Site icon Vistara News

Pro Kabaddi: ರೋಚಕ ಪಂದ್ಯದಲ್ಲಿ ಒಂದು ಅಂಕದ ಅಂತರದಿಂದ ಗೆದ್ದ ಪ್ಯಾಂಥರ್ಸ್

Patna Pirates vs Jaipur Pink Panthers, Pro Kabaddi League

ಪುಣೆ: ಅತ್ಯಂತ ಜಿದ್ದಾಜಿದ್ದಿನಿಂದ ನಡೆದ ಭಾನುವಾರದ ಮೊದಲ ಪ್ರೊ ಕಬಡ್ಡಿ(Pro Kabaddi) ಲೀಗ್​ನ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಜೈಪುರ ಪಿಂಕ್​ ಪ್ಯಾಂಥರ್ಸ್​ ತಂಡ ಮಾಜಿ ಚಾಂಪಿಯನ್​ ಪಾಟ್ನಾ ಪೈರೆಟ್ಸ್‌ ವಿರುದ್ಧ 1 ಅಂಕಗಳ ರೋಚಕ ಗೆಲುವು ಸಾಧಿಸಿದೆ. ಗೆಲುವಿನ ಅಂತರ 29-28.

ಶ್ರೀ ಶಿವ ಛತ್ರಪತಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್​ನಲ್ಲಿ ನಡೆದ ಈ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್​ನ ವಿ. ಅಜಿತ್​ ರೇಡಿಂಗ್​ ಸುರಿಮಳೆ ಸುರಿಸಿ ಬರೋಬ್ಬರಿ 16 ಅಂಕ ಗಳಿಸಿದರು. ಅವರ ರೇಡಿಂಗ್​ ದಾಳಿಯನ್ನು ತಡೆದು ನಿಲ್ಲಿಸುವಲ್ಲಿ ಎದುರಾಳಿ ಪಾಟ್ನಾ ಡಿಫೆಂಡರ್​ಗಳು ಸಂಪೂರ್ಣವಾಗಿ ವಿಫಲರಾದರು. ಒಟ್ಟು 20 ರೇಡ್​ ಮಾಡಿದರು. ಆದರೆ, ತಂಡದ ಸ್ಟಾರ್​ ಮತ್ತು ಅನುಭವಿ ರೇಡರ್​ ಅರ್ಜುನ್​ ಈ ಪಂದ್ಯದಲ್ಲಿ ತಮ್ಮ ಚಮತ್ಕಾರ ತೋರುವಲ್ಲಿ ಹಿನ್ನಡೆ ಅನುಭವಿಸಿದರು. ಅವರು ಕೇವಲ ಮೂರು ಅಂಕಕ್ಕೆ ಸೀಮಿತರಾದರು. ಡಿಫೆಂಡರ್​ ರೆಜಾ ಮಿರಬಗೇರಿ ಕೂಡ ಮೂರು ಅಂಕ ಕಲೆಹಾಕಿದರು.

ಪಾಟ್ನಾ ಪರ ಪ್ರಮುಖ ರೇಡರ್​ ಸಚಿನ್​ ಮತ್ತು ಸಂದೀಪ್​ ತಲಾ 7 ಅಂಕ ಗಳಿಸಿದರು. ಉಭಯ ಆಟಗಾರರು ಗೆಲುವಿಗಾಗಿ ಶತ ಪ್ರಯತ್ನ ನಡೆಸಿದರೂ ಅಂತಿಮ ಹಂತದಲ್ಲಿ ಒಂದು ಅಂಕದ ಹಿನ್ನಡೆಯಿಂದ ಸೋಲು ಕಂಡರು. ಆದರೂ ತಂಡ ಹೋರಾಟ ಅತ್ಯಂತ ರೋಚಕವಾಗಿತ್ತು. ಸುಧಾಕರ್​ 3, ಕೃಷ್ಣ ಮತ್ತು ಅಂಕಿತ್​ ತಲಾ 2 ಅಂಕ ಗಳಿಸಿದರು.

ಇದನ್ನೂ ಓದಿ Pro Kabaddi: 5ನೇ ಪ್ರಯತ್ನದಲ್ಲಿ ಗೆಲುವಿನ ಖಾತೆ ತೆರೆದ ಬೆಂಗಳೂರು ಬುಲ್ಸ್​

ಮುಂಬಾಗೆ ಗೆಲುವು

ದಿನದ ಮತ್ತೊಂದು ಪಂದ್ಯದಲ್ಲಿ ಯು ಮುಂಬಾ ತಂಡ ತಮಿಳ್​ ತಲೈವಾಸ್​ ವಿರುದ್ಧ 46-33 ಅಂಕಗಳಿಂದ ಗೆದ್ದು ಬೀಗಿತು. ಇದು ಮುಂಬೈಗೆ ಒಳಿದ ಮೂರನೇ ಗೆಲುವು. ಈ ಪಂದ್ಯದಲ್ಲಿ ರೇಡಿಂಗ್​ ಮತ್ತು ಡಿಫೆಂಡಿಂಗ್​ ವಿಭಾಗದಲ್ಲಿ ಮುಂಬಾ ಉತ್ತಮ ಪ್ರದರ್ಶನ ತೋರ್ಪಡಿಸಿತು.

ಮುಂಬೈ ಪರ ಗುಮಾನ್​ ಸಿಂಗ್​(10), ಅಮೀರ್ಮೊಹಮ್ಮದ್ ಜಫರ್ದಾನೇಶ್(10), ವಿಶ್ವಂತ್(5), ಸೋಂಬಿರ್(5) ಮತ್ತು ರಿಂಕು(3) ಅಂಕ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ತಮಿಳ್​ ಪರ ನರೇಂದರ್​(10) ಅಜಿಂಕ್ಯಾ ಪವಾರ್​(7) ಸಾಗರ್​ ಮತ್ತು ನಾಯಕ ಸಾಹಿಲ್ ಗುಲಿಯಾ ತಲಾ 5 ಅಂಕ ಗಳಿಸಿದರು.

Exit mobile version