ಅಹ್ಮದಾಬಾದ್: ಇಲ್ಲಿನ ಇಕೆಎ ಅರೆನಾದಲ್ಲಿ ಶನಿವಾರ (ಡಿಸೆಂಬರ್ 02) ನಡೆದ ಪ್ರೊ ಕಬಡ್ಡಿ ಲೀಗ್ 10ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡ ತೆಲುಗು ಟೈಟಾನ್ಸ್ ವಿರುದ್ಧ 38-32 ಅಂಕಗಳ ಭರ್ಜರಿ ಜಯ ದಾಖಲಿಸಿದೆ. ಜಯಂಟ್ಸ್ ತಂಡದ ರೈಡರ್ ಸೋನು 11 ಟಚ್ ಪಾಯಿಂಟ್ಸ್ ಗಳಿಸಿದರೆ, ರಾಕೇಶ್ 5 ಟಚ್ ಪಾಯಿಂಟ್ಸ್ ಗಳಿಸಿದರು. ಏತನ್ಮಧ್ಯೆ, ತೆಲುಗು ಟೈಟಾನ್ಸ್ ನಾಯಕ ಪವನ್ ಶೆರಾವತ್ ಸೂಪರ್ 10 ಮೂಲಕ ಪ್ರೊ ಕಬಡ್ಡಿ ಲೀಗ್ಗೆ ಭರ್ಜರಿ ಪ್ರವೇಶ ಪಡೆದರು.
The Giants start the BLOCKBUSTER #PKLSeason10 with a win 🤩
— ProKabaddi (@ProKabaddi) December 2, 2023
Score at full-time 👉 38-32
Stay tuned for the second match. Watch it LIVE on the Star Sports Channel and for free on the Disney+Hotstar mobile app 📲#GGvTT #ProKabaddi #HarSaansMeinKabaddi pic.twitter.com/HjLxvbPgF6
ಪಂದ್ಯದ ಆರಂಭದ ನಿಮಿಷಗಳಲ್ಲಿ ತೆಲುಗು ಟೈಟಾನ್ಸ್ 4-3ರ ಮುನ್ನಡೆ ಸಾಧಿಸಿತು. ಆದರೆ 7ನೇ ನಿಮಿಷದಲ್ಲಿ ಜಯಂಟ್ಸ್ 5-5ರ ಸಮಬಲ ಸಾಧಿಸಿತು. ಇದಾದ ಕೆಲವೇ ಕ್ಷಣಗಳಲ್ಲಿ ರಾಕೇಶ್ ಅದ್ಭುತ ರೈಡ್ ಬಾರಿಸಿ ಜಯಂಟ್ಸ್ 6-5ರಲ್ಲಿ ಮುನ್ನಡೆ ಸಾಧಿಸಿದರು. ರಾಕೇಶ್ ಮತ್ತೊಂದು ರೈಡ್ ಮಾಡಲು ಪ್ರಯತ್ನಿಸಿದರು, ಆದರೆ ಟೈಟಾನ್ಸ್ ಅವರನ್ನು ನಿಭಾಯಿಸಿ 10 ನೇ ನಿಮಿಷದಲ್ಲಿ 8-6 ರಲ್ಲಿ ಮುನ್ನಡೆ ಸಾಧಿಸಿತು.
14ನೇ ನಿಮಿಷದಲ್ಲಿ ತೆಲುಗು ಟೈಟಾನ್ಸ್ ತಂಡ 11-7ರ ಮುನ್ನಡೆ ಕಾಯ್ದುಕೊಂಡಿತು. 15ನೇ ನಿಮಿಷದಲ್ಲಿ ಇರಾನಿನ ಫಝೆಲ್ ಅತ್ರಾಚಲಿ ಮತ್ತು ಮೊಹಮ್ಮದ್ ನಬಿಬಕ್ಷ್ ಜೋಡಿ ಪವನ್ ಶೆರಾವತ್ ಅವರನ್ನು ಸೂಪರ್ ಟ್ಯಾಕಲ್ ಮಾಡಿ ಮಣಿಸಿ 12-9ರಲ್ಲಿ ಮುನ್ನಡೆ ಸಿಗುವಂತೆ ಮಾಡಿದರು . ಇದಾದ ಕೆಲವೇ ಕ್ಷಣಗಳಲ್ಲಿ ಜಯಂಟ್ಸ್ ತಂಡ ಸೆಹ್ರಾವತ್ ಅವರನ್ನು ಹಿಡಿದು 13-13ರಲ್ಲಿ ಸಮಬಲ ಸಾಧಿಸಿತು. ಮೊದಲಾರ್ಧದ ಅಂತ್ಯಕ್ಕೆ ಟೈಟಾನ್ಸ್ 16-13 ಅಂಕಗಳ ಮುನ್ನಡೆ ಸಾಧಿಸಿತ್ತು.
ದ್ವಿತೀಯಾರ್ಧದ ಆರಂಭದ ನಿಮಿಷದಲ್ಲಿ ಸೋನು ಗಳಿಸಿದ ಪಾಯಿಂಟ್ನಿಂದ ಆತಿಥೇಯ ತಂಡ 18-16ರಲ್ಲಿ ಮುನ್ನಡೆ ಸಾಧಿಸಿತು. 23ನೇ ನಿಮಿಷದಲ್ಲಿ ಎದುರಾಳಿಯನ್ನು ಆಲ್ ಔಟ್ ಮಾಡಿದ ಆತಿಥೇಯ ತಂಡ 22-18ರಲ್ಲಿ ಮುನ್ನಡೆ ಸಾಧಿಸಿತು. 27ನೇ ನಿಮಿಷದಲ್ಲಿ ಸೋನು ಅಂಕ ಗಳಿಸಿ ಜಯಂಟ್ಸ್ ತಂಡಕ್ಕೆ 26-19ರಲ್ಲಿ ಮುನ್ನಡೆ ಕಲ್ಪಿಸಿಕೊಟ್ಟರು.
ಇದನ್ನೂ ಓದಿ : AB de Villiers : ನನ್ನ ಹೃದಯ ಆರ್ಸಿಬಿಯಲ್ಲೇ ಇದೆ ಎಂದ ಮಿಸ್ಟರ್ 360
33ನೇ ನಿಮಿಷದಲ್ಲಿ ಟೈಟಾನ್ಸ್ ತಂಡದ ರಾಬಿನ್ ಚೌಧರಿ ಗಳಿಸಿದ ಅಂಕಗಳಿಂದ ಟೈಟಾನ್ಸ್ ತಂಡ ಮೇಲುಗೈ ಸಾಧಿಸಿತು. ವಕೆಲವೇ ಕ್ಷಣಗಳಲ್ಲಿ ಸೆಹ್ರಾವತ್ ರೈಡ್ ಮಾಡಿ ಜಯಂಟ್ಸ್ ತಂಡಕ್ಕೆ 30-28ರಲ್ಲಿ ಮುನ್ನಡೆ ತಂದರು. ಆದರೆ, 38ನೇ ನಿಮಿಷದಲ್ಲಿ ಗುಜರಾತ್ನ ಸೌರವ್ ಗುಲಿಯಾ ಅವರು ಟೈಟನ್ಸ್ ತಂಡವನ್ನು ಆಲ್ಔಟ್ ಮಾಡಿದರು. ತವರು ತಂಡವು ಕೊನೆಯ ಎರಡು ನಿಮಿಷಗಳಲ್ಲಿ ತಮ್ಮ ಮುನ್ನಡೆಯನ್ನು ಕಾಯ್ದುಕೊಂಡು ಗೆಲುವು ಸಾಧಿಸಿತು.
ಯು ಮುಂಬಾ ತಂಡಕ್ಕೆ ಜಯ
A tough battle but the 𝐌𝐮𝐦𝐛𝐚 𝐖𝐚𝐥𝐥 was unbreakable tonight 🤜🤛@umumba clinch their first victory of #PKLSeason10 🤩
— ProKabaddi (@ProKabaddi) December 2, 2023
Stay tuned for more action tomorrow at 7:30 PM onwards, LIVE on the Star Sports Network and for free on the Disney+Hotstar mobile app 📲 pic.twitter.com/76LFOOCiiY
ದಿನದ ಎರಡನೇ ಪಂದ್ಯದಲ್ಲಿ ಯುಪಿ ಯೋಧಾಸ್ ವಿರುದ್ಧ 34-31 ಅಂಕಗಳ ಜಯದೊಂದಿಗೆ ಯು ಮುಂಬಾ ತನ್ನ ಪ್ರೊ ಕಬಡ್ಡಿ ಲೀಗ್ 2023 ಅಭಿಯಾನವನ್ನು ಪ್ರಾರಂಭಿಸಿತು. ಯು ಮುಂಬಾದ ಇರಾನಿನ ರೈಡರ್ ಅಮಿಮೊಹಮ್ಮದ್ ಜಫರ್ದಾನೇಶ್ 11 ರೈಡ್ ಅಂಕಗಳೊಂದಿಗೆ ಗಮನ ಸೆಳೆದರು. ಡಿಫೆಂಡರ್ ರಿಂಕು 7 ಟ್ಯಾಕಲ್ ಪಾಯಿಂಟ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಪಂದ್ಯ ಮುಗಿಯಲು ಹತ್ತು ನಿಮಿಷಗಳು ಬಾಕಿ ಇರುವಾಗ ಯುಪಿ ಯೋಧಾಸ್ 4 ಅಂಕ ಹಿಂದೆ ಬಿದ್ದಿತ್ತು. ಜಫರ್ದಾನೇಶ್ ಈ ಋತುವಿನ ಮೊದಲ ಸೂಪರ್ 10 ಅನ್ನು ದಾಖಲಿಸಿದರೆ, ಸುರಿಂದರ್ ಗಿಲ್ ಯುಪಿ ಯೋಧಾಸ್ ಪರ ಉತ್ತಮ ಪ್ರದರ್ಶನ ನೀಡಿದರು. ಯುಪಿ ಯೋಧಾಸ್ ಪುನರಾಗಮನ ಮಾಡಲು ಸಾಧ್ಯವಾಗಲಿಲ್ಲ ಮತ್ತು ಯು ಮುಂಬಾ ಆರಾಮದಾಯಕ ಗೆಲುವಿನೊಂದಿಗೆ ಹೊರಬಂದಿತು.