ಪುಣೆ: ಹಾಲಿ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್(Jaipur Pink Panthers) ತಂಡ ತನ್ನ ಖ್ಯಾತಿಗೆ ತಕ್ಕಂತೆ ಆಡುವ ಮೂಲಕ ಯುಪಿ ಯೋಧಾಸ್(UP Yoddhas) ವಿರುದ್ಧ 41-24 ಅಂತರದ ಬೃಹತ್ ಮೊತ್ತದ ಗೆಲುವು ಸಾಧಿಸಿದೆ. ಗೆಲುವಿನ ಅಂತರ 17 ಅಂಕ. ಯುಪಿ ಆಟಗಾರರು ಎಲ್ಲ ವಿಭಾಗದಲ್ಲಿಯೂ ವಿಫಲರಾದರು. 13 ರೇಡಿಂಗ್ ಅಂಕ ಗಳಿಸಿದ ಅರ್ಜುನ್ ಜೈಪುರ ತಂಡದ ಗೆಲುವಿನ ರೂವಾರಿ ಎನಿಸಿದರು.
पिंक पैंथर्स की धमाकेदार तीसरी जीत 🔥
— ProKabaddi (@ProKabaddi) December 20, 2023
यूपी योद्धाज़ को 4️⃣1️⃣-2️⃣4️⃣ से हराकर हासिल की बड़ी जीत 💪🩷#ProKabaddiLeague #ProKabaddi #PKLSeason10 #PKL #HarSaansMeinKabaddi #JPPvUP #JaipurPinkPanthers #UPYoddhas pic.twitter.com/2KoAbFnaxA
ಶ್ರೀ ಶಿವ ಛತ್ರಪತಿ ಕ್ರೀಡಾ ಸಂಕೀರ್ಣ, ಪುಣೆಯಲ್ಲಿ ನಡೆದ ಬುಧವಾರದ ಮೊದಲ ಪ್ರೊ ಕಬಡ್ಡಿ(Pro Kabaddi) ಪಂದ್ಯದಲ್ಲಿ ಸರ್ವಾಂಗೀಣ ಪ್ರದರ್ಶನ ತೋರಿದ ಜೈಪುರ ತಂಡ ಎದುರಾಳಿ ಯುಪಿ ತಂಡವನ್ನು ಮಣಿಸುವಲ್ಲಿ ಯಶಸ್ಸು ಸಾಧಿಸಿತು. ಪಂದ್ಯದ ಆರಂಭದಿಂದಲೇ ಬಿರುಸಿನ ಆಟವಾಡಿದ ಜೈಪುರ ಮೊದಲಾರ್ಥದಲ್ಲಿ 25-9 ಅಂಕದ ಮುನ್ನಡೆ ಸಾಧಿಸಿ ಯೋಧಾ ಆಟಗಾರರನ್ನು ಉಸಿರು ಗಟ್ಟಿಸುವಂತೆ ಮಾಡಿದರು.
𝘈𝘳𝘫𝘶𝘯 🏹 𝘬𝘢 𝘯𝘪𝘴𝘩𝘢𝘯𝘢 is always on 🎯#ProKabaddiLeague #ProKabaddi #PKLSeason10 #PKL #HarSaansMeinKabaddi #JPPvUP #JaipurPinkPanthers #UPYoddhas pic.twitter.com/VpUXbptRtG
— ProKabaddi (@ProKabaddi) December 20, 2023
ದ್ವಿತಿಯಾರ್ಧದ 8 ನಿಮಿಷದ ಆಟ ಬಾಕಿ ಇರುವಾಗ ಪುಟಿದೆದ್ದ ಯುಪಿ ಆಟಗಾರರು ಸತತವಾಗಿ ಅಂಕ ಗಳಿಸಿ ಒಂದು ಬಾರಿ ಜೈಪುರವನ್ನು ಆಲ್ಔಟ್ ಮಾಡಿದರು. ಆದರೆ ಮತ್ತೆ ಕುಸಿತ ಕಂಡು ದೊಡ್ಡ ಅಂತರದ ಸೋಲು ಕಂಡರು. ತಂಡದ ನಾಯಕ ಪ್ರದೀಪ್ ನರ್ವಾಲ್ ಅವರ ಘೋರ ವೈಫಲ್ಯ ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು.
ಇದನ್ನೂ ಓದಿ Pro Kabaddi: ರೋಚಕ ಪಂದ್ಯದಲ್ಲಿ ಒಂದು ಅಂಕದ ಅಂತರದಿಂದ ಗೆದ್ದ ಪ್ಯಾಂಥರ್ಸ್
Prowl and tackle like these Panthers 🔥
— ProKabaddi (@ProKabaddi) December 20, 2023
Lucky Sharma 💪#ProKabaddiLeague #ProKabaddi #PKLSeason10 #PKL #HarSaansMeinKabaddi #JPPvUP #JaipurPinkPanthers #UPYoddhas pic.twitter.com/L3rjlJCsEK
ಒಟ್ಟು 16 ಬಾರಿ ಎದುರಾಳಿ ಕೋಟೆಗೆ ನುಗ್ಗಿದ ಪ್ರದೀಪ್ ನರ್ವಾಲ್ ಅವರು ಗಳಿಸಿದ್ದು ಕೇವಲ 6 ಅಂಕ ಮಾತ್ರ. ಮತೋರ್ವ ತಂಡದ ಸ್ಟಾರ್ ರೇಡರ್ ಸುರೇಂದರ್ ಗಿಲ್(2) ಕೂಡ ಈ ಪಂದ್ಯದಲ್ಲಿ ವಿಫಲವಾದದ್ದು ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸಿತು.
ಮಿಂಚಿದ ಅರ್ಜುನ್
ಪ್ರತಿ ಪಂದ್ಯದಲ್ಲಿಯೂ ಉತ್ತಮ ರೇಡಿಂಗ್ ಪ್ರದರ್ಶನ ತೋರುವ ಮೂಲಕ ಗಮನ ಸೆಳೆಯುವ ಜೈಪುರ ತಂಡದ ಅರ್ಜುನ್ ದೇಸ್ವಾಲ್ ಈ ಪಂದ್ಯದಲ್ಲಿಯೂ ಸೂಪರ್ 10 ರೇಡಿಂಗ್ ಅಂಕ ಗಳಿಸುವ ಮೂಲಕ ಮಿಂಚಿದರು. ಇವರಿಗೆ ತಂಡದ ಸಹ ಆಟಗಾರರಾದ ನಾಯಕ ಸುನೀಲ್(3), ಕನ್ನಡಿಗ ಅಭಿಷೇಕ್ ಗೌಡ(3), ವಿ ಅಜಿತ್(4) ಮತ್ತು ರೆಜಾ ಮಿರಬಗೇರಿ(4) ಅಂಕ ಗಳಿಸಿ ಉತ್ತಮ ಸಾಥ್ ನೀಡಿದರು.
Q: How to stop Arjun Deshwal from scoring? 🤔
— ProKabaddi (@ProKabaddi) December 20, 2023
A: Next question please 😉#ProKabaddiLeague #ProKabaddi #PKLSeason10 #PKL #HarSaansMeinKabaddi #JPPvUP #JaipurPinkPanthers #UPYoddhas pic.twitter.com/8vV2AV4DCf