 ಗೆಲುವುಗಳೊಂದಿಗೆ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿತ್ತು. ಕನ್ನಡಿಗ ಕೋಚ್‌ ಬಿ.ಸಿ. ರಮೇಶ್‌ ಮಾರ್ಗ ದರ್ಶನವೂ ಕೂಡ ಈ ತಂಡದ ಯಶಸ್ಸಿಗೆ ಪ್ರಮುಖ ಕಾರಣ. ನಾಯಕ ಅಸ್ಲಾಂ ಇನಾಮ್ದಾರ್‌, ಪಂಕಜ್​ ಅಭಿನೇಶ್​, ಮೊಹಮ್ಮದ್ರೇಜಾ ಚಿಯಾನೆಹ್ ಮತ್ತು ಮೋಹಿತ್​ ತಂಡದ ಪ್ರಮುಖ ಆಟಗಾರರಾಗಿದ್ದಾರೆ.

ಇದನ್ನೂ ಓದಿ Pro Kabaddi: ಹಾಲಿ ಚಾಂಪಿಯನ್​ ಜೈಪುರಕ್ಕೆ ಸೋಲು; ಪುಣೇರಿ-ಹರ್ಯಾಣ ಫೈನಲ್​ ಫೈಟ್​

ಹರಿಯಾಣ ತಂಡ ಇದೇ ಮೊದಲ ಬಾರಿಗೆ ಫೈನಲ್​ ಪಂದ್ಯ ಆಡುತ್ತಿದೆ. ಜತೆಗೆ ಹಾಲಿ ಚಾಂಪಿಯನ್​ ಜೈಪುರಕ್ಕೆ ಸೋಲುಣಿಸಿದ್ದು ಕೂಡ ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಪುಣೇರಿ ಪಲ್ಟಾನ್​ಗೆ ಇದು ಸತತ ಎರಡನೇ ಫೈನಲ್​ ಪಂದ್ಯ. ಕಳೆದ ಬಾರಿಯೂ ಫೈನಲ್​ ಪ್ರವೇಶಿಸಿತ್ತು. ಆದರೆ ಇಲ್ಲಿ ಸೋತು ರನ್ನರ್​ ಅಪ್​ ಸ್ಥಾನಕ್ಕೆ ತೃತ್ತಿಪಟ್ಟಿತ್ತು. ಫೈನಲ್‌ನಲ್ಲಿ ಪ್ರಶಸ್ತಿ ಗೆದ್ದ ತಂಡ 3 ಕೋಟಿ ರೂ. ನಗದು ಪುರಸ್ಕಾರ ಬಾಚಿಕೊಳ್ಳಲಿದೆ. ರನ್ನರ್‌ ಅಪ್‌ ತಂಡಕ್ಕೆ 1.8 ಕೋಟಿ ರೂ. ಬಹುಮಾನ ಲಭಿಸಲಿದೆ.

ಮುಖಾಮುಖಿ


ಒಟ್ಟು ಪಂದ್ಯಗಳು 14

ಪುಣೇರಿ ಜಯ 8

ಹರಿಯಾಣ ಜಯ 5

ಪಂದ್ಯ ಟೈ 1

Exit mobile version